ಇಸ್ಲಾಮಾಬಾದ್, ಪಾಕಿಸ್ತಾನ: ಆಫ್ಘಾನಿಸ್ತಾನ ವಿಚಾರವಾಗಿ ಭಾರತ ಆಹ್ವಾನಿಸಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪಾಕಿಸ್ತಾನದ ಭದ್ರತಾ ಸಲಹೆಗಾರ ಡಾ. ಮೊಯಿದ್ ಯುಸೂಫ್ ಮಾಹಿತಿ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಉಜ್ಬೇಕಿಸ್ತಾನದೊಂದಿಗೆ ರಕ್ಷಣಾ ಸಂಬಂಧಿ ಒಪ್ಪಂದ ಪತ್ರವೊಂದಕ್ಕೆ ಸಹಿ ಹಾಕುವ ವೇಳೆಯಲ್ಲಿ ಈ ರೀತಿಯ ಸ್ಪಷ್ಟನೆ ನೀಡಿದ್ದಾರೆ ಎಂದು ಪಾಕಿಸ್ತಾನದ ಹಣಕಾಸು ವಿಚಾರಗಳ ಸಂಬಂಧಿ ಪತ್ರಿಕೆ ಬ್ಯುಸಿನೆಸ್ ರೆಕಾರ್ಡರ್ ವರದಿ ಮಾಡಿದೆ.
ಆಫ್ಘಾನಿಸ್ತಾನದ ಕುರಿತು ಭಾರತ ಸಭೆಗೆ ಆಹ್ವಾನಿಸಿದ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೊಯೀದ್ ಯುಸೂಫ್ 'ನಾನು ಹೋಗುವುದಿಲ್ಲ' ಎಂದಿದ್ದಾರೆ.
ಭಾರತ ಪಾಕಿಸ್ತಾನವನ್ನು ಮಾತ್ರವಲ್ಲದೇ ರಷ್ಯಾ, ಇರಾನ್, ಚೀನಾ, ಪಾಕಿಸ್ತಾನ, ತಜಿಕಿಸ್ತಾನ ಮತ್ತು ಉಜ್ಬೇಕಿಸ್ತಾನ ರಾಷ್ಟ್ರಗಳ ಭದ್ರತಾ ಸಲಹೆಗಾರರನ್ನು ಸಭೆಗೆ ಆಹ್ವಾನಿಸಿದ್ದು, ಮುಂದಿನ ವಾರ ಈ ಸಭೆ ನಡೆಯಲಿದೆ.
ಇತ್ತೀಚೆಗಷ್ಟೇ ಆಫ್ಘಾನಿಸ್ತಾನದ ಕುರಿತ ಮಾಸ್ಕೋ ಸಭೆಗೆ ಭಾರತ ಹಾಜರಾಗಿದ್ದು, ಪಾಕಿಸ್ತಾನ ಮತ್ತು ಭಾರತದ ಪ್ರತಿನಿಧಿಗಳು ಯಾವುದೇ ಪ್ರತ್ಯೇಕ ಮಾತುಕತೆ ನಡೆಸಿರಲಿಲ್ಲ.
ಇದನ್ನೂ ಓದಿ: ಟಿ20 ವಿಶ್ವಕಪ್ನಲ್ಲಿ ವೈಫಲ್ಯ: ಕೊಹ್ಲಿ ODI ನಾಯಕತ್ವದಲ್ಲಿ ಮುಂದುವರಿಯುವುದು ಅನುಮಾನ!