ETV Bharat / bharat

ಪ್ಯಾನ್-ಆಧಾರ್​ ಲಿಂಕ್​ಗೆ ಕೆಲವೇ ದಿನ ಬಾಕಿ: ಕಾರ್ಡ್ ನಿಷ್ಕ್ರಿಯಗೊಂಡರೆ ವ್ಯವಹಾರ ಬಂದ್.. ಇಲ್ಲಿದೆ ಜೋಡಣೆ ವಿಧಾನ​

ಒಮ್ಮೆ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ಅಗತ್ಯವಿರುವ ವ್ಯವಹಾರಗಳನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಬ್ಯಾಂಕ್​ ಖಾತೆಗೆ ಆಧಾರ್​ ಮತ್ತು ಪ್ಯಾನ್​ ಕಾರ್ಡ್​ಅನ್ನು ಲಿಂಕ್​ ಮಾಡಬೇಕಿದೆ. ಇದಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಲಿಂಕ್​ ಮಾಡುವ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ...

ಆಧಾರ್​
ಆಧಾರ್​
author img

By

Published : Jun 16, 2021, 3:55 PM IST

Updated : Jun 16, 2021, 4:33 PM IST

ನವದೆಹಲಿ : ಆಧಾರ್ ಕಾರ್ಡ್‌ ಜತೆ ಪ್ಯಾನ್ ಕಾರ್ಡ್‌ನ ಲಿಂಕ್ ಮಾಡುವ ಗಡುವು ಸಮೀಪಿಸುತ್ತಿದೆ. ಜೋಡಣೆ ಮಾಡುವ ದಿನಾಂಕ 2021ರ ಜೂನ್​ 30ಕ್ಕೆ ಕೊನೆಯಾಗಲಿದೆ. ಆದಾಯ ತೆರಿಗೆ ಇಲಾಖೆಯ ಸೂಚನೆಯ ಅನ್ವಯ, ಪ್ಯಾನ್ ಕಾರ್ಡ್‌ ಮತ್ತು ಆಧಾರ್ ಲಿಂಕ್​ ಜೋಡಣೆಯ ವಾಯ್ದೆ ಇದೇ ಜೂನ್​ 30ಕ್ಕೆ ಕೊನೆಗೊಳ್ಳಲಿದೆ. ಜೋಡಣೆಯಾಗದ ಕಾರ್ಡ್‌ಗಳು ನಿಷ್ಕ್ರಿಯಗೊಳ್ಳಲಿವೆ.

ಒಮ್ಮೆ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ಅಗತ್ಯವಿರುವ ವ್ಯವಹಾರಗಳನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಕಾರ್ಡ್‌ ತನ್ನ ಮೌಲ್ಯ ಕಳೆದುಕೊಳ್ಳುವ ಮುನ್ನ 12 ಸಂಖ್ಯೆಯನ್ನೊಳಗೊಂಡ ವಿಶಿಷ್ಟ ಗುರುತಿನ ಚೀಟಿಯ ಆಧಾರ್‌ನೊಂದಿಗೆ ಬ್ಯಾಂಕ್‌ ಖಾತೆಯ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್‌ ಕಾರ್ಡ್‌) ಜೋಡಣೆಯ ವಿಧಾನ ಇಲ್ಲಿದೆ.

PAN AADHAAR LINKING LAST DATE TODA
ಸರಳವಾಗಿ ಆಧಾರ್​-ಪ್ಯಾನ್ ಕಾರ್ಡ್​ ಜೋಡಣೆ

ಜೋಡಣೆ ಮಾಡುವ ವಿಧಾನ

*https://www.incometaxindiaefiling.gov.ingಗೆ ಭೇಟಿ ನೀಡಿ

*ಮುಖಪುಟದ ಎಡಭಾಗದಲ್ಲಿನ ಕೆಂಪು ಅಕ್ಷರದ ಲಿಂಕ್ ಆಧಾರ್​ (Link Aadhar​) ಆಯ್ಕೆ ಕ್ಲಿಕ್ ಮಾಡಿ,

* ಲಿಂಕ್ ಆಧಾರ್ ಡೈಲಾಗ್ ಬಾಕ್ಸ್​ ತೆರೆದುಕೊಳ್ಳುತ್ತದೆ.

* ಡೈಲಾಗ್​ ಬಾಕ್ಸ್​ನಲ್ಲಿ ಸೂಚಿಸಲಾದ ಪ್ಯಾನ್​ ನಂ, ಆಧಾರ್ ನಂಬರ್​, ಆಧಾರ್​ ಕಾರ್ಡ್​ನಲ್ಲಿ ನಮೋದಿತ ಹೆಸರು ಭರ್ತಿ ಮಾಡಿ.

*ಕ್ಯಾಪ್ಷನ್​ ಕೋಡ್​ ಸಂಖ್ಯೆ ನಮೋದಿಸಿ (ದಿವ್ಯಾಂಗರಿಗೆ ಓಟಿಪಿ ನಂಬರ್​ ಪಡೆಯುವ ಅವಕಾಶವಿದೆ)

*ಹಸಿರು ಪೆಟ್ಟಿಗೆಯಲ್ಲಿನ ಲಿಂಕ್ ಆಧಾರ್​ (Link Aadhar) ಆಯ್ಕೆ ಮಾಡಿಕೊಂಡರೆ ಆಧಾರ್ ಜೋಡಣೆಯಾದ ಬಾಕ್ಸ್ ತೆರೆದುಕೊಳ್ಳುತ್ತದೆ.

ಎಸ್​ಎಂಎಸ್​ ಮುಖಾಂತರ ಆಧಾರ್ ಜೋಡಣೆ

*ಅಂತರ್ಜಾಲ ಸಂಪರ್ಕವಿಲ್ಲದೇ ಮೊಬೈಲ್​ ಎಸ್​ಎಂಎಸ್​ ಬಳಸಿ ಪ್ಯಾನ್- ಆಧಾರ್ ಜೋಡಣೆ ಮಾಡಬಹುದು. ಆಧಾರ್​ನ 12 ವಿಶಿಷ್ಟ ಸಂಖ್ಯೆಗಳನ್ನು 567678 ಅಥವಾ 56161ಗೆ ಸಂದೇಶ ರವಾನಿಸಬಹುದು.

ಸಂದೇಶ ಕಳುಹಿಸುವ ವಿಧಾನ

ಯುಐಡಿಪ್ಯಾನ್​​<ಸ್ಥಳ>12 ವಿಶೇಷ ಸಂಖ್ಯೆಗಳು<ಸ್ಥಳ>ಪ್ಯಾನ್​ 10 ವಿಶೇಷ ಸಂಖ್ಯೆಗಳು

UIDPAN<space>12-digit Aadhaar><space>10-digit PAN

ಉದಾ: UIDPAN 444455556666 BBUDA8686Q

PAN AADHAAR LINKING LAST DATE TODA
ಸರಳವಾಗಿ ಆಧಾರ್​-ಪ್ಯಾನ್ ಕಾರ್ಡ್​ ಜೋಡಣೆ

1. ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ತೆರೆಯಿರಿ

2. ಬಳಕೆದಾರರು ಲಾಗಿನ್​ ನೋಂದಣಿ ಅಥವಾ ಲಾಗಿನ್​​ ಆಗದೆಯೂ ಜೋಡಣೆ ಮಾಡಿಕೊಳ್ಳಬಹುದು (ನಿಮ್ಮ ಪ್ಯಾನ್ {ಶಾಶ್ವತ ಖಾತೆ ಸಂಖ್ಯೆ: PAN} ಬಳಕೆದಾರ ID ಆಗಿರುತ್ತದೆ)

3. ಬಳಕೆದಾರರ ಐಡಿ, ಪಾಸ್‌ವರ್ಡ್, ಜನ್ಮ ದಿನಾಂಕ ನಮೂದಿಸಿ ಲಾಗಿನ್ ಆಗಿ

4. ಆಧಾರ್-ಪ್ಯಾನ್ ಲಿಂಕ್‌ಗೆ ಪಾಪ್-ಅಪ್ ವಿಂಡೋ ತೆರೆಯುತ್ತದೆ

5. ಪ್ಯಾನ್ ಕಾರ್ಡ್‌ನಲ್ಲಿರುವ ವಿವರಗಳ ಪ್ರಕಾರ ಹೆಸರು, ಜನ್ಮ ದಿನಾಂಕ, ಲಿಂಗ ಮುಂತಾದ ಮಾಹಿತಿಗಳು ಕಾಣಿಸುತ್ತವೆ

6. ಪರದೆಯ ಮೇಲೆ ಗೋಚರಿಸುವ ಪ್ಯಾನ್ ಕಾರ್ಡ್ ವಿವರಗಳನ್ನು ಆಧಾರದಲ್ಲಿ ನಮೂದಿಸಿದ ವಿವರಗಳೊಂದಿಗೆ ಪರಿಶೀಲಿಸಬೇಕು. ವಿವರಗಳಲ್ಲಿ ಯಾವುದೇ ವ್ಯತ್ಯಾಸಗಳಿದ್ದರೆ, ಇವೆರಡನ್ನು ಒಂದೇ ಎಂದು ಸರಿಪಡಿಸಬೇಕು

7. ವಿವರಗಳು ಹೊಂದಿಕೆಯಾದರೆ, ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು 'link Now' ಬಟನ್ ಕ್ಲಿಕ್ ಮಾಡಿ

8. ನಿಮ್ಮ ಆಧಾರ್ ಮತ್ತು ಪ್ಯಾನ್ ಅನ್ನು ನೀವು ಯಶಸ್ವಿಯಾಗಿ ಲಿಂಕ್ ಆಗಿದೆ ಎಂಬುದನ್ನು ತಿಳಿಸುವ ಸಂದೇಶವು ಪಾಪ್ - ಅಪ್ ವಿಂಡೋದೊಂದಿಗೆ ಕಾಣಿಸುತ್ತದೆ

9. ಮುಖಪುಟದಲ್ಲಿ ಗೋಚರಿಸುವ 'ಲಿಂಕ್ ಆಧಾರ್' ಅನ್ನು ಕ್ಲಿಕ್ ಮಾಡುವುದರ ಮೂಲಕ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ಅನ್ನು ನೇರವಾಗಿ ಲಿಂಕ್ ಮಾಡಬಹುದು

10. https://www.utiitsl.com/ ಅಥವಾ https://www.egov-nsdl.co.in/ ಗೆ ಭೇಟಿ ನೀಡಿ

Last Updated : Jun 16, 2021, 4:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.