ಮಧುರೈ: ಇಲ್ಲಿನ ಅಲಂಕಾನಲ್ಲೂರು ಮತ್ತು ಪಾಲಮೇಡುಗಳಂತಹ ವಿಶ್ವವಿಖ್ಯಾತ ಜಲ್ಲಿಕಟ್ಟು ನಡೆಯುತ್ತದೆ. ಮಟ್ಟು ಪೊಂಗಲ್ ನಿಮಿತ್ತ ಪಾಲಮೇಡುವಿನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಇಂದಿನಿಂದ ಆರಂಭವಾಗಿದೆ. ಈ ಸ್ಪರ್ಧೆಯಲ್ಲಿ 1000 ಕ್ಕೂ ಹೆಚ್ಚು ಗೂಳಿಗಳು ಭಾಗವಹಿಸುತ್ತಿವೆ. ಗೂಳಿಗಳನ್ನು ಹಿಡಿಯಲು 335 ಗೋರಕ್ಷಕರು ಸಿದ್ಧರಾಗಿದ್ದಾರೆ. ಎಲ್ಲ ಆಟಗಾರರು ಪ್ರಾರ್ಥನೆ ಮಾಡಿದ ನಂತರ ಆಟ ಕಣಕ್ಕೆ ಇಳಿದಿದ್ದಾರೆ.
ಸುಪ್ರೀಂಕೋರ್ಟ್ನ ತೀರ್ಪಿನಂತೆ ಪ್ರತಿ ಸುತ್ತಿನಲ್ಲಿ 25 ಆಟಗಾರರಿರುತ್ತಾರೆ ಮತ್ತು ಪ್ರತಿ 45 ನಿಮಿಷಗಳಿಗೊಮ್ಮೆ ಒಂದು ಸುತ್ತನ್ನು ಆಡಲಾಗುತ್ತದೆ. ಮೊದಲಿಗೆ ಪಾಲಮೇಡು ದೇವಸ್ಥಾನಗಳಿಗೆ ಸೇರಿದ ಹೋರಿಗಳನ್ನು ಹಿಡಿಯುವ ಸ್ಪರ್ಧೆ ನಡೆಯಲಿದೆ. ನಂತರ ಹೊರಗಿನಿಂದ ಸ್ಪರ್ಧೆಗೆ ಭಾಗವಹಿಸಲು ಬಂದ ಗೂಳಿಗಳಿಗೆ ಗೇಟ್ ತೆರೆಯಲಾಗುತ್ತದೆ.
ಮಧುರೈ ಪಾಲಮೇಡುವಿನ ಜಲ್ಲಿಕಟ್ಟು ಸ್ಪರ್ಧೆಯಲ್ಲಿ 9 ಹೋರಿಗಳನ್ನು ತಡೆದು ನಿಲ್ಲಿಸಿದ್ದ ಗೋರಕ್ಷಕ ಅರವಿಂದ್ ಎಂಬುವವರ ಮೇಲೆ ಗೂಳಿಯ ದಾಳಿ ಮಾಡಿದೆ. ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ, ವೈದ್ಯಕೀಯ ಚಿಕಿತ್ಸೆಯಿಂದ ಚೇತರಿಸಿಕೊಳ್ಳದೇ ಅರವಿಂದ್ ಸಾವನ್ನಪ್ಪಿದ್ದಾರೆ. ಅದೇ ರೀತಿ ತಿರುಚ್ಚಿ ಸೂರಿಯೂರಿನಲ್ಲಿ ನಡೆಯುತ್ತಿರುವ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಪ್ರೇಕ್ಷಕರೊಬ್ಬರು ಗೂಳಿ ಗುದ್ದಿ ಸಾವನ್ನಪ್ಪಿದ್ದಾರೆ.
ಮಧುರೈ ಪಾಲಮೇಡುವಿನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಇಂದು ಬೆಳಗ್ಗೆ 8 ರಿಂದ ಆರಂಭವಾಗಿತ್ತು. ಐದು ಸುತ್ತುಗಳು ಸ್ಪರ್ಧೆ ನಡೆದಿದೆ. ಇದರಲ್ಲಿ ಹಲವಾರು ಗೋರಕ್ಷಕರು ಗಾಯಗೊಂಡಿದ್ದಾರೆ. ಆದರೆ, 9 ಹೋರಿಗಳನ್ನು ರಕ್ಷಣೆ ಮಾಡಿ ಮೂರನೇ ಸ್ಥಾನದಲ್ಲಿದ್ದ ಅರವಿಂದ್ ಎಂಬುವವರಿಗೆ ಗಂಭೀರ ಗಾಯವಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸ್ಥಳದಲ್ಲಿದ್ದ ವೈದ್ಯಕೀಯ ತಂಡ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸಿದರೂ ಚೇತರಿಸಿಕೊಳ್ಳದೇ ಸಾವನ್ನಪ್ಪಿದ್ದಾರೆ. ಅರವಿಂದ್ (25) ಪುದುಕೊಟ್ಟೈ ಜಿಲ್ಲೆಯವರು ಎಂದು ತಿಳಿದು ಬಂದಿದೆ.
ವಿಜೇತರಿಗೆ ಬಹುಮಾನ ಘೋಷಿಸಿರುವ ಮುಖ್ಯಮಂತ್ರಿ: ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮತ್ತು ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಜಂಟಿಯಾಗಿ ಉತ್ತಮ ಆಟಗಾರನಿಗೆ ಕಾರು ಹಾಗೂ ಉತ್ತಮ ಗೂಳಿ ಮಾಲೀಕರಿಗೆ ಬೈಕು ನೀಡಲಾಗುವುದು ಎಂದು ತಿಳಿಸಿದ್ದಾರೆ. ಪಾಲಮೇಡು ಜಲ್ಲಿಕಟ್ಟುದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಅಲಂಗನಲ್ಲೂರಿನ ಪೊನ್ ಕುಮಾರ್ಗೆ ಹಸು ಮತ್ತು ಕರುವನ್ನು ನೀಡಲಾಗಿದೆ.
ಅದೇ ರೀತಿ, ಸ್ಪರ್ಧೆಯಲ್ಲಿ ಭಾಗವಹಿಸುವ ಉತ್ತಮ ಆಟಗಾರರು ಮತ್ತು ಉತ್ತಮ ಗೂಳಿಗಳಿಗೆ ಬೈಕ್, ಚಿನ್ನದ ನಾಣ್ಯ, ಲ್ಯಾಪ್‌ಟಾಪ್, ಕುಕ್ಕರ್, ಎಲ್‌ಇಡಿ ಟಿವಿ, ಫ್ರಿಜ್, ಸೈಕಲ್ ಮುಂತಾದ ಬಹುಮಾನಗಳನ್ನು ನೀಡಲಾಗುತ್ತದೆ. ಈ ಸಂದರ್ಭದಲ್ಲಿ, ಮೊದಲ ಸುತ್ತಿನ ಸ್ಪರ್ಧೆಯು ಕೊನೆಗೊಂಡಿತು. ಅದರಲ್ಲಿ ರಾಜ 7 ಹೋರಿಗಳನ್ನು ಪಳಗಿಸುವ ಮೂಲಕ ಪ್ರಥಮ, ಅರವಿಂದ್ 6 ಹೋರಿಗಳನ್ನು ಪಳಗಿಸುವ ಮೂಲಕ ದ್ವಿತೀಯ ಹಾಗೂ ಅಜಿತ್ ಕುಮಾರ್ ಮೂರು ಹೋರಿಗಳನ್ನು ಪಳಗಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದರು.
ಈ ಸ್ಪರ್ಧೆಯಲ್ಲಿ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ನೀಡಲು ವೈದ್ಯರು ಮತ್ತು ನರ್ಸ್ಗಳನ್ನು ಒಳಗೊಂಡ 160 ಸದಸ್ಯರ ವೈದ್ಯಕೀಯ ತಂಡ, 6 ಸಂಚಾರಿ ವೈದ್ಯಕೀಯ ತಂಡಗಳು, 15 ಆಂಬ್ಯುಲೆನ್ಸ್‌ಗಳು, 60 ಜನರ ಪಶುವೈದ್ಯಕೀಯ ತಂಡ, ಪ್ರಾಣಿಗಳ ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ಇಲಾಖೆಯ ವಾಹನಗಳನ್ನು ಸಿದ್ಧಪಡಿಸಲಾಗಿದೆ.
ಚೆನ್ನೈಗೆ ಆಗಮಿಸುತ್ತಿರುವ ದಕ್ಷಿಣ ತಮಿಳುನಾಡು ಕ್ರೀಡೆ: ದಕ್ಷಿಣ ಭಾರತದಲ್ಲೇ ಅತ್ಯಂತ ಪ್ರಸಿದ್ಧ ಗ್ರಾಮೀಣ ಕ್ರೀಡೆಯಾದ ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲಿಕಟ್ಟು, ಮೊಟ್ಟ ಮೊದಲ ಬಾರಿಗೆ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನಡೆಯಲಿದೆ. ಮಾರ್ಚ್ 5 ರಿಂದ ದಕ್ಷಿಣ ತಮಿಳುನಾಡಿನಲ್ಲಿ ಪ್ರಸಿದ್ಧವಾಗಿರುವ ಜಲ್ಲಿಕಟ್ಟು ಸ್ಪರ್ಧೆಗಳು ಮಧುರೈ ಬಿಟ್ಟು ಚೆನ್ನೈನಲ್ಲಿ ಆಯೋಜನೆಗೊಳ್ಳಲಿದೆ. ಮದುರೈನ ಅಲಂಕಾನಲ್ಲೂರು ಮತ್ತು ಪಾಲಮೇಡುಗಳಂತಹ ವಿಶ್ವವಿಖ್ಯಾತ ಜಲ್ಲಿಕಟ್ಟು ಅಂಗಳ ಹೊಂದಿದೆ.
ಇದನ್ನೂ ಓದಿ: ತಮಿಳುನಾಡಿನಲ್ಲಿ ಪೊಂಗಲ್ ಸಡಗರ: ಪ್ರಸಿದ್ಧ ಜಲ್ಲಿಕಟ್ಟು ಸ್ಪರ್ಧೆ ಪ್ರಾರಂಭ- ವಿಡಿಯೋ