ETV Bharat / bharat

'ನಿಮ್ಮ ಕನಸುಗಳಿಗಾಗಿ ಮಕ್ಕಳ ಮೇಲೆ ಒತ್ತಡ ಹಾಕಬೇಡಿ; ಭವಿಷ್ಯದ ಬಗ್ಗೆ ಮುಕ್ತವಾಗಿ ನಿರ್ಧರಿಸಲು ಬಿಡಿ': ಪೋಷಕರಿಗೆ ಮೋದಿ ಕಿವಿಮಾತು - ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮ

ಶಾಲಾ ಮಕ್ಕಳು, ಶಿಕ್ಷಕರು ಹಾಗೂ ಪೋಷಕರೊಂದಿಗೆ ಇಂದು 'ಪರೀಕ್ಷೆ ಪೇ ಚರ್ಚಾ' ಸಂವಾದದಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು.

Pariksha Pe Charcha
Pariksha Pe Charcha
author img

By

Published : Apr 1, 2022, 1:25 PM IST

ನವದೆಹಲಿ: 'ಪರೀಕ್ಷಾ ಪೆ ಚರ್ಚಾ' ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿ ದೇಶದ ಎಲ್ಲ ರಾಜ್ಯಗಳ ಸಾವಿರಾರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಅನೇಕ ವಿಚಾರಗಳನ್ನು ಹಂಚಿಕೊಂಡಿರುವ ಅವರು, ಮಕ್ಕಳು, ಪೋಷಕರಿಗೆ ಅನೇಕ ರೀತಿಯ ಕಿವಿಮಾತುಗಳನ್ನು ಹೇಳಿದರು. ತಮ್ಮ ಕನಸುಗಳಿಗೋಸ್ಕರ ಮಕ್ಕಳ ಮೇಲೆ ಪೋಷಕರು ಒತ್ತಡ ಹಾಕಬಾರದು ಎಂದು ಹೇಳಿದ್ದು, ಭವಿಷ್ಯದ ಬಗ್ಗೆ ಮುಕ್ತರಾಗಿ ನಿರ್ಧಾರ ಕೈಗೊಳ್ಳುವ ಅವಕಾಶವನ್ನು ನೀಡಬೇಕು ಎಂದರು.

ನಿಮ್ಮ ನಿರೀಕ್ಷೆಗಳು ಈಡೇರದ ಕಾರಣ ಅವುಗಳನ್ನು ಮಕ್ಕಳ ಮೇಲೆ ಹಾಕುವುದು ಸರಿಯಲ್ಲ. ಪ್ರತಿಯೊಂದು ಮಗುವಿನಲ್ಲೂ ವಿಶಿಷ್ಟವಾದ ಪ್ರತಿಭೆ ಇದ್ದೇ ಇರುತ್ತದೆ. ಅವುಗಳನ್ನು ಹುಡುಕುವ ಕೆಲಸವಾಗಬೇಕು. ಕಾಲಕಾಲಕ್ಕೆ ತಕ್ಕಂತೆ ಹೊಸ ಹೊಸ ಅವಕಾಶ ಲಭ್ಯವಾಗ್ತಿದ್ದು, ಇಂದು ಇಂಟರ್​ನೆಟ್ ಬಳಕೆ ಮಾಡಿಕೊಂಡು ಪಾಠ ಕಲಿಯಲು ಸಾಧ್ಯವಾಗ್ತಿದೆ. ಡಿಜಿಟಲ್ ಮಾಧ್ಯಮದಿಂದ ಕಲಿಕಾ ವಿಧಾನ ಕೂಡ ಬದಲಾಗಿದ್ದು, ಆನ್​ಲೈನ್​​​ ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದರು.

ಪರೀಕ್ಷೆಗಳಿಂದ ಯಾವುದೇ ಕಾರಣಕ್ಕೂ ಹೆದರಬೇಡಿ. ಅವುಗಳೊಂದಿಗೆ ಮಾತನಾಡಿ. ಒತ್ತಡಗಳನ್ನು ಮೆಟ್ಟಿ ನಿಲ್ಲುವ ಕಲೆ ಕರಗತ ಮಾಡಿಕೊಳ್ಳುವಂತೆ ಮನವಿ ಮಾಡಿದ ನಮೋ, ಪರೀಕ್ಷೆಗಳೇ ನಿಮಗೆ ಹೆದರಬೇಕು, ಆ ರೀತಿಯಲ್ಲಿ ನಿಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಿ ಎಂದರು.

ಇದನ್ನೂ ಓದಿ: ಕೇಂದ್ರದ ವಿರುದ್ಧ ತಿರುಗಿಬಿದ್ದ ಪಂಜಾಬ್ ಸಿಎಂ: ವಿಧಾನಸಭೆಯಲ್ಲಿ ಮಹತ್ವದ ನಿರ್ಣಯ ಮಂಡನೆ

ಉದ್ವೇಗಕ್ಕೆ ಒಳಗಾಗುವುದನ್ನು ಯಾವುದೇ ಕಾರಣಕ್ಕೂ ಅಭ್ಯಾಸ ಮಾಡಬೇಡಿ. ಸರಳ ರೀತಿಯಲ್ಲಿ ಏಕಾಗ್ರತೆ ಬೆಳೆಸಿಕೊಳ್ಳಿ. ಪ್ರತಿದಿನ ಓದುವುದರಿಂದ ನಿಮ್ಮಲ್ಲಿ ಆತ್ಮವಿಶ್ವಾಸ ಬೆಳೆಯುತ್ತದೆ. ನಿಮ್ಮನ್ನು ನೀವು ಮೊದಲು ಅರ್ಥೈಸಿಕೊಳ್ಳಿ. ಬೇರೆಯವರು ನಮಗೆ ಕರುಣೆ ತೋರಬೇಕು ಎಂಬುದನ್ನು ನಿಮ್ಮ ಮನಸ್ಸಿನಿಂದ ತೆಗೆದು ಹಾಕಿ ಎಂದರು.

ಇದೇ ವೇಳೆ, ಯಾವುದೇ ಕಾರಣಕ್ಕೂ ನಿಮ್ಮಲ್ಲಿರುವ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇರಲಿ. ನಿಮಗೆ ಆಸಕ್ತಿ ಇರುವ ಕೋರ್ಸ್​ಗಳ ಬಗ್ಗೆ ಹೆಚ್ಚಿನ ಒತ್ತು ನೀಡಿ. ಓದುವುದರ ಜೊತೆಗೆ ಕ್ರೀಡೆಯ ಕಡೆಗೆ ಗಮನ ಹರಿಸಿ, ಅನೇಕ ವಿಷಯಗಳು ನಿಮಗೆ ಮೈದಾನದಿಂದಲೇ ಗೊತ್ತಾಗುತ್ತವೆ ಎಂದರು. ಪ್ರಧಾನಿ ನರೇಂದ್ರ ಮೋದಿ ನಡೆಸಿಕೊಡುತ್ತಿರುವ 5ನೇ ಪರೀಕ್ಷೆ ಪೇ ಚರ್ಚಾ ಕಾರ್ಯಕ್ರಮದಲ್ಲಿ ಕರ್ನಾಟಕದ 60 ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಎಂ.ಬಿ.ಜವಾಹರ್ ನವೋದಯ ವಿದ್ಯಾಲಯದ ವಿದ್ಯಾರ್ಥಿ ತರುಣ್ ಆನ್​ಲೈನ್​ ವಿಚಾರವಾಗಿ ಪ್ರಧಾನಿ ಮೋದಿ ಬಳಿ ಪ್ರಶ್ನೆ ಕೇಳಿ, ಉತ್ತರ ಪಡೆದುಕೊಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.