ETV Bharat / bharat

ಕೊರೊನಾ ನಿರ್ಬಂಧ ಸಡಿಲಿಕೆ ಎಫೆಕ್ಟ್​.. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೆಚ್ಚಿದ ಪ್ರಯಾಣಿಕರ ದಟ್ಟಣೆ

ಕೊರೊನಾ ಎರಡನೇ ಅಲೆ ಉಲ್ಬಣಗೊಂಡು 2 ತಿಂಗಳು ದೇಶೀಯ ವಿಮಾನ ಸಂಚಾರವನ್ನು ತಡೆ ಹಿಡಿಯಲಾಗಿತ್ತು. ಈ ವೇಳೆ ವಿಮಾನ ಪ್ರಯಾಣಿಕರ ಸಂಖ್ಯೆ ಭಾರೀ ಕುಸಿದಿತ್ತು. 2020ರಲ್ಲಿಯೂ ಕೂಡ 13.51 ಮಿಲಿಯನ್​ ಜನರು ಮಾತ್ರ ಪ್ರಯಾಣ ಬೆಳೆಸಿದ್ದರು..

bengaluru
ಬೆಂಗಳೂರು ವಿಮಾನ ನಿಲ್ದಾಣ
author img

By

Published : Jan 24, 2022, 5:23 PM IST

ಮುಂಬೈ : ದೇಶದ ಎಲ್ಲ ಕ್ಷೇತ್ರಗಳ ಹಬ್​ ಆಗುತ್ತಿರುವ ರಾಜಧಾನಿ ಬೆಂಗಳೂರು ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲೂ ಮುಂದಿದೆ. ಇಲ್ಲಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ 2021ರಲ್ಲಿ ಬರೋಬ್ಬರಿ 16.07 ಮಿಲಿಯನ್​ ಜನರು ಪ್ರಯಾಣಿಸಿದ್ದಾರೆ. ಇದು ಕೊರೊನಾ ನಿರ್ಬಂಧದ ಬಳಿಕ ಶೇ.18.9ರಷ್ಟು ಏರಿಕೆ ಕಂಡಿದೆ.

ಕೋವಿಡ್​ ಎರಡನೇ ಅಲೆಯ ಬಳಿಕ ನಿರ್ಬಂಧಗಳ ಸಡಿಲಿಕೆ ಮತ್ತು ಲಸಿಕೆ ನೀಡಿಕೆ ಪ್ರಮಾಣ ಹೆಚ್ಚಳ ಮಾಡಿದ ಬಳಿಕ ವಿಮಾನ ಪ್ರಯಾಣಿಕರ ಸಂಖ್ಯೆಯೂ ಏರಿಕೆ ಕಂಡಿದೆ ಎಂದು ವಿಮಾನ ನಿಲ್ದಾಣಾಧಿಕಾರಿಗಳು ತಿಳಿಸಿದ್ದಾರೆ.

ಕೊರೊನಾ ಎರಡನೇ ಅಲೆ ಉಲ್ಬಣಗೊಂಡು 2 ತಿಂಗಳು ದೇಶೀಯ ವಿಮಾನ ಸಂಚಾರವನ್ನು ತಡೆ ಹಿಡಿಯಲಾಗಿತ್ತು. ಈ ವೇಳೆ ವಿಮಾನ ಪ್ರಯಾಣಿಕರ ಸಂಖ್ಯೆ ಭಾರೀ ಕುಸಿದಿತ್ತು. 2020ರಲ್ಲಿಯೂ ಕೂಡ 13.51 ಮಿಲಿಯನ್​ ಜನರು ಮಾತ್ರ ಪ್ರಯಾಣ ಬೆಳೆಸಿದ್ದರು.

ಇದನ್ನೂ ಓದಿ: ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿ ಸಿಎಂ ಬೊಮ್ಮಾಯಿ ಆದೇಶ

ಕೊರೊನಾಪೂರ್ವ ಅಂದರೆ, 2019ರಲ್ಲಿ 33.65 ಮಿಲಿಯನ್ ಪ್ರಯಾಣಿಕರು ಈ ನಿಲ್ದಾಣದಿಂದ ಪ್ರಯಾಣಿಸುತ್ತಿದ್ದರು. ಕೊರೊನಾ ಬಳಿಕ ಈ ಸಂಖ್ಯೆ ಇಳಿಕೆ ಕಂಡಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಶೇ.48ರಷ್ಟು ಚೇತರಿಕೆ ಕಂಡಿದೆ ಎಂದು ವಿಮಾನ ನಿಲ್ದಾಣದ ನಿರ್ವಾಹಕರು ತಿಳಿಸಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣವು ಪ್ರಸ್ತುತ ಏರ್ ಬಬಲ್ ವ್ಯವಸ್ಥೆಯ ಅಡಿಯಲ್ಲಿ 20 ಅಂತಾರಾಷ್ಟ್ರೀಯ ಸ್ಥಳಗಳಿಗೆ ಹಾರಾಟ ಸಂಪರ್ಕ ಹೊಂದಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.