ETV Bharat / bharat

ಮುಯ್ಯಿಗೆ ಮುಯ್ಯಿ... ಭಾರತೀಯ ಸೇನೆಯಿಂದ ಪಾಕ್​ನ 11 ಮಂದಿ​​ ಸೈನಿಕರು ಹತ - retaliatory firing by Indian Army

Pakistan Army soldiers killed
ಪಾಕ್ ಸೈನಿಕರ ಹತ್ಯೆ
author img

By

Published : Nov 13, 2020, 5:00 PM IST

Updated : Nov 13, 2020, 9:39 PM IST

16:54 November 13

ಕದನ ವಿರಾಮ ಉಲ್ಲಂಘನೆಗೆ ಸೇನೆ ತಿರುಗೇಟು

ಭಾರತೀಯ ಸೇನೆಯಿಂದ ಪ್ರತಿದಾಳಿ

ಶ್ರೀನಗರ  (ಜಮ್ಮು ಕಾಶ್ಮೀರ):  ಪಾಕ್​ನ ಕದನ ವಿರಾಮ ಉಲ್ಲಂಘನೆಗೆ ತಕ್ಕ ಪ್ರತಿಕ್ರಿಯೆ ನೀಡಿರುವ ಭಾರತೀಯ ಸೇನೆ 11 ಮಂದಿ ಪಾಕಿಸ್ತಾನಿ ಸೈನಿಕರನ್ನು ಹೊಡೆದುರುಳಿಸಿದೆ ಎಂದು ಸೇನಾ ಮೂಲಗಳು ಮಾಹಿತಿ ನೀಡಿವೆ.

ಇದರ ಜೊತೆಗೆ 16 ಮಂದಿ ಗಾಯಗೊಂಡಿದ್ದು, ಮೃತಪಟ್ಟವರಲ್ಲಿ ಎರಡು ಅಥವಾ ಮೂರು ಮಂದಿ ಪಾಕಿಸ್ತಾನ ಆರ್ಮಿ ಸ್ಪೆಷಲ್ ಸರ್ವೀಸ್ ಗ್ರೂಪ್​ (ಎಸ್​ಎಸ್​ಜಿ) ಕಮಾಂಡೋಗಳು ಸೇರಿದ್ದಾರೆ ಎನ್ನಲಾಗಿದೆ.

ಪಾಕಿಸ್ತಾನದ ಉಪಟಳ ಹೆಚ್ಚಾಗುತ್ತಿರುವ ಕಾರಣದಿಂದ ಜನರು ಆತಂಕಕ್ಕೆ ಒಳಗಾಗಿದ್ದು, ಹಲವು ಪ್ರದೇಶಗಳಲ್ಲಿ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿಸಿ, ಜನರನ್ನು ಸ್ಥಳಾಂತರ ಮಾಡಲಾಗಿದೆ. ಪಾಕ್​ ನಡೆಸಿದ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು, ನಾಲ್ವರು ನಾಗರಿಕರು ಮೃತಪಟ್ಟಿದ್ದರು.

ಈಗ ಭಾರತೀಯ ಸೇನೆ ಪಾಕಿಸ್ತಾನಕ್ಕೆ ಸೇರಿದ ಬಂಕರ್​ಗಳು, ಇಂಧನ ಸಂಗ್ರಹ ಮಾಡುವ ಸ್ಥಳಗಳು ಹಾಗೂ ಲಾಂಚ್​ ಪ್ಯಾಡ್​ಗಳ ಮೇಲೆ ದಾಳಿ ನಡೆಸಿದೆ ಎಂದು ಭಾರತೀಯ ಸೇನಾ ಮೂಲಗಳು ಮಾಹಿತಿ ನೀಡಿವೆ.

Last Updated : Nov 13, 2020, 9:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.