ETV Bharat / bharat

ನರೇಂದ್ರ ಗಿರಿ ನಿಗೂಢ ಸಾವಿನ ತನಿಖೆಯನ್ನು CBIಗೆ ವಹಿಸಬೇಕು: ಕೋರ್ಟ್ ಮೊರೆ ಹೋದ ಸುನಿಲ್ ಚೌಧರಿ - ಅಲಹಾಬಾದ್ ಹೈಕೋರ್ಟ್

ಮಹಾಂತ್ ನರೇಂದ್ರ ಗಿರಿ ಅವರ ನಿಗೂಢ ಸಾವಿನ ಕುರಿತು ಸಿಬಿಐ ತನಿಖೆ ನಡೆಸುವಂತೆ ಕೋರಿ ವಕೀಲ ಸುನೀಲ್ ಚೌಧರಿ ಅಲಹಾಬಾದ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ನರೇಂದ್ರಗಿರಿ
ನರೇಂದ್ರಗಿರಿ
author img

By

Published : Sep 21, 2021, 1:33 PM IST

ಲಖನೌ (ಉತ್ತರ ಪ್ರದೇಶ): ಅಖಿಲ ಭಾರತೀಯ ಅಖಾಢಾ ಪರಿಷತ್ (ಎಬಿಎಪಿ) ಮುಖ್ಯಸ್ಥ ಮಹಾಂತ್ ನರೇಂದ್ರ ಗಿರಿ ಅವರ ನಿಗೂಢ ಸಾವಿನ ಕುರಿತು ಸಿಬಿಐ ತನಿಖೆ ನಡೆಸುವಂತೆ ಕೋರಿ ಅಲಹಾಬಾದ್ ಹೈಕೋರ್ಟ್​​ಗೆ ವಕೀಲ ಸುನೀಲ್ ಚೌಧರಿ ಅರ್ಜಿ ಸಲ್ಲಿಸಿದ್ದಾರೆ.

ಸೋಮವಾರ ಸಂಜೆ ಮಹಾಂತ್​ ಶವವಾಗಿ ಪತ್ತೆಯಾಗಿದ್ದು, ಅವರ ಸಾವು ಅನುಮಾನಾಸ್ಪದ ಮತ್ತು ನಿಗೂಢವಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ. ಮಹಾಂತ್​ ನರೇಂದ್ರ ಗಿರಿ ಬರೆದಿದ್ದಾರೆ ಎನ್ನಲಾದ ಐದು ಪುಟಗಳ ಡೆತ್​​ನೋಟ್​ ಬಗ್ಗೆ ಅಖಾಢಾದ ಸದಸ್ಯರು ಸಂಶಯ ವ್ಯಕ್ತಪಡಿಸಿದ್ದಾರೆ.

ಮಹಾಂತ್ ನರೇಂದ್ರ ಗಿರಿ ಪತ್ರದಲ್ಲಿ ಉಲ್ಲೇಖಿಸಿದ್ದ ಶಿಷ್ಯ ಆನಂದ್​ ಗಿರಿಯನ್ನು ಪೊಲೀಸರು ಹರಿದ್ವಾರದಲ್ಲಿ ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಈವರೆಗೆ ಆನಂದ್ ಗಿರಿ, ಹನುಮಾನ್ ದೇವಸ್ಥಾನದ ಅರ್ಚಕ ಆದ್ಯಾ ತಿವಾರಿ ಮತ್ತು ಆತನ ಮಗ ಸಂದೀಪ್ ತಿವಾರಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ: ಶಿಷ್ಯ ಆನಂದಗಿರಿಯೊಂದಿಗಿನ ಮನಸ್ತಾಪದಿಂದಲೇ ಕುಣಿಕೆಗೆ ಕೊರಳೊಡ್ಡಿದ್ರಾ ಮಹಾಂತ್ ನರೇಂದ್ರ ಗಿರಿ?

ಮಹಾಂತ್ ​ಅವರ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಬಿಜೆಪಿ ಮಾಜಿ ಸಂಸದ ವಿನಯ್ ಕಟಿಯಾರ್ ಆಗ್ರಹಿಸಿದ್ದಾರೆ. ನಿಷ್ಪಕ್ಷಪಾತ ತನಿಖೆಗೆ ನಮಗಿರುವುದು ಇದೊಂದೇ ಮಾರ್ಗ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಮಹಾಂತ ನರೇಂದ್ರ ಗಿರಿ ಮೃತದೇಹ ಪತ್ತೆ.. ಸ್ಥಳದಲ್ಲಿ ಸೊಸೈಡ್​ ನೋಟ್​ ಲಭ್ಯ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.