ETV Bharat / bharat

ಆರ್ಥಿಕ ರಕ್ಷಣೆ ಒದಗಿಸಬಲ್ಲ ವೈಯಕ್ತಿಕ ಅಪಘಾತ ವಿಮಾ ಪಾಲಿಸಿ ಬಗ್ಗೆ ತಿಳಿಯಿರಿ.. - Etv Bharat Kannada

ಅಪಘಾತ ವಿಮಾ ಪಾಲಿಸಿ ಬಗ್ಗೆ ಮಾಹಿತಿ ಮತ್ತು ಈ ಪಾಲಿಸಿ ಕಷ್ಟದ ಸಮಯದಲ್ಲಿ ಹೇಗೆ ಆರ್ಥಿಕ ರಕ್ಷಣೆ ಒದಗಿಸಬಲ್ಲದು ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ.

ಅಪಘಾತ ವಿಮಾ ಪಾಲಿಸಿ
ಅಪಘಾತ ವಿಮಾ ಪಾಲಿಸಿ
author img

By

Published : Apr 1, 2023, 2:33 PM IST

ಹೈದರಾಬಾದ್: ರಸ್ತೆ ಮೇಲೆ ವಾಹನಗಳಲ್ಲಿ ಪ್ರಯಾಣಿಸುವಾಗ ಅನಿರೀಕ್ಷಿತವಾಗಿ ಅಪಘಾತಗಳು ಸಂಭವಿಸುತ್ತಿರುತ್ತವೆ. ಅದರಲ್ಲೂ ಕೊರೋನಾ ನಂತರ, ಜನರು ಸಾರಿಗೆ ಸೌಲಭ್ಯಗಳನ್ನು ಬಳಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಸ್ವಂತ ವಾಹನಗಳಲ್ಲಿ ಪ್ರಯಾಣಿಸಲು ಬಯಸುತ್ತಿದ್ದಾರೆ. ಇದರಿಂದ ರಸ್ತೆಗಳಲ್ಲಿ ವಾಹನಗಳ ಓಡಾಟದ ಸಂಖ್ಯೆ ಹೆಚ್ಚುತ್ತಿವೆ. ಅಲ್ಲದೇ ರಸ್ತೆ ಅಪಘಾತಗಳ ಹೆಚ್ಚಳವು ದಿನೇ ದಿನೇ ಏರಕಿಯಾಗುತ್ತಲೇ ಇವೆ. ಇಂತಹ ಅನಿರೀಕ್ಷಿತ ಅವಘಡಗಳಿಂದ ಆರ್ಥಿಕವಾಗಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಮತ್ತು ಕುಟುಂಬಕ್ಕೆ ಭದ್ರತೆಯನ್ನು ಒದಗಿಸುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾಗಿ ವೈಯಕ್ತಿಕ ಅಪಘಾತ ವಿಮಾ ಪಾಲಿಸಿ ಇದ್ದರೆ ಇಂತಹ ಯಾವುದೇ ಆಪತ್ತಿನ ಸಂದರ್ಭದಲ್ಲಿ ಹಣಕಾಸಿನ ರಕ್ಷಣೆ ಒದಗಿಸುತ್ತದೆ.

ಅಪಘಾತ ವಿಮಾ ಪಾಲಿಸಿ ವಯಸ್ಸಿನ ಮಿತಿ: ಈ ಪಾಲಿಸಿಯನ್ನು 18 ರಿಂದ 65 ವರ್ಷದ ವರಗಿನವರು ಮಾತ್ರ ಖರೀದಿಸಲು ಅರ್ಹರಾಗಿರುತ್ತಾರೆ. ಒಬ್ಬ ವ್ಯಕ್ತಿಯು ಅಪಘಾತದ ನಂತರ ವರ್ಷಗಳವರೆಗೆ ಆದಾಯವನ್ನು ಕಳೆದುಕೊಂಡು, ವೈದ್ಯಕೀಯ ವೆಚ್ಚಗಳು, ಸಾಲಗಳು, EMI ಗಳು ಮತ್ತು ಇತರ ಅಗತ್ಯಗಳನ್ನು ಪೂರೈಸಲು ವೈಯಕ್ತಿಕ ಅಪಘಾತ ವಿಮಾ ಪಾಲಿಸಿಯು ಸಹಕಾರ ಒದಗಿಸಲಿದ್ದು, ಇದರಿಂದ ಒಟ್ಟು ಮೊತ್ತವನ್ನು ಪಡೆಯಬಹುದಾಗಿದೆ. ಅಲ್ಲದೇ ವಿವಿಧ ಅಗತ್ಯಗಳಿಗಾಗಿ ಇದನ್ನು ಬಳಸಬಹುದಾಗಿದೆ. ಇತ್ತೀಚೆಗೆ, ಕೆಲ ವಿಮಾ ಕಂಪನಿಗಳು ಈ ಪಾಲಿಸಿಗಳ ಅಡಿಯಲ್ಲಿ ಸಾಹಸ ಪ್ರವಾಸಗಳನ್ನು ಸೇರ್ಪಡೆ ಮಾಡಿವೆ. ಅಂದರೆ ಪಾಲಿಸಿದಾರರು ರಸ್ತೆ ಅಪಘಾತದಿಂದ ಮರಣ ಹೊಂದಿದ ಸಂದರ್ಭದಲ್ಲಿ, ನಾಮಿನಿ ಅಥವಾ ಕುಟುಂಬಸ್ಥರು ಆಕಸ್ಮಿಕ ಮರಣದ ಅಡಿಯಲ್ಲಿ ವಿಮಾ ಮೊತ್ತವನ್ನು ಪಡೆಯಬಹುದಾಗಿದೆ. ಅಪಘಾತದಿಂದ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆದರೂ ಚೇತರಿಸಿಕೊಳ್ಳಲು ಸಾಧ್ಯವಾಗದ ಮಟ್ಟಿಗೆ ಅಂಗವಿಕಲನಾಗಿದ್ದರೆ, ಇಂತಹ ವ್ಯಕ್ತಿಗಳಿಗೆ ಅಪಘಾತ ವಿಮಾ ಪಾಲಿಸಿಯಡಿ ಕೆಲ ವಿಮಾ ಕಂಪನಿಗಳು ಹೆಚ್ಚಿನ ಮೊತ್ತವನ್ನು ನೀಡುತ್ತಿವೆ.

ಇದನ್ನೂ ಓದಿ: ಉಳಿತಾಯ & ಹೂಡಿಕೆ ಪ್ರಮಾಣ ಶೇ 8ರ ಜಿಡಿಪಿ ಬೆಳವಣಿಗೆಗೆ ಸಾಕಾಗದು: ರೇಟಿಂಗ್ ಏಜೆನ್ಸಿ

ದೇಹದ ಅಂಗಾಂಗಗಳು ಕಳೆದುಕೊಂಡರೆ: ಒಂದು ವೇಳೆ ಅಪಘಾತದಿಂದಾಗಿ ಪಾಲಿಸಿದಾರರು ದೇಹದ ಅಂಗಾಗಗಳನ್ನು ಕಳೆದುಕೊಂಡರೆ ( ಉದಾ: ಕೈ, ಕಾಲು, ಕಣ್ಣು ಇತರೆ) ಪಾಲಿಸಿಯ ನಿಯಮದ ಪ್ರಕಾರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಒದಗಿಸಲಾಗುತ್ತದೆ. ವ್ಯಕ್ತಿಯ ಸ್ಥಿತಿಯನ್ನು ಅವಲಂಬಿಸಿ, ವಿಮಾ ಮೊತ್ತದ 25 ರಿಂದ 90 ಪ್ರತಿಶತವನ್ನು ಪಡೆಯಲು ಸಾಧ್ಯವಿರುತ್ತದೆ. ಕೆಲವೊಮ್ಮೆ ಅಪಘಾತದಲ್ಲಿ ಗಾಯಗೊಂಡವರಿಗೆ ಗಾಯಗಳು ಗಂಭೀರವಾಗಿಲ್ಲದಿದ್ದರೂ ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸುತ್ತಾರೆ. ಈ ಸಂದರ್ಭದಲ್ಲಿ, ವ್ಯಕ್ತಿಯು ಆದಾಯವನ್ನು ಕಳೆದುಕೊಳ್ಳವ ಸಂಭವವಿರುತ್ತದೆ. ಅಲ್ಲದೆ, ಇಂತಹ ಸಮಯದಲ್ಲಿ ಹಣದ ಅಗತ್ಯವಿವೂ ಎದುರಾಗುತ್ತದೆ. ಇವುಗಳನ್ನು ಸರಿದೂಗಿಸಲು, ವಿಮಾ ಕಂಪನಿಯು ಪಾಲಿಸಿಯ ನಿಯಮಗಳ ಪ್ರಕಾರ ಪ್ರತಿದಿನ ಅಥವಾ ವಾರಕ್ಕೊಮ್ಮೆ ಪಾಲಿಸಿದಾರರಿಗೆ ನಿರ್ದಿಷ್ಟ ಮೊತ್ತವನ್ನು ಒದಗಿಸುತ್ತದೆ.

ಒಟ್ಟಿನಲ್ಲಿ ಅಪಘಾತ ವಿಮಾ ಪಾಲಿಸಿ ಅಪಘಾತ ಮತ್ತು ಆದಾಯದ ನಷ್ಟದ ಸಂದರ್ಭದಲ್ಲಿ ಹಣಕಾಸಿನ ಆಘಾತವನ್ನು ತಪ್ಪಿಸಿ ಆರ್ಥಿಕ ರಕ್ಷಣೆ ಒದಗಿಸುತ್ತದೆ.

ಇದನ್ನೂ ಓದಿ: ಇಂದಿನಿಂದ ಹೊಸ ಆರ್ಥಿಕ ವರ್ಷ ಆರಂಭ.. ಈ ಎಲ್ಲಾ ಹೊಸ ನಿಯಮ ಜಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.