ನವದೆಹಲಿ: 2022ನೇ ಸಾಲಿನ ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 18 ರಿಂದ ಪ್ರಾರಂಭವಾಗಲಿದೆ. ಆಗಸ್ಟ್ 12ರಂದು ಅಧಿವೇಶನ ಮುಕ್ತಾಯವಾಗಲಿದೆ ಎಂದು ಲೋಕಸಭೆಯ ಸಚಿವಾಲಯ ತಿಳಿಸಿದೆ.
ಮುಂಗಾರು ಅಧಿವೇಶನದ ಕುರಿತು ಗುರುವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಲೋಕಸಭೆಯ ಸಚಿವಾಲಯ, ಸಂಸತ್ತಿನ ಉಭಯ ಸದನಗಳು ಜುಲೈ 18ರಿಂದ ಸಭೆ ಸೇರುವ ಸಾಧ್ಯತೆಯಿದೆ ಎಂದು ಹೇಳಿದೆ.
ಕಳೆದ ಮುಂಗಾರು ಅಧಿವೇಶನವು ಪಕ್ಷಗಳ ಗದ್ದಲದಲ್ಲೇ ಮುಗಿದು ಹೋಗಿತ್ತು. ಪೆಗಾಸಸ್ ಹಗರಣ, ರೈತರ ಪ್ರತಿಭಟನೆಗಳು ಮತ್ತು ಬೆಲೆ ಏರಿಕೆ, ವಿಶೇಷವಾಗಿ ತೈಲ ಬೆಲೆ ಏರಿಕೆಯ ಬಗ್ಗೆ ಚರ್ಚೆಗೆ ಅವಕಾಶ ನೀಡಲು ಸರ್ಕಾರ ಒಪ್ಪದೇ ಇರುವಿಕೆಗೆ ವಿರೋಧ ಪಕ್ಷಗಳು ಆಕ್ರೋಶ ಹೊರಹಾಕಿ ಉಭಯ ಸದನಗಳ ಸಭೆಗೆ ಅಡ್ಡಿಪಡಿಸಿದ್ದವು.
ಇದನ್ನೂ ಓದಿ: ರಾಷ್ಟ್ರಪತಿಯಾಗಲು 115 ಜನರಿಂದ ನಾಮಪತ್ರ: ಇಬ್ಬರು ಬಿಟ್ಟು ಎಲ್ಲರದ್ದೂ ರಿಜೆಕ್ಟ್! ಕಾರಣ ಗೊತ್ತೇ?