ನವದೆಹಲಿ: ಭಾರತೀಯ ಜನತಾ ಪಕ್ಷವು (ಬಿಜೆಪಿ) ಸಮೃದ್ಧ, ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸಲು ಭದ್ರ ಅಡಿಪಾಯ ಹಾಕಿದೆ. ದೇಶವಿಂದು ಆತ್ಮವಿಶ್ವಾಸದಿಂದ ಮುನ್ನುಗ್ಗುತ್ತಿದೆ. ಮುಂಬರುವ, 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಲು ಜನರು ಎಲ್ಲಾ ಅಡೆತಡೆಗಳನ್ನು ಮುರಿಯಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ತಿಳಿಸಿದರು.
ದೆಹಲಿಯಲ್ಲಿ ಮಾಧ್ಯಮ ಸಂಸ್ಥೆ ಆಯೋಜಿಸಿದ್ದ ನಾಯಕತ್ವ ಶೃಂಗಸಭೆಯಲ್ಲಿ ಮಾತನಾಡಿದ ಅವರು, ರಾಜವಂಶದ ಆಡಳಿತ ಮತ್ತು ಸ್ವಜನಪಕ್ಷಪಾತವು ಭಾರತಕ್ಕೆ ನಿಜವಾದ ಅಡೆತಡೆಗಳು. ಆದ್ರೆ, ನಮ್ಮ ಸರ್ಕಾರವು ನಿರಂತರವಾಗಿ ಬದಲಾವಣೆಗಳನ್ನು ತರುತ್ತಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಶ್ರೀಸಾಮಾನ್ಯನೂ ಕೂಡ ಸಶಕ್ತನಾಗಿದ್ದಾನೆ ಎಂದರು.
'ಬಿಯಾಂಡ್ ಬ್ಯಾರಿಯರ್ಸ್' ಕಾರ್ಯಕ್ರಮದ ವಿಷಯವನ್ನು ಉಲ್ಲೇಖಿಸಿದ ಅವರು, ಆಡಳಿತಾರೂಢ ಬಿಜೆಪಿ ಸರ್ಕಾರವು ಮಾಡುತ್ತಿರುವ ಬದಲಾವಣೆಗಳಿಗೆ ಜನರ ಸಂಪೂರ್ಣ ಬೆಂಬಲವಿದೆ ಎಂಬುದಕ್ಕೆ 2024ರ ಲೋಕಸಭೆ ಚುನಾವಣೆ ಫಲಿತಾಂಶ ಸಾಕ್ಷಿಯಾಗಲಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: 'ಡ್ರಗ್ ಮುಕ್ತ ಭಾರತಕ್ಕೆ ಕೈ ಜೋಡಿಸಿ' : ಏಷ್ಯನ್ ಗೇಮ್ಸ್ ಸಾಧಕರೊಂದಿಗೆ ಪ್ರಧಾನಿ ಮೋದಿ ಸಂವಾದ
ಬೃಹತ್ ಆರ್ಥಿಕ ಚಕ್ರದ ಆಧಾರದ ಮೇಲೆ ಭಾರತದಲ್ಲಿ ಬೆಳೆಯುತ್ತಿರುವ ಬಡತನವನ್ನು ಕಡಿಮೆ ಮಾಡಲಾಗುವುದು. ಕೇವಲ ಐದು ವರ್ಷಗಳಲ್ಲಿ 13 ಕೋಟಿ ಜನರನ್ನು ಬಡತನದಿಂದ ಮುಕ್ತಗೊಳಿಸಲಾಗಿದೆ. ಘೋಷಣೆಗಳಿಂದ ಬಡತನದ ವಿರುದ್ಧ ಹೋರಾಡಲು ಸಾಧ್ಯವಿಲ್ಲ, ಪರಿಹಾರ ಮಾರ್ಗಗಳಿಂದ ಮಾತ್ರ ಸಾಧ್ಯ ಎಂದ ಅವರು ಬದಲಾವಣೆಗಳನ್ನು ಎತ್ತಿ ತೋರಿಸಲು ಕೇಂದ್ರ ಸರ್ಕಾರವು ಕೈಗೊಂಡ ಹಲವಾರು ಅಭಿವೃದ್ಧಿ ಕ್ರಮಗಳನ್ನು ಮೋದಿ ಉಲ್ಲೇಖಿಸಿದರು.
ಇದನ್ನೂ ಓದಿ: ಕಾಂಗ್ರೆಸ್ 'ಮಹಾದೇವ'ನ ಹೆಸರನ್ನೂ ಬಿಡುತ್ತಿಲ್ಲ : ಬೆಟ್ಟಿಂಗ್ ಆ್ಯಪ್ ಹಗರಣ ಉಲ್ಲೇಖಿಸಿ ಮೋದಿ ವಾಗ್ದಾಳಿ
ಮಧ್ಯಮ ವರ್ಗ, ಬಡವರ ಆಕಾಂಕ್ಷೆಗಳು ಮತ್ತು ಇಚ್ಛಾಶಕ್ತಿಯು ದೇಶದ ಅಭಿವೃದ್ಧಿಗೆ ಶಕ್ತಿಯನ್ನು ನೀಡುತ್ತಿದೆ. ಈ ಶಕ್ತಿಯು ಭಾರತವನ್ನು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಮಾಡಿದೆ. ನಮ್ಮ ಮೂರನೇ ಅವಧಿಯಲ್ಲಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಭಾರತವನ್ನು ಮಾಡುವ ಗುರಿ ಹೊಂದಲಾಗಿದೆ ಎಂದು ಪ್ರಧಾನಿ ಹೇಳಿದರು.
ಇದನ್ನೂ ಓದಿ: ಚುನಾವಣಾ ಪ್ರಚಾರ ಸಭೆಯಲ್ಲಿ ರೇಖಾಚಿತ್ರ ಹಿಡಿದು ಗಮನ ಸೆಳೆದ ಬಾಲಕಿಗೆ ಪ್ರಧಾನಿ ಮೋದಿ ಪತ್ರ
10 ವರ್ಷಗಳಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರ ಸಂಖ್ಯೆ 7.5 ಕೋಟಿಗೆ ದ್ವಿಗುಣಗೊಂಡಿದೆ. ಸರಾಸರಿ ಆದಾಯ 13 ಲಕ್ಷ ರೂ.ಗೆ ಏರಿಕೆಯಾಗಿದೆ. 2014 ರಿಂದ ಕಾರ್ಯಾಚರಣೆಯ ವಿಮಾನ ನಿಲ್ದಾಣಗಳ ಸಂಖ್ಯೆಯು 70 ರಿಂದ 150 ಕ್ಕೆ ದ್ವಿಗುಣಗೊಂಡಿದೆ. ನಮ್ಮ ಸರ್ಕಾರವು ರೈಲು ಹಳಿ ಉದ್ದವನ್ನು ಸಹ ದ್ವಿಗುಣಗೊಳಿಸಿದೆ ಎಂದು ಮೋದಿ ತಿಳಿಸಿದರು.
ಇದನ್ನೂ ಓದಿ: ಆಹಾರ ಸಂಸ್ಕರಣಾ ಉದ್ಯಮಕ್ಕೆ 9 ವರ್ಷಗಳಲ್ಲಿ 50 ಸಾವಿರ ಕೋಟಿ ವಿದೇಶಿ ನೇರ ಬಂಡವಾಳ ; ಪ್ರಧಾನಿ ಮೋದಿ