ETV Bharat / bharat

ಸದ್ಯಕ್ಕೆ ಪ್ರಾಥಮಿಕ ಶಾಲೆಗಳ ಪುನಾರಂಭ ಬೇಡ : ಗೃಹ ವ್ಯವಹಾರಗಳ ಸಂಸದೀಯ ಸಮಿತಿಯಿಂದ ವರದಿ - ಕಾಂಗ್ರೆಸ್ ಸಂಸದ ಆನಂದ್ ಶರ್ಮಾ ನೇತೃತ್ವದ ಸಂಸದೀಯ ಸಮಿತಿ

ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ಶಾಲೆಗಳ ಪುನಾರಂಭ ಸದ್ಯಕ್ಕೆ ಬೇಡ ಎಂಬ ಬಗ್ಗೆ ಕೇಂದ್ರಕ್ಕೆ ವರದಿ ಸಲ್ಲಿಕೆಯಾಗಿದೆ. ಸಾಮಾಜಿಕ ಅಂತರ, ಮಾಸ್ಕ್​ ಧರಿಸುವುದು, ಕೈ ತೊಳೆಯುವುದು, ಶಾಲೆಗಳ ನೈರ್ಮಲ್ಯೀಕರಣಕ್ಕೆ ವಿಶೇಷ ಒತ್ತು ನೀಡಬೇಕು. ಪ್ರಸ್ತುತ ಸಾಂಕ್ರಾಮಿಕ ರೋಗವು ಈಗಾಗಲೇ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ತಂದಿದೆ. ಜನರು ವಿವಿಧ ಕಾರಣಗಳಿಂದ ಆತಂಕ ಮತ್ತು ಒತ್ತಡವನ್ನು ಎದುರಿಸುತ್ತಿದ್ದಾರೆ ಎಂದು ಸಮಿತಿಯ ವರದಿ ಹೇಳಿದೆ.

Don't open schools for primary and pre-primary students: Parliamentary Committee on Home Affairs
ಪ್ರಾಥಮಿಕ ಶಾಲೆಗಳನ್ನು ತೆರೆಯಬಾರದು: ಗೃಹ ವ್ಯವಹಾರಗಳ ಸಂಸದೀಯ ಸಮಿತಿಯಿಂದ ವರದಿ
author img

By

Published : Dec 15, 2021, 8:05 AM IST

ನವದೆಹಲಿ: ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ಶಾಲೆಗಳನ್ನು ತೆರೆಯಬಾರದು ಮತ್ತು ಲಸಿಕೆಗಳು ಲಭ್ಯವಾಗುವವರೆಗೆ ಆನ್‌ಲೈನ್ ಬೋಧನಾ ವಿಧಾನಗಳನ್ನು ಮುಂದುವರಿಸಬೇಕು ಎಂದು ಕೇಂದ್ರ ಗೃಹ ವ್ಯವಹಾರಗಳ ಸಂಸದೀಯ ಸಮಿತಿ ಸೂಚಿಸಿದೆ.

ಕಾಂಗ್ರೆಸ್ ಸಂಸದ ಆನಂದ್ ಶರ್ಮಾ ನೇತೃತ್ವದ ಸಂಸದೀಯ ಸಮಿತಿಯು ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ಆನ್‌ಲೈನ್ ಶಿಕ್ಷಣವನ್ನು ಮುಂದುವರಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು, ಸಮಿತಿಯು 236 ಪುಟಗಳ ವರದಿಯನ್ನು ಡಿಸೆಂಬರ್ 10ರಂದು ಕೇಂದ್ರಕ್ಕೆ ಸಲ್ಲಿಸಿದೆ.

Health experts support schools reopening: ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಪುನರಾರಂಭಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಮಕ್ಕಳಿಗೆ ಲಸಿಕೆ ಹಾಕದಿದ್ದರೂ ಶಾಲೆಯನ್ನು ಪುನಾರಂಭಿಸಲು ಬೆಂಬಲ ಸೂಚಿಸಿ ಕೆಲವು ಆರೋಗ್ಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಿದರೆ ಯಾವುದೇ ಹಾನಿ ಉಂಟಾಗುವುದಿಲ್ಲ. ಮಕ್ಕಳಲ್ಲಿ ಬಲವಾದ ರೋಗ ನಿರೋಧಕ ಶಕ್ತಿ ಇದ್ದು, ಆ ಶಕ್ತಿ ಕೋವಿಡ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ಆರ್ಗನೈಸ್ಡ್​ ಮೆಡಿಸಿನ್ ಅಕಾಡೆಮಿಕ್ ಗಿಲ್ಡ್​ನ ಹಿರಿಯ ಆರೋಗ್ಯ ತಜ್ಞೆ ಸುನೀಲಾ ಗಾರ್ಗ್ ಹೇಳಿದ್ದರು.

ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡದ (National Technical Advisory Group) ಸದಸ್ಯರು ಇತ್ತೀಚಿಗೆ ಸಭೆಯೊಂದನ್ನು ನಡೆಸಿದ್ದು, ಕೋವಿಡ್​ ವಿರುದ್ಧ ಲಸಿಕೆ ತಯಾರಿಸುತ್ತಿರುವ ಕಂಪನಿಗಳು ಮಕ್ಕಳಿಗೆ ನೀಡುವ ಲಸಿಕೆಗಳ ಮೇಲೆ ವೈಜ್ಞಾನಿಕ ಪ್ರಯೋಗಗಳನ್ನು ಇನ್ನೂ ನಡೆಸುತ್ತಿವೆ ಎಂದು ಸಭೆಯಲ್ಲಿ ತಿಳಿಸಿದ್ದರು.

ಈಗ ಎಲ್ಲವನ್ನೂ ಗಣನೆಗೆ ತೆಗೆದುಕೊಂಡ ಕಾಂಗ್ರೆಸ್ ಸಂಸದ ಆನಂದ್ ಶರ್ಮಾ ನೇತೃತ್ವದ ಸಂಸದೀಯ ಸಮಿತಿ ಆನ್‌ಲೈನ್ ಮತ್ತು ಆಫ್‌ಲೈನ್ ತರಗತಿಗಳನ್ನು ಒಳಗೊಂಡಂತೆ ಮಿಶ್ರ ಕಲಿಕೆಯ ವಿಧಾನವನ್ನು ಪ್ರೋತ್ಸಾಹಿಸಬೇಕು, ತರಗತಿಗಳು ಹಂತ ಹಂತವಾಗಿ ಪ್ರಾರಂಭವಾಗಬಹುದು ಎಂದು ರಾಜ್ಯಗಳಿಗೆ ಸೂಚನೆ ನೀಡಿದೆ.

Covid and Mental health: ಸಾಮಾಜಿಕ ಅಂತರ, ಮಾಸ್ಕ್​ ಧರಿಸುವುದು, ಕೈ ತೊಳೆಯುವುದು, ಶಾಲೆಗಳ ನೈರ್ಮಲ್ಯೀಕರಣಕ್ಕೆ ವಿಶೇಷ ಒತ್ತು ನೀಡಬೇಕು. ಪ್ರಸ್ತುತ ಸಾಂಕ್ರಾಮಿಕ ರೋಗವು ಈಗಾಗಲೇ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ತಂದಿದೆ. ಜನರು ವಿವಿಧ ಕಾರಣಗಳಿಂದ ಆತಂಕ ಮತ್ತು ಒತ್ತಡವನ್ನು ಎದುರಿಸುತ್ತಿದ್ದಾರೆ ಎಂದು ಸಮಿತಿಯ ವರದಿ ಹೇಳಿದೆ.

ನಿರುದ್ಯೋಗ, ಆರ್ಥಿಕ ಸಂಕಷ್ಟ ಮತ್ತು ಕೌಟುಂಬಿಕ ಹಿಂಸಾಚಾರ ಮುಂತಾದವುಗಳನ್ನೂ ಜನರು ಎದುರಿಸುತ್ತಿದ್ದು, ವಿಶೇಷ ಕಾಳಜಿ ಅಗತ್ಯವಿದೆ. ಜನರ ಮಾನಸಿಕ ಅನಾರೋಗ್ಯದಂತಹ ಸಮಸ್ಯೆಗಳನ್ನು ತೊಡದುಹಾಕಬೇಕಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೋವಿಡ್​ನ ಪ್ರಭಾವದಿಂದ ಉಂಟಾಗುವ ಭಯ, ಚಿಂತೆ ಮತ್ತು ಆತಂಕಗಳ ವಿರುದ್ಧ ಹೋರಾಡಲು ಜನರಿಗೆ ಸಲಹೆ ನೀಡಲು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಆರೋಗ್ಯ ಕೇಂದ್ರಗಳಲ್ಲಿ ಮಾನಸಿಕ ಆರೋಗ್ಯ ವೈದ್ಯರನ್ನು ನೇಮಕ ಮಾಡಬೇಕು. ಶಾಲಾಮಕ್ಕಳಿಗೆ ಆನ್‌ಲೈನ್ ತರಗತಿಗಳು ಮತ್ತು ಅದಕ್ಕೆ ಸಂಬಂಧಿಸಿದ ಜೀವನ ಶೈಲಿಯಿಂದಾಗಿ ಕಣ್ಣು ಮತ್ತು ಕಿವಿಗಳ ಮೇಲಿನ ಒತ್ತಡ, ಬೊಜ್ಜು, ನಿದ್ರಾಹೀನತೆ, ಆತಂಕದಂತಹ ಸಮಸ್ಯೆ ಕಾಣುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಶಾಲಾ ಮಕ್ಕಳಿಗೆ ಆರರಿಂದ ಏಳು ಗಂಟೆಗಳ ಬೋಧನೆಯ ಜೊತೆಗೆ ವಿರಾಮ ನೀಡುವುದು, ವ್ಯಾಯಾಮಗಳನ್ನು ಮಾಡುವುದು. ವಿದ್ಯಾರ್ಥಿಗಳು ಎದುರಿಸುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಚರ್ಚಿಸಲು ಕಾಲಕಾಲಕ್ಕೆ ಶಿಕ್ಷಣ ಸಂಸ್ಥೆಗಳು ವೆಬಿನಾರ್ ಆಯೋಜಿಸಬಹುದು ಎಂದು ಸಂಸದೀಯ ಸಮಿತಿ ಶಿಫಾರಸು ಮಾಡಿದೆ.

ಇದನ್ನೂ ಓದಿ: ನೀವು ಒಮಿಕ್ರಾನ್​ ವ್ಯಾಪಿತ ದೇಶದಿಂದ ಬರುತ್ತಿದ್ದೀರಾ.. ಆರ್​​ಟಿಪಿಸಿಆರ್ ಟೆಸ್ಟ್​ಗೆ​ ಈಗಲೇ ನೋಂದಣಿ ಮಾಡಿಕೊಳ್ಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.