ನವದೆಹಲಿ: ನವೆಂಬರ್ 9 ರಂದು ಹಿರಿಯ ನ್ಯಾಯಾಧೀಶ ಜಸ್ಟಿಸ್ ಡಿವೈ ಚಂದ್ರಚೂಡ್ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸದಂತೆ ತಡೆಯಬೇಕೆಂದು ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ. ಇಡೀ ಅರ್ಜಿಯು ತಪ್ಪು ಗ್ರಹಿಕೆಗಳಿಂದ ಕೂಡಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವಕೀಲರ ವಾದ ಆಲಿಸಿದ ನಂತರ, ಇದರ ವಿಚಾರಣೆ ನಡೆಸಲು ಯಾವುದೇ ಕಾರಣವಿದ್ದಂತೆ ಕಾಣುತ್ತಿಲ್ಲ. ಇಡೀ ಅರ್ಜಿಯನ್ನು ತಪ್ಪಾಗಿ ಗ್ರಹಿಸಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ ಎಂದು ಸುಪ್ರೀಂ ಕೋರ್ಟ್‌ನ ಪೀಠ ಹೇಳಿದೆ. ಗುರುವಾರದ ಬದಲಾಗಿ ಇಂದೇ ಅರ್ಜಿಯನ್ನು ಆಲಿಸಲು ಇದಕ್ಕೂ ಮುನ್ನ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ನೇತೃತ್ವದ ಪೀಠವು ಒಪ್ಪಿಕೊಂಡಿತ್ತು.
ನನ್ನ ಸಹೋದರ ಮತ್ತು ಸಹೋದರಿಯ (ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಮತ್ತು ಬೇಲಾ ಎಂ ತ್ರಿವೇದಿ) ಪೇಪರ್ ಬುಕ್ಸ್ ತನ್ನಿ. ನಾವು ಇಂದು ಮಧ್ಯಾಹ್ನ 12:45 ಕ್ಕೆ ವಿಷಯ ಪಟ್ಟಿ ಮಾಡುತ್ತೇವೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಹೇಳಿದ್ದರು.
ಸಿಜೆಐ-ನಿಯೋಜಿತ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ನವೆಂಬರ್ 9 ರಂದು ಭಾರತದ 50 ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮುರ್ಸಲಿನ್ ಅಸಿಜಿತ್ ಶೇಖ್ ಎಂಬುವವರು ಈ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಸಂಸದರು, ಶಾಸಕರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್