ನವದೆಹಲಿ: ಲೋಕಸಭೆಯಲ್ಲಿ ದೆಹಲಿಯ ರಾಷ್ಟ್ರೀಯ ರಾಜಧಾನಿ(ತಿದ್ದುಪಡಿ) ಮಸೂದೆ 2021 ಅಂಗೀಕಾರವಾಗಿದೆ. ಈ ಮಸೂದೆಯನ್ನು ರಾಜ್ಯ ಗೃಹ ಖಾತೆ ಸಚಿವ ಕಿಶನ್ ರೆಡ್ಡಿ ಮಂಡಿಸಿದ್ದರು. ಇದೀಗ ಮಸೂದೆ ಅಂಗೀಕಾರ ಪಡೆದುಕೊಂಡಿದೆ.
ಇನ್ನು ಈ ಕುರಿತು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಇಂದು ಲೋಕಸಭೆಯಲ್ಲಿ ಜಿಎನ್‌ಸಿಟಿಡಿ ತಿದ್ದುಪಡಿ ಮಸೂದೆ ಅಂಗೀಕಾರವು ದೆಹಲಿ ಜನರಿಗೆ ಮಾಡಿದ ಅವಮಾನವಾಗಿದೆ. ಮಸೂದೆ ಜನರಿಂದ ಮತ ಚಲಾಯಿಸಿದವರಿಂದ ಅಧಿಕಾರವನ್ನು ಕಿತ್ತುಕೊಂಡು ಸೋಲನುಭವಿಸಿದ ಮಂದಿಗೆ ದೆಹಲಿ ಅಧಿಕಾರ ನಡೆಸುವ ಅವಕಾಶ ನೀಡುತ್ತದೆ. ಬಿಜೆಪಿ ಜನರನ್ನು ಮೂರ್ಖರನ್ನಾಗಿ ಮಾಡಿದೆ ಎಂದಿದ್ದಾರೆ.