ETV Bharat / bharat

ರಾಜ್ಯಪಾಲರ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ತೆಲಂಗಾಣ ಸರ್ಕಾರ - ತೆಲಂಗಾಣ ಸರ್ಕಾರ

ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಅವರ ಬಳಿ ಬಾಕಿ ಇರುವ ರಾಜ್ಯಕ್ಕೆ ಸಂಬಂಧಿಸಿದ 10 ಪ್ರಮುಖ ಮಸೂದೆಗಳನ್ನು ಅನುಮೋದಿಸಲು ನಿರ್ದೇಶನ ನೀಡುವಂತೆ ಕೋರಿ ತೆಲಂಗಾಣ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ.

Supreme Court
ಸುಪ್ರೀಂ ಕೋರ್ಟ್‌
author img

By

Published : Mar 3, 2023, 9:52 AM IST

ಹೈದರಾಬಾದ್: ರಾಜಭವನ ಮತ್ತು ಪ್ರಗತಿ ಭವನದ ನಡುವಿನ ವಿವಾದ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಅವರು 10 ಮಸೂದೆಗಳಿಗೆ ಒಪ್ಪಿಗೆ ನೀಡಿಲ್ಲ ಎಂದು ತೆಲಂಗಾಣ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ರಜೆ ಅರ್ಜಿ (ಎಸ್‌ಎಲ್‌ಪಿ) ಸಲ್ಲಿಸಿದೆ. ಸಾಂವಿಧಾನಿಕ ಹೊಣೆಗಾರಿಕೆಯನ್ನು ಪೂರೈಸುವಂತೆ ರಾಜ್ಯಪಾಲರಿಗೆ ನಿರ್ದೇಶನ ನೀಡಬೇಕು ಎಂದು ಸರ್ಕಾರ ಕೋರ್ಟ್‌ಗೆ ಮನವಿ ಮಾಡಿದೆ.

ಈ ಅರ್ಜಿ ಇಂದು ವಿಚಾರಣೆಗೆ ಬರುವ ಸಾಧ್ಯತೆ ಇದೆ. ರಾಜ್ಯ ಸರ್ಕಾರದ ಪರ ಮುಖ್ಯ ಕಾರ್ಯದರ್ಶಿ ಶಾಂತಿ ಕುಮಾರಿ ಸಲ್ಲಿಸಿದ ರಿಟ್ ಅರ್ಜಿಯಲ್ಲಿ ರಾಜ್ಯಪಾಲರ ಕಾರ್ಯದರ್ಶಿಯನ್ನು ಪ್ರತಿವಾದಿಯನ್ನಾಗಿ ಹೆಸರಿಸಲಾಗಿದೆ. ಕೆಲವು ವಿಧೇಯಕಗಳು ರಾಜಭವನದಲ್ಲಿ ಆರು ತಿಂಗಳಿಗೂ ಹೆಚ್ಚು ಕಾಲ ಬಾಕಿ ಉಳಿದಿವೆ. ರಾಜ್ಯಪಾಲರಿಂದ ಅನುಮತಿ ಪಡೆಯದ ಕಾರಣ ಸುಪ್ರೀಂ ಕೋರ್ಟ್‌ನ ಮೊರೆ ಹೋಗಲು ರಾಜ್ಯ ಸರ್ಕಾರ ನಿರ್ಧರಿಸಿದೆ.

"ತೆಲಂಗಾಣ ರಾಜ್ಯಪಾಲರು ರಾಜ್ಯ ಶಾಸಕಾಂಗ ಅಂಗೀಕರಿಸಿದ ಹಲವಾರು ವಿಧೇಯಕಗಳ ಮೇಲೆ ಕಾರ್ಯನಿರ್ವಹಿಸಲು ನಿರಾಕರಿಸಿದ ಕಾರಣ ಆಗಾಗ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗುತ್ತಿದೆ. ಈ ಮಸೂದೆಗಳು ಸೆಪ್ಟೆಂಬರ್ 14, 2022 ರಿಂದ ರಾಜ್ಯಪಾಲರ ಒಪ್ಪಿಗೆಗಾಗಿ ಇಲ್ಲಿಯವರೆಗೆ ಬಾಕಿ ಉಳಿದಿವೆ. ಭಾರತದ ಸಂವಿಧಾನದ 32ನೇ ವಿಧಿಯ ಅಡಿಯಲ್ಲಿ ಪ್ರಸ್ತುತ ರಿಟ್ ಅರ್ಜಿ ಸಲ್ಲಿಸಲಾಗಿದೆ. ರಾಜ್ಯಪಾಲರು ಹಲವು ವಿಧೇಯಕಗಳಿಗೆ ಅನುಮೋದನೆ ನಿರಾಕರಿಸಿದ್ದು ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ" ಎಂದು ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ.

10 ಮಸೂದೆಗಳಿಗೆ ರಾಜ್ಯಪಾಲರು ಯಾವುದೇ ಅನುಮೋದನೆ ನೀಡಿಲ್ಲ. 7 ಬಿಲ್​​ಗಳು ಸೆಪ್ಟೆಂಬರ್‌ನಿಂದ ಬಾಕಿ ಉಳಿದಿವೆ ಮತ್ತು ಮೂರು ಕಳೆದ ತಿಂಗಳಿನಿಂದ ಬಾಕಿಯಾಗಿವೆ. ಉಭಯ ಸದನಗಳಲ್ಲಿ ಅಂಗೀಕಾರವಾದ ವಿಧೇಯಕಗಳನ್ನು ಬಾಕಿ ಉಳಿಸಿಕೊಂಡಿರುವುದು ಸರಿಯಲ್ಲ ಎಂಬುದನ್ನು ಸಾಂವಿಧಾನಿಕವಾಗಿ ಚುನಾಯಿತ ಸರ್ಕಾರ ರಾಜ್ಯಪಾಲರಿಗೆ ವಿವರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

10 ಮಸೂದೆಗಳು ಬಾಕಿ: ತೆಲಂಗಾಣ ವಿಶ್ವವಿದ್ಯಾನಿಲಯಗಳ ಜಂಟಿ ನೇಮಕಾತಿ ಮಂಡಳಿ ಮಸೂದೆ, ಮುಲುಗು ಜಿಲ್ಲೆಯಲ್ಲಿ ಅರಣ್ಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯನ್ನು ಅರಣ್ಯ ವಿಶ್ವವಿದ್ಯಾಲಯವನ್ನಾಗಿ ಪರಿವರ್ತಿಸುವ ಮಸೂದೆ, ಅಜಮಾಬಾದ್ ಕೈಗಾರಿಕಾ ಪ್ರದೇಶ ಕಾಯ್ದೆ ತಿದ್ದುಪಡಿ ಮಸೂದೆ, ಪುರಸಭೆ ನಿಯಮಾವಳಿ ಕಾಯ್ದೆ ತಿದ್ದುಪಡಿ ಮಸೂದೆ, ಸಾರ್ವಜನಿಕರ ತಿದ್ದುಪಡಿ ಉದ್ಯೋಗ ಮಸೂದೆ, ಖಾಸಗಿ ವಿಶ್ವವಿದ್ಯಾನಿಲಯಗಳ ಕಾಯ್ದೆ ತಿದ್ದುಪಡಿ ಮಸೂದೆ, ಮೋಟಾರು ವಾಹನಗಳ ತೆರಿಗೆ ಕಾಯ್ದೆ ತಿದ್ದುಪಡಿ ಮಸೂದೆ, ಮುನ್ಸಿಪಲ್ ಕಾಯ್ದೆ ತಿದ್ದುಪಡಿ ಮಸೂದೆ, ಪಂಚಾಯತ್​ ರಾಜ್​ ಕಾಯ್ದೆ ತಿದ್ದುಪಡಿ ಮಸೂದೆ, ಕೃಷಿ ವಿಶ್ವವಿದ್ಯಾಲಯ ಕಾಯ್ದೆ ತಿದ್ದುಪಡಿ ಮಸೂದೆ ಹಾಗೂ ಜಿಎಸ್‌ಟಿ ಕಾಯ್ದೆ ತಿದ್ದುಪಡಿ ವಿಧೇಯಕ ಸೇರಿವೆ.

ಈ ವಿಧೇಯಕಗಳನ್ನು ಕಳೆದ ಸೆಪ್ಟೆಂಬರ್ 13ರಂದು ಉಭಯ ಸದನಗಳು ಅನುಮೋದಿಸಿ ರಾಜ್ಯಪಾಲರ ಒಪ್ಪಿಗೆಗಾಗಿ ರಾಜಭವನಕ್ಕೆ ಕಳುಹಿಸಲಾಗಿತ್ತು. ಈ ಪೈಕಿ ಜಿಎಸ್‌ಟಿ ಕಾಯ್ದೆ ತಿದ್ದುಪಡಿ ಮಸೂದೆಗೆ ರಾಜ್ಯಪಾಲರು ಅನುಮೋದನೆ ನೀಡಿದ್ದು, ಉಳಿದ ಏಳು ಮಸೂದೆಗಳು ಕಳೆದ ಆರು ತಿಂಗಳಿಂದ ರಾಜಭವನದಲ್ಲಿ ಬಾಕಿ ಉಳಿದಿವೆ. ತರುವಾಯ, ಕಳೆದ ತಿಂಗಳು ನಡೆದ ವಿಧಾನಸಭೆಯಲ್ಲಿ ಇನ್ನೂ ಮೂರು ಹೊಸ ಮಸೂದೆಗಳನ್ನು ಉಭಯ ಸದನಗಳು ಅಂಗೀಕರಿಸಿದವು. ಪ್ರಸ್ತುತ ಅವು ರಾಜಭವನದಲ್ಲಿ ರಾಜ್ಯಪಾಲರ ಒಪ್ಪಿಗೆಯ ಮುದ್ರೆಗಾಗಿ ಕಾಯುತ್ತಿವೆ. ಹೀಗಾಗಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ಎಸ್‌ಎಲ್‌ಪಿಯಲ್ಲಿ ಉಲ್ಲೇಖಿಸಿರುವುದು ಏನು?: ರಾಜ್ಯ ಸರ್ಕಾರ ಸಂಶೇರ್ ಸಿಂಗ್ Vs ಸ್ಟೇಟ್ ಆಫ್ ಪಂಜಾಬ್ ಪ್ರಕರಣವನ್ನು ಉಲ್ಲೇಖಿಸಿದೆ. ಅಲ್ಲಿ ರಾಜ್ಯಪಾಲರು ಮಂತ್ರಿ ಮಂಡಳಿಯ ಸಲಹೆಗೆ ವಿರುದ್ಧವಾಗಿ ಹೋಗಲು ಅವಕಾಶ ನೀಡುವ ಮೂಲಕ ಸಮಾನಾಂತರ ಆಡಳಿತವನ್ನು ಸಂವಿಧಾನವು ಕಲ್ಪಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಂವಿಧಾನ ಸಭೆಯ ಚರ್ಚೆಯಿಂದ ಸ್ಪಷ್ಟವಾಗುವಂತೆ 200ನೇ ವಿಧಿಯು ರಾಜ್ಯಪಾಲರಿಗೆ ಯಾವುದೇ ಸ್ವತಂತ್ರ ವಿವೇಚನೆಯನ್ನು ನೀಡುವುದಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: 'ತೆಲಂಗಾಣ ಸರ್ಕಾರದಿಂದ ಅವಮಾನ': ಮೋದಿ ಭೇಟಿ ಮಾಡಿದ ರಾಜ್ಯಪಾಲೆ ತಮಿಳಿಸೈ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.