ಜಮ್ಮು: ಜಮ್ಮುವಿನ ಅಖ್ನೂರ್ ಜೋಡಿಯಾನ್ ಪ್ರದೇಶದಲ್ಲಿ ಪಾಕಿಸ್ತಾನಿ ಪ್ರಜೆಯೊಬ್ಬನನ್ನು ಬಂಧಿಸಿರುವುದಾಗಿ ಭದ್ರತಾ ಪಡೆಗಳು ತಿಳಿಸಿವೆ.
ಪಾಕಿಸ್ತಾನಿ ಪ್ರಜೆ ಶನಿವಾರ ಮತ್ತು ಭಾನುವಾರ ರಾತ್ರಿ ಅಂತಾರಾಷ್ಟ್ರೀಯ ಗಡಿಯಿಂದ ಭಾರತದ ಭೂಪ್ರದೇಶವನ್ನು ಪ್ರವೇಶಿಸಲು ಯತ್ನಿಸುತ್ತಿದ್ದನೆಂದು ಆರೋಪಿಸಲಾಗಿದ್ದು, ಈ ಪರಿಣಾಮ ಆತನನ್ನು ಬಂಧಿಸಲಾಗಿದೆ ಎಂದು ರಕ್ಷಣಾ ವಕ್ತಾರರು ಹೇಳಿದ್ದಾರೆ.
ಆರೋಪಿಯನ್ನು ಪಾಕಿಸ್ತಾನದ ಮಲಿಕ್ ಚೆಕ್ ನಿವಾಸಿ ಸಬ್ಜರ್ ನವಾಜ್ ಎಂದು ಗುರುತಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ : ಟಿಪ್ಪು ಮೈಸೂರು ಹುಲಿ ಎನ್ನುವುದಕ್ಕೆ ಒಂದು ಕಾರಣ ಕೊಡಿ: ಪ್ರತಾಪ್ ಸಿಂಹ