ETV Bharat / bharat

ಜಿಎಸ್​​ಟಿ ವ್ಯಾಪ್ತಿಗೆ ಪೆಟ್ರೋಲ್​,ಡೀಸೆಲ್​? ಶುಕ್ರವಾರ ಮಹತ್ವದ ನಿರ್ಧಾರ - ಕೇಂದ್ರ ಸರ್ಕಾರ

ಬರುವ ಶುಕ್ರವಾರದಂದು 45ನೇ ಜಿಎಸ್‌ಟಿ ಕೌನ್ಸಿಲ್​ ಸಭೆ ನಡೆಯಲಿದ್ದು, ಈ ವೇಳೆ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್​ಟಿ ವ್ಯಾಪ್ತಿಗೆ ತರುವ ಬಗ್ಗೆ ಮಹತ್ವದ ಚರ್ಚೆ ನಡೆಯುವ ಸಾಧ್ಯತೆ ಇದೆ.

Petrol price
Petrol price
author img

By

Published : Sep 14, 2021, 9:54 PM IST

ನವದೆಹಲಿ: ಸತತವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್​-ಡೀಸೆಲ್​​ನಿಂದ ಗ್ರಾಹಕರ ಜೇಬಿಗೆ ಇನ್ನಿಲ್ಲದ ಕತ್ತರಿ ಬೀಳುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬರುವ ಶುಕ್ರವಾರ ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.

ಶುಕ್ರವಾರದಂದು 45ನೇ GST ಕೌನ್ಸಿಲ್​ ಸಭೆ ನಡೆಯಲಿದ್ದು, ಪೆಟ್ರೋಲ್​, ಡೀಸೆಲ್​​​ ಸೇರಿದಂತೆ ಇತರೆ ಪೆಟ್ರೋಲಿಯಂ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆ(GST) ವ್ಯಾಪ್ತಿಗೊಳಪಡಿಸುವ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಒಂದೇ ರಾಷ್ಟ್ರೀಯ ದರದ ಅಡಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆ ಪರಿಗಣಿಸುವ ಸಾಧ್ಯತೆ ದಟ್ಟವಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅಧ್ಯಕ್ಷತೆಯಲ್ಲಿ ಈ ಕೌನ್ಸಿಲ್​ ಸಭೆ ನಡೆಯಲಿದ್ದು, ಬಹುದೊಡ್ಡ ಬದಲಾವಣೆ ಬರುವ ಸಾಧ್ಯತೆ ಇದೆ.

ಇದನ್ನೂ ಓದಿ: ದೇಶದ ಕ್ರೀಡಾ ವ್ಯವಸ್ಥೆಯ ವಿರುದ್ಧ ಟೀಕೆ ; ಜಾವೆಲಿನ್ ಸ್ಟಾರ್ ನೀರಜ್ ಚೋಪ್ರಾ ತರಬೇತುದಾರ ಉವೆ ಹಾನ್‌ ವಜಾ

ಪೆಟ್ರೋಲ್​​-ಡೀಸೆಲ್​​ ಜಿಎಸ್​ಟಿ ವ್ಯಾಪ್ತಿಗೆ ತರುವಂತೆ ಈಗಾಗಲೇ ಜಿಎಸ್​ಟಿ ಮಂಡಳಿಗೆ ಕೇರಳ ಹೈಕೋರ್ಟ್ ಕೂಡ ಸೂಚನೆ ನೀಡಿದ್ದು, ಇದೀಗ ಚರ್ಚೆಗೊಳಪಡುವ ಸಾಧ್ಯತೆ ಇದೆ. ದೇಶದಲ್ಲಿ ಸತತವಾಗಿ ತೈಲ ಬೆಲೆ ಏರಿಕೆಯಾಗುತ್ತಿರುವ ಕಾರಣ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು, ಜನಸಾಮಾನ್ಯರು ಹರಿಹಾಯ್ದಿದ್ದು, ಈಗಾಗಲೇ ಎಲ್ಲ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 100ರ ಗಡಿ ದಾಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.