ETV Bharat / bharat

ಜೋಧ್‌ಪುರ ಸರೋವರದಲ್ಲಿ ತಾಲೀಮು ವೇಳೆ ಅರೆಸೇನಾ ಪಡೆಯ ಕ್ಯಾಪ್ಟನ್​​ ನಾಪತ್ತೆ

author img

By

Published : Jan 9, 2021, 1:02 PM IST

ಜೋಧ್‌ಪುರ ಸರೋವರದಲ್ಲಿ ನಾಪತ್ತೆಯಾಗಿರುವ ಭಾರತೀಯ ಅರೆಸೇನಾ ಪಡೆಯ ಕ್ಯಾಪ್ಟನ್ ಅಂಕಿತ್ ಗುಪ್ತಾ ಅವರನ್ನು ಹುಡುಕಲು ನೌಕಾಪಡೆಯ 100 ವಿಶೇಷ ಮಾರ್ಕೋಸ್ ಕಮಾಂಡೋಗಳನ್ನು ಕರೆಯಿಸಲಾಗಿದೆ.

Paramilitary captain missing in Jodhpur
ಜೋಧ್‌ಪುರ ಸರೋವರದಲ್ಲಿ ಅರೆಸೇನಾ ಪಡೆಯ ಕ್ಯಾಪ್ಟನ್​​ ನಾಪತ್ತೆ

ಜೋಧ್‌ಪುರ (ರಾಜಸ್ಥಾನ): ಗುರುವಾರದಿಂದ ಭಾರತೀಯ ಅರೆಸೇನಾ ಪಡೆಯ ಕ್ಯಾಪ್ಟನ್ ಅಂಕಿತ್ ಗುಪ್ತಾ ಕಾಣೆಯಾಗಿದ್ದು, ಮೂರನೇ ದಿನ ಶೋಧ ಕಾರ್ಯಾಚರಣೆ ಮುಂದುವರೆದಿದೆ.

ಜನವರಿ 7 ರಂದು ರಾಜಸ್ಥಾನದ ಜೋಧ್‌ಪುರದ ಸರೋವರದಲ್ಲಿ (ತಖಾಟ್ ಸಾಗರ್) ಸೇನಾ ಪಡೆ ತಾಲೀಮು ನಡೆಸುತ್ತಿತ್ತು. ಹೆಲಿಕಾಪ್ಟರ್‌ನಿಂದ ಸರೋವರಕ್ಕೆ ನಾಲ್ವರು ಜಿಗಿದಿದ್ದು, ಮೂವರು ಮಾತ್ರ ಬೋಟ್​ ಹತ್ತಿದ್ದಾರೆ. ಆದರೆ, ಅಂಕಿತ್ ಗುಪ್ತಾ ಮಾತ್ರ ನಾಪತ್ತೆಯಾಗಿದ್ದಾರೆ.

ಇದನ್ನೂ ಓದಿ: ಇಂಡೋ-ಪಾಕ್ ಅಂತಾರಾಷ್ಟ್ರೀಯ ಗಡಿಯಲ್ಲಿ 6 ಪಾಕಿಸ್ತಾನಿ ಪ್ರಜೆಗಳ ಬಂಧನ

ಮೂರು ದಿನಗಳಿಂದ ಎಸ್​ಡಿಆರ್​ಎಫ್​ ತಂಡ, ಪೊಲೀಸರು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದು, ನಿನ್ನೆ ರಾತ್ರಿ ನೌಕಾಪಡೆಯ 100 ವಿಶೇಷ ಮಾರ್ಕೋಸ್ ಕಮಾಂಡೋಗಳನ್ನು ಕರೆಯಿಸಲಾಗಿದೆ.

ತಖಾಟ್ ಸಾಗರ್ ಸುತ್ತಮುತ್ತಲಿನ ಪ್ರದೇಶವನ್ನು ಸೇನಾ ಸಿಬ್ಬಂದಿ ಸೀಲ್​ ಮಾಡಿದ್ದು, ಸಾಮಾನ್ಯ ಜನರು ಅಲ್ಲಿ ಸುಳಿಯದಂತೆ ತಡೆಯಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.