ETV Bharat / bharat

ದೇವಸ್ಥಾನದಲ್ಲಿ ಅನುಚಿತವಾಗಿ ವರ್ತಿಸಿದ ಪನ್ನಾ ರಾಜಮನೆತನದ ರಾಣಿ.. ಪ್ರಕರಣ ದಾಖಲಿಸಿ ಬಂಧಿಸಿದ ಪೊಲೀಸರು - ETV Bharath Kannada news

ಮಧ್ಯಪ್ರದೇಶದ ಪನ್ನಾದಲ್ಲಿರುವ ಪ್ರಸಿದ್ಧ ಜುಗಲ್‌ಕಿಶೋರ್ ದೇವಸ್ಥಾನದಲ್ಲಿ ಜನ್ಮಾಷ್ಟಮಿ ಉತ್ಸವದ ಸಂದರ್ಭದಲ್ಲಿ ಗರ್ಭಗುಡಿ ಪ್ರವೇಶಿಸಿ ಅರ್ಚಕನನ್ನು ನಿಂದಿಸಿದ ಪನ್ನಾ ರಾಜಮನೆತನದ ರಾಣಿಯನ್ನು ಪೊಲೀಸರು ಬಂಧಿಸಿದ್ದಾರೆ.

Panna maharani Hungama
Panna maharani Hungama
author img

By ETV Bharat Karnataka Team

Published : Sep 8, 2023, 7:00 PM IST

ಪನ್ನಾ (ಮಧ್ಯಪ್ರದೇಶ): ಇಲ್ಲಿನ ಜುಗಲ್ಕಿಶೋರ್ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಪೂಜೆಯ ವೇಳೆ ಪನ್ನಾ ರಾಜಮನೆತನದ ರಾಣಿ ಜಿತೇಶ್ವರಿ ದೇವಿಯು ಅನುಚಿತವಾಗಿ ವರ್ತಿಸಿದ್ದು, ಗದ್ದಲಕ್ಕೆ ಕಾರಣವಾಯಿತು. ನಂತರ ರಾಣಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂತರ ಪೂಜೆ ನಡೆಸಲಾಗಿದೆ.

ಘಟನೆ ಏನು?: ಗುರುವಾರ ರಾತ್ರಿ 12 ಗಂಟೆ ಜುಗಲ್ಕಿಶೋರ್ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಪೂಜೆ ನೆರವೇರಿಸಲಾಗಿತ್ತು. ಇದಕ್ಕೆ ಅಲ್ಲಿನ ರಾಜಮನೆತನದ ರಾಣಿ ಆಗಮಿಸಿದ್ದರು. ರಾಣಿ ಬಲವಂತವಾಗಿ ದೇವಾಲಯದ ಗರ್ಭಗುಡಿ ಪ್ರವೇಶಿಸಿ ಅರ್ಚಕರ ಕೈಯಿಂದ ಚಾಮರವನ್ನು ತೆಗೆದುಕೊಂಡು ತಾನು ಬೀಸುವುದಾಗಿ ಹೇಳಿದ್ದಾರೆ. ನಂತರ ಚಾಮರವನ್ನು ತಪ್ಪಾದ ರೀತಿಯಲ್ಲಿ ಬೀಸುತ್ತಿರುವುದನ್ನು ಕಂಡ ಭಕ್ತರು ಆಕ್ಷೇಪ ವ್ಯಕ್ತಪಡಿಸಿದರು. ರಾಣಿಯನ್ನು ಗರ್ಭಗುಡಿಯಿಂದ ಹೊರ ಕಳುಹಿಸುವಂತೆ ಭಕ್ತರಿಂದ ಒತ್ತಾಯ ಕೇಳಿಬಂದಿತ್ತು.

ಪೊಲೀಸರೊಂದಿಗೆ ಅನುಚಿತ ವರ್ತನೆ: ಈ ವೇಳೆ ರಾಣಿಯ ನಡೆ ಭಕ್ತರನ್ನು ಕೆರಳಿಸಿದೆ. ಇದಾದ ನಂತರ ದೇವಾಲಯದ ಅರ್ಚಕರು ಮತ್ತು ಇತರ ಜನರು ರಾಣಿ ಜಿತೇಶ್ವರಿಯನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೆ, ಅವರು ಹೆಚ್ಚು ಗಲಾಟೆ ಮಾಡಲು ಪ್ರಾರಂಭಿಸಿದ್ದಾರೆ. ರಾಣಿ ಒಪ್ಪದಿದ್ದಾಗ ಅರ್ಚಕ ಮತ್ತು ಇತರ ಜನರು ಸೇರಿ ಅವರನ್ನು ಗರ್ಭಗುಡಿಯಿಂದ ಹೊರ ಹಾಕಲು ಯತ್ನಿಸಿದರು. ಇಷ್ಟಾದ ಮೇಲೆಯೂ ರಾಣಿ ಹೆಚ್ಚು ಗಲಾಟೆ ಮಾಡಲಾರಂಭಿಸಿದರು. ಜನರು ಹೊರಕ್ಕೆ ಕಳುಹಿಸಲು ನೋಡಿದಾಗ ರಾಣಿ ಅಲ್ಲೇ ಕುಳಿತು ಪ್ರತಿಭಟಿಸಿದ್ದಾರೆ. ಇದಾದ ಬಳಿಕ ಸ್ಥಳದಲ್ಲಿದ್ದ ಪೊಲೀಸರ ನೆರವಿನೊಂದಿಗೆ ದೇವಸ್ಥಾನದ ಸಿಬ್ಬಂದಿ ರಾಣಿಯನ್ನು ಗರ್ಭಗುಡಿಯಿಂದ ಹೊರಕ್ಕೆ ಕರೆದೊಯ್ದಿದ್ದಾರೆ. ಮಹಾರಾಣಿ ಕೂಡ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ಸ್ಥಳದಲ್ಲಿದ್ದವರು ತಿಳಿಸಿದ್ದಾರೆ.

ರಾಣಿಯ ಬಂಧನ: ರಾಣಿಯ ಗಲಾಟೆಯಿಂದಾಗಿ ದೇವಸ್ಥಾನದ ಅರ್ಚಕರು ಆರತಿಯನ್ನು ಮಧ್ಯದಲ್ಲಿ ನಿಲ್ಲಿಸುವಂತಾಯಿತು. ಇದೇ ವೇಳೆ, ದೇವಸ್ಥಾನ ಸಮಿತಿಯ ವ್ಯವಸ್ಥಾಪಕ ಸಂತೋಷ್ ಕುಮಾರ್ ತಿವಾರಿ ಪೊಲೀಸರಿಗೆ ಮಹಾರಾಣಿ ಅಸಭ್ಯ ಕೃತ್ಯ ಎಸಗಿದ್ದಾಳೆ ಎಂದು ತಿಳಿಸಿದ್ದಾರೆ. ರಾಣಿ ಮದ್ಯದ ಅಮಲಿನಲ್ಲಿದ್ದಳು ಎಂದು ಕೆಲವರು ಹೇಳಿದ್ದಾರೆ.

ಈ ಪ್ರಕರಣ ಸಂಬಂಧ ಪನ್ನಾ ಕೊತ್ವಾಲಿ ಪೊಲೀಸರು ಮಹಾರಾಣಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಪನ್ನಾ ಎಸ್​ಪಿ ಸಾಯಿಕೃಷ್ಣ ಎಸ್ ತೋಟಾ ಮಾತನಾಡಿ, ದೇವಸ್ಥಾನದಲ್ಲಿ ಕೃಷ್ಣ ಜನ್ಮೋತ್ಸವದ ಸಂದರ್ಭದಲ್ಲಿ ಸಮಿತಿಯ ಸದಸ್ಯರೊಬ್ಬರು ಜಿತೇಶ್ವರಿ ದೇವಿಯನ್ನು ಕರೆದಿದ್ದರು. ಹಳೆಯ ಸಂಪ್ರದಾಯದ ಪ್ರಕಾರ ಪನ್ನಾ ರಾಜಮನೆತನಕ್ಕೆ ಆಹ್ವಾನ ನೀಡಲಾಗಿದೆ. ಆಹ್ವಾನದ ಪ್ರಕಾರ ಛತ್ರಸಾಲ್ ಎರಡನೇ ಚನ್ವಾರ್ ದೇವಸ್ಥಾನಕ್ಕೆ ಆಗಮಿಸ ಬೇಕಿತ್ತು. ಆದರೆ, ಛತ್ರಸಾಲ್ ಬದಲಿಗೆ ಅವರ ತಾಯಿ ಜಿತೇಶ್ವರಿ ದೇವಿ ದೇವಸ್ಥಾನಕ್ಕೆ ಬಂದಿದ್ದರು. ಅವರು ಅಲ್ಲಿ ಗದ್ದಲ ಸೃಷ್ಟಿಸಿದ ಹಿನ್ನೆಲೆ ಬಂಧಿಸಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಎಂದು ಮಾಹಿತಿ ನಿಡಿದ್ದಾರೆ.

ಇದನ್ನೂ ಓದಿ: ಜಿ-20 ಶೃಂಗಸಭೆ: ವಿಶ್ವ ನಾಯಕರಿಗೆ ಸಾಂಪ್ರದಾಯಿಕ ಬೆಳೆಗಳ ಪ್ರಾಮುಖ್ಯತೆ ತಿಳಿಸಲು ದೆಹಲಿಗೆ ತೆರಳಿದ ಬುಡಕಟ್ಟು ರೈತ ಮಹಿಳೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.