ಮೊಧೇರಾ (ಗುಜರಾತ್): ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮೊಧೇರಾವನ್ನು ದೇಶದ ಮೊದಲ ಸೌರಶಕ್ತಿ ಗ್ರಾಮ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಘೋಷಿಸಿದ್ದಾರೆ. ಮೊಧೇರಾ ಗ್ರಾಮವು ಸೂರ್ಯ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಈಗ ಇಡೀ ಗ್ರಾಮವೇ ಸೌರಶಕ್ತಿ ಚಾಲಿತವಾಗಿದೆ ಎಂದು ಪ್ರಧಾನಿ ಬಣ್ಣಿಸಿದರು.
ಮೊಧೇರಾ ಗ್ರಾಮದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಎರಡು ದಶಕಗಳಿಂದ ಗುಜರಾತ್ ರಾಜ್ಯದ ಜನರು ನನ್ನನ್ನು ಆಶೀರ್ವದಿಸಿದ್ದಾರೆ. ನನ್ನ ಜಾತಿಯನ್ನು ಲೆಕ್ಕಿಸದೆ ಮತ ಹಾಕಿದ್ದಾರೆ ಹಾಗೂ ರಾಜಕೀಯ ಹಿನ್ನೆಲೆಯನ್ನು ನೋಡದೆ ಗುಜರಾತ್‌ನ ಜನರು ನನಗೆ ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದರು.
-
People of Gujarat have blessed me for last two decades and made me win elections without looking at my caste: PM Narendra Modi
— Press Trust of India (@PTI_News) October 9, 2022 " class="align-text-top noRightClick twitterSection" data="
">People of Gujarat have blessed me for last two decades and made me win elections without looking at my caste: PM Narendra Modi
— Press Trust of India (@PTI_News) October 9, 2022People of Gujarat have blessed me for last two decades and made me win elections without looking at my caste: PM Narendra Modi
— Press Trust of India (@PTI_News) October 9, 2022
ಬಿಜೆಪಿ ಆಡಳಿತವಿರುವ ಗುಜರಾತ್‌ನಲ್ಲಿ ಈ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಪ್ರಧಾನಿಯಾಗುವ ಮೊದಲು ಮೋದಿ 2001ರಿಂದ 2014ವರೆಗೆ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದರು. ಈಗ ಪ್ರಧಾನಿ ಮೋದಿಯವರ ತವರು ರಾಜ್ಯವಾದ ಹಿನ್ನೆಲೆಯಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವ ಗುರಿ ಬಿಜೆಪಿ ಮುಂದಿದೆ. ಇತ್ತ, ರಾಜ್ಯದಲ್ಲಿ 27 ವರ್ಷಗಳ ಕಾಲ ಅಧಿಕಾರದಿಂದ ದೂರ ಉಳಿದಿರುವ ಕಾಂಗ್ರೆಸ್ ಗೆಲುವಿನ ನಿರೀಕ್ಷೆಯಲ್ಲಿದೆ.
-
Modhera was known for Sun temple; now it will also be known as solar-powered village: PM Narendra Modi
— Press Trust of India (@PTI_News) October 9, 2022 " class="align-text-top noRightClick twitterSection" data="
">Modhera was known for Sun temple; now it will also be known as solar-powered village: PM Narendra Modi
— Press Trust of India (@PTI_News) October 9, 2022Modhera was known for Sun temple; now it will also be known as solar-powered village: PM Narendra Modi
— Press Trust of India (@PTI_News) October 9, 2022
ಈ ನಡುವೆ ಪ್ರಧಾನಿ ಮೋದಿ ಮೂರು ದಿನಗಳ ಕಾಲ ಗುಜರಾತ್ ಪ್ರವಾಸ ಕೈಗೊಂಡಿದ್ದಾರೆ. ತಮ್ಮ ಈ ಪ್ರವಾಸದಲ್ಲಿ ಮೋದಿ 14,600 ಕೋಟಿ ರೂ.ಗೂ ಅಧಿಕ ಮೊತ್ತದ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಇದನ್ನೂ ಓದಿ: ಸೌರಶಕ್ತಿಯಿಂದ ಬೆಳಗಿದ ದೇಶದ ಮೊದಲ ಸೌರಗ್ರಾಮ ಮೊಧೇರಾ.. ನಾಳೆ ಪ್ರಧಾನಿ ಮೋದಿ ಗುಜರಾತ್ ಭೇಟಿ