ನವದೆಹಲಿ: ಇಂಧನ ಬೆಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಗಮನಾರ್ಹ ಮಟ್ಟದ ಬದಲಾವಣೆಗಳೇನೂ ಆಗುತ್ತಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಂದು ಸ್ಥಿರವಾಗಿವೆ.
ಮೇ 29ರಂದು ಮುಂಬೈ ಮಹಾನಗರದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಪೆಟ್ರೋಲ್ ಲೀ. ಬೆಲೆ 100ರ ಗಡಿ ದಾಟಿತ್ತು. ಇದಾದ ಬಳಿಕ ತೈಲ ಬೆಲೆಯಲ್ಲಿ ನಿರಂತರ ಏರಿಕೆ ಕಂಡುಬಂದಿತ್ತು. ಅದರೆ ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಹೆಚ್ಚಳ ಕಂಡುಬಂದಿಲ್ಲ.
ಕಳೆದೊಂದು ತಿಂಗಳಿನಿಂದ ಯಾವುದೇ ಬದಲಾವಣೆ ಕಾಣದ ತೈಲ ಬೆಲೆಯಲ್ಲಿ ಆಗಸ್ಟ್ 22ರಂದು ಸ್ವಲ್ಪ ಮಟ್ಟಿಗೆ ಬದಲಾವಣೆ ಕಂಡುಬಂದಿತ್ತು. ಪ್ರತಿ ಲೀಟರ್ ಪೆಟ್ರೋಲ್ಗೆ 15ರಿಂದ 20 ಪೈಸೆ ಹಾಗೂ ಡೀಸೆಲ್ನ ಪ್ರತಿ ಲೀಟರ್ಗೆ 18ರಿಂದ 20 ಪೈಸೆ ಇಳಿಕೆಯಾಗಿತ್ತು.
ಇದನ್ನೂ ಓದಿ: Jammu Encounter: ಕಣಿವೆನಾಡಿನಲ್ಲಿ ಉಗ್ರರ ವಿರುದ್ಧ ನಿರಂತರ ಸಮರ; ಇಲ್ಲಿಯವರೆಗೆ ಹತರಾದವರಿಷ್ಟು..
ಈಗ ಮೇಲ್ನೋಟಕ್ಕೆ ಅದೇ ಬೆಲೆ ಮುಂದುವರೆದಿದೆ. ಬೆಂಗಳೂರೂ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಂತಿದೆ.. (ಒಂದು ಲೀಟರ್ಗೆ)
ನಗರ | ಪೆಟ್ರೋಲ್ ಬೆಲೆ (ರೂ.ಗಳಲ್ಲಿ) | ಡಿಸೇಲ್ ಬೆಲೆ (ರೂ.ಗಳಲ್ಲಿ) |
ಬೆಂಗಳೂರು | 104.98 | 94.34 |
ಮುಂಬೈ | 107.52 | 96.48 |
ದೆಹಲಿ | 101.49 | 88.92 |
ಚೆನ್ನೈ | 99.20 | 93.52 |
ಕೋಲ್ಕತಾ | 101.82 | 91.98 |
ಹೈದರಾಬಾದ್ | 105.54 | 96.99 |