ETV Bharat / bharat

Patna Opposition Meet: ಎಲ್ಲರೂ ಒಟ್ಟಾಗಿ ಬಿಜೆಪಿ ಸೋಲಿಸೋಣ: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ

Patna Opposition Meet: ಬಿಹಾರದ ಪಾಟ್ನಾದಲ್ಲಿ ವಿರೋಧ ಪಕ್ಷಗಳ ಬೃಹತ್​ ಸಭೆ ನಡೆಯುತ್ತಿದ್ದು, ಎಲ್ಲರೂ ಒಟ್ಟಾಗಿ ಬಿಜೆಪಿಯನ್ನು ಸೋಲಿಸೋಣ ಎಂದು ರಾಹುಲ್​ ಗಾಂಧಿ ಒಗ್ಗಟ್ಟಿನ ಮಂತ್ರವನ್ನು ಜಪಿಸಿದ್ದಾರೆ.

There is a war of ideology going on in India  Congress leader Rahul Gandhi  ಎಲ್ಲರೂ ಒಟ್ಟಾಗಿ ಬಿಜೆಪಿಯನ್ನು ಸೋಲಿಸೋಣಾ  Patna Opposition Meet  ಬಿಹಾರದ ಪಾಟ್ನಾದಲ್ಲಿ ವಿರೋಧ ಪಕ್ಷಗಳ ಬೃಹತ್​ ಸಭೆ  ಒಟ್ಟಾಗಿ ಬಿಜೆಪಿಯನ್ನು ಸೋಲಿಸೋಣಾ  ರಾಹುಲ್​ ಗಾಂಧಿ ಒಗ್ಗಟ್ಟಿನ ಮಂತ್ರ  ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ  ಬಿಜೆಪಿಯನ್ನು ಸೋಲಿಸೋಣಾ ಎಂಬ ಮಂತ್ರ  ದೇಶದಲ್ಲಿ ಎರಡು ಸಿದ್ಧಾಂತಗಳ ನಡುವೆ ಹೋರಾಟ  ಕಾಂಗ್ರೆಸ್ ಎಂದರೆ ಬಡವರ ಜೊತೆ ನಿಲ್ಲುವುದು  ಕಾಂಗ್ರೆಸ್‌ನ ಡಿಎನ್‌ಎ ಬಿಹಾರದಲ್ಲಿದೆ  ಎಲ್ಲ ವಿರೋಧ ಪಕ್ಷಗಳು ಒಂದಾಗಬೇಕು  ಬಿಹಾರದಲ್ಲಿ ವಿರೋಧ ಪಕ್ಷಗಳ ಸಭೆ
ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ
author img

By

Published : Jun 23, 2023, 1:31 PM IST

ಪಾಟ್ನಾ, ಬಿಹಾರ: ನಗರದಲ್ಲಿ ನಡೆಯುತ್ತಿರುವ ವಿರೋಧ ಪಕ್ಷಗಳ ಸಭೆಯಲ್ಲಿ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಒಟ್ಟಾಗಿ ಬಿಜೆಪಿಯನ್ನು ಸೋಲಿಸೋಣ ಎಂಬ ಮಂತ್ರವನ್ನು ಜಪಿಸಿದ್ದಾರೆ.

ಪಾಟ್ನಾದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ದೇಶದಲ್ಲಿ ಎರಡು ಸಿದ್ಧಾಂತಗಳ ನಡುವೆ ಹೋರಾಟ ನಡೆಯುತ್ತಿದೆ. ಒಂದೆಡೆ ನಮ್ಮಲ್ಲಿ 'ಭಾರತಕ್ಕೆ ಸೇರಿಕೊಳ್ಳಿ' ಮತ್ತು ಇನ್ನೊಂದೆಡೆ ಬಿಜೆಪಿಯ ಬ್ರೇಕ್ ಇಂಡಿಯಾದ ಸಿದ್ಧಾಂತವೂ ಇದೆ. ಬಿಜೆಪಿ ಹಿಂದೂಸ್ಥಾನವನ್ನು ಒಡೆಯುವ ಕೆಲಸ ಮಾಡುತ್ತಿದೆ, ದ್ವೇಷ ಮತ್ತು ಹಿಂಸಾಚಾರವನ್ನು ಹರಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ದೇಶದ ಎಲ್ಲ ವಿರೋಧ ಪಕ್ಷಗಳು ಇಲ್ಲಿ ಸೇರಿದ್ದೇವೆ. ಒಟ್ಟಾಗಿ ನಾವು ಬಿಜೆಪಿಯನ್ನು ಸೋಲಿಸಲಿದ್ದೇವೆ. ಕರ್ನಾಟಕದಲ್ಲಿ ಬಿಜೆಪಿ ನಾಯಕರು ಉದ್ದುದ್ದ ಭಾಷಣ ಮಾಡಿದ್ದು, ರಾಜ್ಯದ ಮೂಲೆ ಮೂಲೆಗೆ ಹೋಗಿದ್ದನ್ನು ನೋಡಿದ್ದೀರಿ. ಅದರ ಪರಿಣಾಮವಾಗಿ ಕರ್ನಾಟಕದಲ್ಲಿ ಏನಾಯಿತು ಎಂದು ಸಹ ನೀವು ನೋಡಿದ್ದೀರಿ. ಕಾಂಗ್ರೆಸ್ ಪಕ್ಷ ಒಟ್ಟಿಗೆ ನಿಂತ ತಕ್ಷಣ ಕರ್ನಾಟಕದಲ್ಲಿ ಬಿಜೆಪಿ ಕಣ್ಮರೆಯಾಯಿತು. ಅದೇ ರೀತಿ ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢದಲ್ಲೂ ಸಹ ಬಿಜೆಪಿ ಕಾಣಿಸುವುದಿಲ್ಲ ಮತ್ತು ಕಾಂಗ್ರೆಸ್‌ ಪಕ್ಷ ಅವರನ್ನು ಗೆಲ್ಲಿಸಿ ತೋರಿಸಲಿದ್ದಾರೆ ಎಂದು ರಾಹುಲ್​ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದರು.

'ಕಾಂಗ್ರೆಸ್ ಎಂದರೆ ಬಡವರ ಜೊತೆ ನಿಲ್ಲುವುದು': ಬಿಜೆಪಿಯ ಅರ್ಥ ಕೇವಲ ಇಬ್ಬರು ಅಥವಾ ಮೂರು ಜನರಿಗೆ ಮಾತ್ರ.. ಕಾಂಗ್ರೆಸ್ ಎಂದರೆ ಬಡವರ ಜೊತೆ ನಿಲ್ಲುವುದು ಎಂದು ಇಡೀ ದೇಶ ಅರ್ಥಮಾಡಿಕೊಂಡಿದೆ. ಬಡವರಿಗಾಗಿ ದುಡಿಯುತ್ತಿದೆ. ಪಕ್ಷದ ಕಾರ್ಯಕರ್ತರು ನಮ್ಮ ಸಿದ್ಧಾಂತಕ್ಕಾಗಿ ಹೋರಾಡುವ ಮನೋಭಾವದಲ್ಲಿದ್ದಾರೆ. ನಿಮ್ಮನ್ನು ರಕ್ಷಿಸುವುದು ಕಾಂಗ್ರೆಸ್ ಪಕ್ಷದ ಕೆಲಸ, ಕಾರ್ಯಕರ್ತರನ್ನು ರಕ್ಷಿಸುವುದು ನಮ್ಮ ಕೆಲಸ ಎಂದು ಹೇಳಿದರು.

'ಕಾಂಗ್ರೆಸ್‌ನ ಡಿಎನ್‌ಎ ಬಿಹಾರದಲ್ಲಿದೆ': ರಾಹುಲ್ ಗಾಂಧಿ ಮಾತು ಮುಂದುವರಿಸಿ, 'ಕಾಂಗ್ರೆಸ್ ಪಕ್ಷದ ಡಿಎನ್‌ಎ ಬಿಹಾರದಲ್ಲಿದೆ. ನಮ್ಮ ಭಾರತ ಜೋಡೊ ಪ್ರಯಾಣದಲ್ಲಿ ನೀವು ನಮಗೆ ಸಾಕಷ್ಟು ಸಹಾಯ ಮಾಡಿದ್ದೀರಿ. ಎಲ್ಲಿಂದ ಬಂದಿದ್ದೀರಿ ಎಂದು ಪ್ರತಿ ರಾಜ್ಯದಲ್ಲೂ ಕೇಳಿದಾಗ ಬಿಹಾರದಿಂದ ಬಂದಿದ್ದೀರಿ ಎಂಬ ಉತ್ತರ ಸಿಗುತ್ತದೆ. ನೀವು ಪ್ರಯಾಣದಲ್ಲಿ ಸಹಾಯ ಮಾಡಿದ್ದೀರಿ. ಏಕೆಂದರೆ ನೀವು ನಮ್ಮ ಸಿದ್ಧಾಂತವನ್ನು ನಂಬಿದ್ದೀರಿ, ಅದನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೀರಿ ಎಂದು ಕಾರ್ಯಕರ್ತರನ್ನು ರಾಹುಲ್​ ಗಾಂಧಿ ಹುರಿದುಂಬಿಸಿದರು.

‘ಎಲ್ಲ ವಿರೋಧ ಪಕ್ಷಗಳು ಒಂದಾಗಬೇಕು’: ಇದಕ್ಕೂ ಮುನ್ನ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, '2024ರ ಚುನಾವಣೆಯಲ್ಲಿ ನಾವೆಲ್ಲ ವಿರೋಧ ಪಕ್ಷಗಳು ಒಗ್ಗೂಡಿ ಹೋರಾಡಬೇಕಿದೆ. ಇದರ ಅಡಿ ರಾಹುಲ್ ಗಾಂಧಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಎಲ್ಲ ಪಕ್ಷಗಳ ಮುಖಂಡರ ಜತೆ ಮಾತನಾಡಿ ಒಟ್ಟಾಗಿ ಮುಂದಿನ ಹೆಜ್ಜೆ ಇಡಲು ಚಿಂತನೆ ನಡೆಸಿದ್ದೇವೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಲು ನಾವು ಒಟ್ಟಾಗಿ ಹೋರಾಡಬೇಕಾಗಿದೆ ಎಂದರು.

ಬಿಹಾರದಲ್ಲಿ ವಿರೋಧ ಪಕ್ಷಗಳ ಸಭೆ: ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಮತ್ತು ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ಪ್ರತಿಪಕ್ಷ ನಾಯಕರ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. 2024 ರ ಲೋಕಸಭೆ ಚುನಾವಣೆ ಬಿಜೆಪಿಯನ್ನು ಎದುರಿಸಲು ಜಂಟಿ ಕಾರ್ಯತಂತ್ರವನ್ನು ರೂಪಿಸಲು 15 ಕ್ಕೂ ಹೆಚ್ಚು ವಿರೋಧ ಪಕ್ಷಗಳು ಒಟ್ಟಿಗೆ ಸೇರಿ ಸಭೆ ನಡೆಸುತ್ತಿವೆ.

ಓದಿ: Lok Sabha Election: ಇಂದು ಪ್ರತಿಪಕ್ಷಗಳ ಮಹತ್ವದ ಸಭೆ.. ಪಾಟ್ನಾದಲ್ಲಿ ಬೀಡುಬಿಟ್ಟ ಹಿರಿಯ ನಾಯಕರ ದಂಡು!!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.