ETV Bharat / bharat

ಪ್ರಾಣ ತೆಗೆದ ಹುಚ್ಚು ಸಾಹಸ.. ಪ್ರವಾಹದಲ್ಲಿ ನದಿ ದಾಟುವಾಗ ಟ್ರ್ಯಾಕ್ಟರ್​ ಸಮೇತ ಮೂವರು ನೀರುಪಾಲು - ಪ್ರಾಣ ತೆಗೆದ ಹುಚ್ಚು ಸಾಹಸ

ಮಹಾರಾಷ್ಟ್ರದಲ್ಲಿ ತುಂಬಿ ಹರಿಯುತ್ತಿದ್ದ ಸೇತುವೆ ಮೇಲೆ ಟ್ರ್ಯಾಕ್ಟರ್​ ಓಡಿಸಲು ಹೋಗಿ ನದಿ ಪಾಲಾದ ಘಟನೆ ನಡೆದಿದೆ. ಇದರಲ್ಲಿ ಮೂವರು ನಾಪತ್ತೆಯಾಗಿದ್ದು, ಇಬ್ಬರು ಅದೃಷ್ಟವಶಾತ್​ ಬದುಕುಳಿದಿದ್ದಾರೆ.

peoples-swept-away-in-flood
ಪ್ರಾಣ ತೆಗೆದ ಹುಚ್ಚು ಸಾಹಸ
author img

By

Published : Aug 9, 2022, 10:03 AM IST

Updated : Aug 9, 2022, 10:22 AM IST

ಅಮರಾವತಿ: ದೇಶದ ವಿವಿಧೆಡೆ ಭಾರೀ ಮಳೆಯಾಗುತ್ತಿದೆ. ಇದರಿಂದ ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಸೇತುವೆಗಳ ಮೇಲೆಯೇ ನೀರು ಹರಿಯುತ್ತಿದೆ. ಮಹಾರಾಷ್ಟ್ರದ ಬೆಂಬ್ಲಾ ನದಿ ಸೇತುವೆ ನೀರಿನಿಂದ ಜಲಾವೃತವಾಗಿದ್ದು, ಇದರ ನಡುವೆಯೇ ಹೋದ ಟ್ರ್ಯಾಕ್ಟರ್​ವೊಂದು ಕೊಚ್ಚಿ ಹೋಗಿದ್ದು, ಅದರಲ್ಲಿದ್ದ ಐವರಲ್ಲಿ ಮೂವರು ನಾಪತ್ತೆಯಾಗಿದ್ದಾರೆ. ಇಬ್ಬರು ಬದುಕುಳಿದ ಘಟನೆ ನಡೆದಿದೆ.

ವಾಹದಲ್ಲಿ ನದಿ ದಾಟುವಾಗ ಟ್ರ್ಯಾಕ್ಟರ್​ ಸಮೇತ ಮೂವರು ನೀರುಪಾಲು

ಭಾರೀ ಮಳೆಯಿಂದಾಗಿ ಅಣೆಕಟ್ಟೆಗಳಿಂದ ಭಾರೀ ಪ್ರಮಾಣದ ನೀರು ಹೊರಬಿಡಲಾಗುತ್ತಿದೆ. ಬೆಂಬ್ಲಾ ನದಿಯೂ ಭಾರಿ ಪ್ರಮಾಣದಲ್ಲಿ ಹರಿಯುತ್ತಿದೆ. ನಂದಗಾಂವ್ ಖಂಡೇಶ್ವರ ತಾಲೂಕಿನಲ್ಲಿ ಅಡ್ಡಲಾಗಿರುವ ಸೇತುವೆ ಮುಳುಗಿದೆ. ನಂದಗಾಂವ್‌ನಿಂದ ಜವ್ರಾ ಮೋಳ್ವನಕ್ಕೆ ಹೊರಟಿದ್ದ ಟ್ರ್ಯಾಕ್ಟರ್‌ವೊಂದು ಪ್ರವಾಹದ ನೀರಿನಲ್ಲಿಯೇ ಸೇತುವೆ ದಾಟುವಾಗ ತಡೆಗೋಡೆಗಳಿರದ ಕಾರಣ ತಪ್ಪಿ ನದಿಗೆ ಉರುಳಿದೆ.

ಇದರಿಂದ ಅದರಲ್ಲಿದ್ದ ಐವರು ಕೊಚ್ಚಿಹೋಗಿದ್ದಾರೆ. ಅದೃಷ್ಟವಶಾತ್​ ಇದರಲ್ಲಿ ಇಬ್ಬರು ಈಜಿ ದಡ ಸೇರಿದ್ದಾರೆ. ಇನ್ನುಳಿದ ಮೂವರು ಟ್ರ್ಯಾಕ್ಟರ್​ ಸಮೇತ ನೀರು ಪಾಲಾಗಿದ್ದಾರೆ. ಟ್ರ್ಯಾಕ್ಟರ್​ ಚಾಲಕ ಹುಚ್ಚು ಸಾಹಸವನ್ನು ದಡದಲ್ಲಿದ್ದವರು ವಿಡಿಯೋ ಮಾಡಿದ್ದಾರೆ. ಟ್ರ್ಯಾಕ್ಟರ್​​ ನದಿಯಲ್ಲಿ ಮುಳುಗುತ್ತಿರುವ ಭೀಕರ ದೃಶ್ಯ ಸೆರೆಯಾಗಿದೆ.

ಓದಿ: ಐಸ್‌ಲ್ಯಾಂಡ್‌ನ ಮೌಂಟ್ ಫಾಗ್ರಾಡಾಲ್ಸ್‌ಫ್ಜಾಲ್ ಬಳಿಯ ಕಣಿವೆಯಲ್ಲಿ ಉಕ್ಕಿ ಹರಿಯುತ್ತಿರುವ ಲಾವಾ ರಸ

Last Updated : Aug 9, 2022, 10:22 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.