ಕುಪ್ವಾರಾ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾದ ಚಕ್ತಾರಸ್ ಕಂಡಿ ಪ್ರದೇಶದಲ್ಲಿ ನಡೆಯುತ್ತಿರುವ ಎನ್‌ಕೌಂಟರ್‌ನಲ್ಲಿ ಪಾಕಿಸ್ತಾನಿ ಭಯೋತ್ಪಾದಕ ತುಫೈಲ್ ಸೇರಿದಂತೆ ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್ಇಟಿಯ ಇಬ್ಬರು ಭಯೋತ್ಪಾದಕರನ್ನು ಸೇನೆ ಹೊಡೆದುರುಳಿಸಿದೆ.
ಕುಪ್ವಾರದ ಚಕ್ತಾರಸ್ ಪ್ರದೇಶದಲ್ಲಿ ಎರಡನೇ ಎನ್‌ಕೌಂಟರ್ ಆರಂಭವಾಗಿದೆ. ಪೊಲೀಸರು ಮತ್ತು ಸೇನೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
-
#KupwaraEncounterUpdate: Two #terrorists of proscribed #terror outfit LeT including one #Pakistani terrorist namely Tufail killed. Search still going on: IGP Kashmir@JmuKmrPolice https://t.co/g8wnfRcKF7
— Kashmir Zone Police (@KashmirPolice) June 7, 2022 " class="align-text-top noRightClick twitterSection" data="
">#KupwaraEncounterUpdate: Two #terrorists of proscribed #terror outfit LeT including one #Pakistani terrorist namely Tufail killed. Search still going on: IGP Kashmir@JmuKmrPolice https://t.co/g8wnfRcKF7
— Kashmir Zone Police (@KashmirPolice) June 7, 2022#KupwaraEncounterUpdate: Two #terrorists of proscribed #terror outfit LeT including one #Pakistani terrorist namely Tufail killed. Search still going on: IGP Kashmir@JmuKmrPolice https://t.co/g8wnfRcKF7
— Kashmir Zone Police (@KashmirPolice) June 7, 2022
ಓದಿ: ಸೊಪೊರಾ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರ ಹತ, ಮೂವರು ಪರಾರಿ
ಇದಕ್ಕೂ ಮುನ್ನ ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೊಪೊರಾ ಪಾನಿಪೋರಾ ಅರಣ್ಯದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಕಾಳಗ ನಡೆದಿತ್ತು. ಈ ಕಾಳಗದಲ್ಲಿ ಎಲ್‌ಇಟಿ ಉಗ್ರನನ್ನು ಸೇನೆ ಹೊಡೆದುರುಳಿಸಿತ್ತು. ಆದ್ರೆ ಮೂವರು ಉಗ್ರರು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.