ETV Bharat / bharat

ಪೆಗಾಸಸ್‌, ಕೃಷಿ ಕಾಯ್ದೆ ಗದ್ದಲಕ್ಕೆ ಸಂಸತ್‌ ಸಮಯ ವ್ಯರ್ಥ: ಉಭಯ ಕಲಾಪಗಳು ನಾಳೆಗೆ ಮುಂದೂಡಿಕೆ

ಇದೇ 19 ರಿಂದ ಆರಂಭವಾಗಿರುವ ಸಂಸತ್ತಿನ ಮುಂಗಾರು ಅಧಿವೇಶನದ ಇಂದಿನ ಉಭಯ ಕಲಾಪದಲ್ಲೂ ಪೆಗಾಸಸ್‌ ಹಾಗೂ ಕೃಷಿ ಕಾಯ್ದೆಗಳು ಪ್ರತಿಧ್ವನಿಸಿವೆ. ವಿಪಕ್ಷಗಳು ಚರ್ಚೆಗೆ ಪಟ್ಟು ಹಿಡಿದು ಪದೇ ಪದೇ ಗದ್ದಲ ಉಂಟುಮಾಡಿದ ಕಾರಣ ಲೋಕಸಭೆ ಹಾಗೂ ರಾಜ್ಯಸಭೆಯ ಕಲಾಪಗಳನ್ನು ನಾಳೆಗೆ ಮುಂದೂಡಲಾಗಿದೆ.

parliament monsoon session uproar by opposition parties pegasus issue corona farm laws
ಸಂಸತ್‌ನಲ್ಲಿ ಮತ್ತೆ ಪ್ರತಿಧ್ವನಿಸಿದ ಪೆಗಾಸಸ್‌, ಕೃಷಿ ಕಾಯ್ದೆಗಳು; ಉಭಯ ಕಲಾಪಗಳು ನಾಳೆಗೆ ಮುಂದೂಡಿಕೆ
author img

By

Published : Jul 29, 2021, 7:36 PM IST

Updated : Jul 29, 2021, 8:05 PM IST

ನವದೆಹಲಿ: ಇಂದು ಬೆಳಿಗ್ಗೆ ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಓಂ ಬಿರ್ಲಾ ಬುಧವಾರ ಸದನದಲ್ಲಿ ನಡೆದ ಘಟನೆಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಪ್ರತಿಪಕ್ಷ ಸದಸ್ಯರು ಕಾಗದಗಳನ್ನು ಹರಿದು ಸ್ಪೀಕರ್‌ ಪೀಠದತ್ತ ಎಸೆದು ಪ್ರಧಾನಿ ಮೋದಿ ಅವರ ರಾಜೀನಾಮೆಗೆ ಒತ್ತಾಯಿಸಿದ್ದರು. ಅಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು. ಎಲ್ಲಾ ಸದಸ್ಯರು ಸದನದ ಘನತೆಯನ್ನು ಹೆಚ್ಚಿಸುವಂತೆ ಮನವಿ ಮಾಡಿದರು. ನಂತರ ಮಾತನಾಡಿದ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್, ಸರ್ಕಾರದ ಹಠಮಾರಿತದಿಂದ ವಿಪಕ್ಷಗಳು ಮಾತುಗಳು ಕೇಳುತ್ತಿಲ್ಲ ಎಂದು ಪ್ರತಿಭಟಿಸಿವೆ ಎಂದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಬುಧವಾರ ಕಾಗದಗಳನ್ನು ಹರಿದು ಹಾಕಿದ ಸದಸ್ಯರ ಕ್ಷಮೆ ಯಾಚಿಸಲು ಬಯಸುವುದಿಲ್ಲ ಎಂದರು. ಮತ್ತೆ ವಿರೋಧ ಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗಿ ಪ್ರತಿಭಟನೆಗೆ ಮುಂದಾದಾಗ ಸ್ಪೀಕರ್‌ ಓಂ ಬಿರ್ಲಾ ಅವರು ಸದನವನ್ನು ಬೆಳಿಗ್ಗೆ 11.30 ರವರೆಗೆ ಮುಂದೂಡಿದರು.

ಕಲಾಪ ಮತ್ತೆ ಪುನರಾರಂಭದಾಗ ಪೆಗಾಸಸ್‌, ಕೃಷಿ ಕಾಯ್ದೆಗಳ ವಿರುದ್ಧದ ವಿಪಕ್ಷಗಳು ಪ್ರತಿಭಟನೆಗೆ ಮುಂದಾದವು. ಗದ್ದಲ ಕೋಲಾಹಲದ ನಡುವೆಯೇ ಪ್ರಶ್ನೋತ್ತರಗಳು ಮುಂದುವರಿದವು. ಪ್ರಶ್ನೋತ್ತರ ಅಧಿವೇಶನದ ನಂತರ, ಸ್ಪೀಕರ್ ಸ್ಥಾನದಲ್ಲಿದ್ದ ರಾಜೇಂದ್ರ ಅಗರ್ವಾಲ್, ಶೂನ್ಯದ ಸಮಯದಲ್ಲಿ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದರು ಪ್ರತಿಪಕ್ಷಗಳು ಘೋಷಣೆಗಳನ್ನು ಕೂಗಿದವು.

ಇದನ್ನೂ ಓದಿ: ಲೋಕಸಭೆಯಲ್ಲಿ 'ಪೆಗಾಸಸ್‌' ಗದ್ದಲದ ನಡುವೆಯೇ 2 ಮಸೂದೆಗಳು ಅಂಗೀಕಾರ

ಸದನವನ್ನು ಎರಡನೇ ಬಾರಿಗೆ ಮಧ್ಯಾಹ್ನ 12.30 ರವರೆಗೆ ಹಾಗೂ ಮೂರನೇ ಬಾರಿಗೆ ಮಧ್ಯಾಹ್ನ 2 ರವರೆಗೆ ಮುಂದೂಡಲಾಯಿತು. ಪ್ರತಿಪಕ್ಷಗಳ ಅಸಹಕಾರ ಮುಂದುವರಿದ ಹಿನ್ನೆಲೆಯಲ್ಲಿ ಲೋಕಸಭೆಯನ್ನು ನಾಳೆ ಬೆಳಗ್ಗೆ 11.30ಕ್ಕೆ ಮುಂದೂಡಲಾಯಿತು.

ರಾಜ್ಯಸಭೆಯಲ್ಲೂ ಪ್ರತಿಧ್ವನಿಸಿದ ಪೆಗಾಸಸ್‌, ಕೃಷಿ ಕಾಯ್ದೆಗಳು

ರಾಜ್ಯಸಭೆಯಲ್ಲೂ ವಿರೋಧ ಪಕ್ಷಗಳ ಪ್ರತಿಭಟನೆ ಮುಂದುವರಿಯಿತು. ಕಲಾಪ ಆರಂಭವಾಗುತ್ತಿದ್ದಂತೆ ಪೆಗಾಸಸ್ ಸೇರಿದಂತೆ ಅವರು ಎತ್ತಿದ ವಿಷಯಗಳ ಬಗ್ಗೆ ಚರ್ಚಿಸಲು ಮೊದಲೇ ನಿಗದಿಯಾಗಿದ್ದ ಚಟುವಟಿಕೆಗಳನ್ನು ರದ್ದುಗೊಳಿಸಬೇಕೆಂದು ಪ್ರತಿಪಕ್ಷಗಳು ನೀಡಿದ ನೋಟಿಸ್‌ಗಳನ್ನು ತಿರಸ್ಕರಿಸಲಾಗಿದೆ ಎಂದು ಸಭಾಪತಿ ಎಂ. ವೆಂಕಯ್ಯ ನಾಯ್ಡು ಘೋಷಿಸಿದರು.

ಕಾಂಗ್ರೆಸ್ ಸದಸ್ಯರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ತೃಣಮೂಲ ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟಿಸಿದಾಗ, ಕಾಂಗ್ರೆಸ್ ಸದಸ್ಯರೂ ಅವರೊಂದಿಗೆ ಸೇರಿಕೊಂಡರು. ತಮ್ಮ ಆಸನಗಳತ್ತ ತೆರಳುವಂತೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಮನವಿ ಮಾಡಿದರು. ಈ ವೇಳೆ ಪ್ರತಿಪಕ್ಷಗಳು ರಾಜ್ಯಸಭಾ ಕಲಾವನ್ನು ಬಹಿಷ್ಕರಿಸುವಂತೆ ಕರೆ ನೀಡಿದವು. ಈ ಹಂತದಲ್ಲಿ ಸದಸ್ಯರ ವರ್ತನೆ ಕುರಿತು ಬುಧವಾರ ಸುಪ್ರೀಂ ಕೋರ್ಟ್ ಹೇಳಿಕೆಗಳನ್ನು ವೆಂಕಯ್ಯ ನಾಯ್ಡು ಸದನಕ್ಕೆ ನೆನಪಿಸಿದರು. ಆದರೆ, ವಿರೋಧ ಗದ್ದಲ ಮಾತ್ರ ಮುಂದುರಿದ ಹಿನ್ನೆಲೆಯಲ್ಲಿ ಸದನವನ್ನು ಮಧ್ಯಾಹ್ನ 12 ರವರೆಗೆ ಮುಂದೂಡಲಾಯಿತು.

ಇದನ್ನೂ ಓದಿ: 'ಪೆಗಾಸಸ್‌ ಗದ್ದಲ': 4ನೇ ದಿನವೂ ಸಂಸತ್‌ನಲ್ಲಿ ಕೋಲಾಹಲ: ಉಭಯ ಕಲಾಪಗಳು ನಾಳೆಗೆ ಮುಂದೂಡಿಕೆ

ಕಲಾಪ ಪುನರಾರಂಭದಾಗಲೂ ವಿಪಕ್ಷಗಳ ಗದ್ದಲ ಮುಂದುವರೆಯಿತು. ಸದನವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು. ಸಭಾಪತಿ ವೆಂಕಯ್ಯ ನಾಯ್ಡು ಅವರು ವಿರೋಧ ಪಕ್ಷಗಳ ಪ್ರತಿಭಟನೆಯೊಂದಿಗೆ ಸದನದ ಕಲಾಪಕ್ಕೆ ಅಡ್ಡಿಯುಂಟಾದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಅದರ ಮೂಲಕ 90 ಸದಸ್ಯರು ಚರ್ಚೆಗಾಗಿ ನೀಡಿದ್ದ ನೋಟಿಸ್‌ಗಳನ್ನು ಅದು ಸ್ವೀಕರಿಸಿದ್ದರೂ ಸದನದಲ್ಲಿ ಮಾತನಾಡಲು ಅವಕಾಶ ಸಿಗದಿರುವುದು ಬೇಸರದ ಸಂಗತಿ ಎಂದರು.

ಒಟ್ಟು 69 ಗಂಟೆಗಳ ಶೂನ್ಯ ಸಮಯದ ವಿಷಯಗಳಿದ್ದರೆ ಅವುಗಳಲ್ಲಿ 12 ವಿಷಯಗಳನ್ನು ಇಂದು ಚರ್ಚಿಸಬೇಕಾಗಿದೆ. 23 ವಿಶೇಷ ವಿಷಯಗಳ ಹೊರತಾಗಿಯೂ, ಅವುಗಳನ್ನು ಚರ್ಚಿಸಲು ಸಾಧ್ಯವಾಗಲಿಲ್ಲ. ಸದನ ಪ್ರಾರಂಭವಾದ ನಂತರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ 202 ಅಂಶಗಳ ಫ್ಯಾಕ್ಟರಿಂಗ್‌ ನಿಯಂತ್ರಣ ತಿದ್ದುಪಡಿ ಮಸೂದೆಯನ್ನು ಮಂಡಿಸಿದರು. ಪ್ರತಿಪಕ್ಷಗಳ ಗದ್ದಲದ ನಡುವೆ ರಾಜ್ಯಸಭೆ ಮಸೂದೆಯನ್ನು ಅಂಗೀಕರಿಸಿತು. ಪ್ರತಿಭಟನೆ ಮುಂದುವರೆದಿದ್ದರಿಂದ ಸದನವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.

ಸರ್ಕಾರದ ಬೊಕ್ಕಸದಿಂದ 53.85 ಕೋಟಿ ರೂ. ಖರ್ಚು

ಜುಲೈ 19 ರಿಂದ ಪ್ರಾರಂಭವಾದ ಮಾನ್ಸೂನ್ ಅಧಿವೇಶನದಲ್ಲಿ ಈವರೆಗೆ 9 ದಿನಗಳ ಕಾಲ ನಡೆದಿದೆ. ಕಳೆದ 7 ದಿನಗಳ ನಡಾವಳಿಯ ಬಗ್ಗೆ ಮಾತನಾಡುತ್ತಾ, ಲೋಕಸಭೆಯು 4 ಗಂಟೆಗಳ ಕಾಲ ಮತ್ತು ರಾಜ್ಯಸಭೆಯು ಕೇವಲ 8.2 ಗಂಟೆಗಳ ಕಲಾಪ ನಡೆದಿದೆ.

ಲೋಕಸಭೆಯಲ್ಲಿ 38 ಗಂಟೆಗಳ ಕೋಲಾಹಲ ಕಳೆದುಹೋದರೆ, ರಾಜ್ಯಸಭೆಯಲ್ಲಿ 33.8 ಗಂಟೆಗಳು ಗದ್ದಲದಿಂದ ಮುಗಿದಿದೆ. ಈ ಅವಧಿಯಲ್ಲಿ ಎರಡೂ ಸದನಗಳು ಸೇರಿದಂತೆ ಸರ್ಕಾರದ ಬೊಕ್ಕಸದಿಂದ 53.85 ಕೋಟಿ ರೂ. ಖರ್ಚಾಗಿದೆ. ಸದನದ ಒಂದು ಗಂಟೆಯ ನಡಾವಳಿಯ ವೆಚ್ಚ ಸುಮಾರು 2.5 ಲಕ್ಷ ರೂಪಾಯಿಗಳು.

Last Updated : Jul 29, 2021, 8:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.