ETV Bharat / bharat

ದರೋಡೆಕೋರ ಗೋಲ್ಡಿ ಬ್ರಾರ್ ಫೋಟೋದೊಂದಿಗೆ ಬ್ಯಾಂಕ್ ಖಾತೆ ತೆರೆಯಲು ಬಂದ ಆರೋಪಿಗಳಿಬ್ಬರು ಅರೆಸ್ಟ್​ - open a bank account with the photo of gangster Goldie Brar

ಗೋಲ್ಡಿ ಬ್ರಾರ್ ಫೋಟೋ ಇಟ್ಟುಕೊಂಡು ಪಠಾಣ್‌ಕೋಟ್‌ನ ಬ್ಯಾಂಕ್‌ವೊಂದರಲ್ಲಿ ಖಾತೆ ತೆರೆಯಲು ಬಂದ ಮೂವರ ಪೈಕಿ ಇಬ್ಬರನ್ನು ಬಂಧಿಸಿದ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿ 2 ದಿನ ಕಸ್ಟಡಿಗೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.

pathankot
ಇಬ್ಬರ ಬಂಧನ
author img

By

Published : Jul 16, 2022, 9:24 AM IST

ಪಠಾಣ್‌ಕೋಟ್‌: ಕೆಲ ದಿನಗಳ ಹಿಂದೆ ಪಠಾಣ್‌ಕೋಟ್‌ನ ಬ್ಯಾಂಕ್‌ವೊಂದರಲ್ಲಿ ಕೆನಡಾ ಮೂಲದ ದರೋಡೆಕೋರ ಸತೀಂದರ್​ಜಿತ್ ಸಿಂಗ್​ ಅಲಿಯಾಸ್​​ ಗೋಲ್ಡಿ ಬ್ರಾರ್‌ನ ಫೋಟೋ ಇರುವ ಖಾತೆ ತೆರೆಯಲು ಬಂದ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.

ಬ್ಯಾಂಕ್​ನಲ್ಲಿ ಖಾತೆ ತೆರೆಯಲು ನೀಡಿದ್ದ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್‌ನಲ್ಲಿರುವ ಗೋಲ್ಡಿ ಬ್ರಾರ್ ಫೋಟೋ ಪಂಜಾಬ್​ನಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಒಬ್ಬ ಬ್ಯಾಂಕ್​ ಒಳಗೆ ಖಾತೆ ತೆರಲು ಆಗಮಿಸಿದ್ದು, ಇನ್ನಿಬ್ಬರು ಸಹಚರರು ಹೊರಗಡೆ ಕಾವಲು ನಿಂತಿದ್ದರು. ಬಳಿಕ ಖಾತೆ ತೆರೆಯಲು ಬಂದ ಆರೋಪಿಗಳು ಅನುಮಾನಗೊಂಡು ಸ್ಥಳದಿಂದ ಪರಾರಿಯಾಗಿದ್ದರು. ಪೊಲೀಸರು ಈ ಮೂವರಿಗಾಗಿ ನಿರಂತರ ಶೋಧ ನಡೆಸಿ, ಇದೀಗ ಇಬ್ಬರನ್ನು ಬಂಧಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸ್​ ಅಧಿಕಾರಿ, ಇಡೀ ಪ್ರಕರಣದ ಮಾಸ್ಟರ್ ಮೈಂಡ್ ತಲೆಮರೆಸಿಕೊಂಡಿದ್ದಾನೆ. ಈ ವ್ಯಕ್ತಿಗಳು ಬೇರೆ ಬೇರೆ ಕಡೆ ಬ್ಯಾಂಕ್ ಖಾತೆ ತೆರೆದು ಆ ಖಾತೆಗಳನ್ನು ಮಾರಾಟ ಮಾಡುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿದಂತೆ ಇಬ್ಬರನ್ನು ಬಂಧಿಸಿದ್ದು, ವಿಚಾರಣೆ ಮುಂದುವರೆದಿದೆ ಎಂದಿದ್ದಾರೆ.

ಇದನ್ನೂ ಓದಿ: ಸಿಧು ಮೂಸೆವಾಲಾ ಹತ್ಯೆ ಪ್ರಕರಣ.. ಗೋಲ್ಡಿ ಬ್ರಾರ್​ ವಿರುದ್ಧ ರೆಡ್​ ಕಾರ್ನರ್​ ನೋಟಿಸ್ ಜಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.