ETV Bharat / bharat

ದೇಶದ ವಿವಿಧೆಡೆ ಬಾಂಬ್ ಸ್ಫೋಟಕ್ಕೆ ಸ್ಕೆಚ್‌: ಪಾಕ್‌ನಲ್ಲಿ ತರಬೇತಿ ಪಡೆದ ಇಬ್ಬರು ಉಗ್ರರು ಸೇರಿ 6 ಜನರ ಬಂಧನ - ಪಾಕ್ ತರಬೇತಿ ಪಡೆದ ಭಯೋತ್ಪಾದಕರ ಬಂಧನ ಸುದ್ದಿ

ಉಗ್ರರು ಉದ್ದೇಶಿತ ವ್ಯಕ್ತಿಗಳ ಹತ್ಯೆ (Targeted killings) ಹಾಗು ದೇಶದ ವಿವಿಧೆಡೆ ಮುಂಬರುವ ಹಬ್ಬಗಳ ಸಂದರ್ಭದಲ್ಲಿ ಭೀಕರ ಬಾಂಬ್‌ ಸ್ಫೋಟಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದರು ಎಂಬ ಆಘಾತಕಾರಿ ಸಂಗತಿ ಪೊಲೀಸ್‌ ತನಿಖೆಯಿಂದ ಹೊರಬಿದ್ದಿದೆ.

ಪಾಕ್ ತರಬೇತಿ ಪಡೆದ ಭಯೋತ್ಪಾದಕರ ಬಂಧನ
ಪಾಕ್ ತರಬೇತಿ ಪಡೆದ ಭಯೋತ್ಪಾದಕರ ಬಂಧನ
author img

By

Published : Sep 14, 2021, 7:18 PM IST

Updated : Sep 14, 2021, 9:08 PM IST

ನವದೆಹಲಿ: ಮಹತ್ವದ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದಲ್ಲಿ ತರಬೇತಿ ಪಡೆದ ಇಬ್ಬರು ಉಗ್ರರು ಸೇರಿದಂತೆ ಒಟ್ಟು 6 ಮಂದಿಯನ್ನು ದೆಹಲಿ ಸೇರಿದಂತೆ ಮೂರು ರಾಜ್ಯಗಳ ಪೊಲೀಸರು ವಿಶೇಷ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.

ಈ ಉಗ್ರರು ಉದ್ದೇಶಿತ ವ್ಯಕ್ತಿಗಳ ಹತ್ಯೆ ಹಾಗು ದೇಶದ ವಿವಿಧೆಡೆ ಮುಂಬರು ಹಬ್ಬಗಳ ಸಂದರ್ಭಗಳಲ್ಲಿ ಬಾಂಬ್‌ ಸ್ಫೋಟಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದರು ಎಂಬ ಸಂಗತಿ ಪೊಲೀಸ್‌ ತನಿಖೆಯಿಂದ ಬಯಲಾಗಿದೆ.

ಮೂಲಚಂದ ಅಲಿಯಾಸ್ ಲಾಲಾ, ಮಹ್ಮದ್ ಅಮಿರ್ ಜಾವೇದ್, ಜೀಶಾನ್ ಕಮರ್, ಒಸಮಾ, ಜನ್ ಮೊಹಮ್ಮದ್ ಅಲಿ ಶೇಖ್, ಮೊಹಮ್ಮದ್ ಅಬು ಬಕರ್ ಬಂಧಿತರು.

ಮಸ್ಕತ್ ಮೂಲಕ ಪಾಕಿಸ್ತಾನಕ್ಕೆ ಪ್ರಯಾಣ:

ಈ ಕುರಿತು ಮಾಧ್ಯಮಗೋಷ್ಠಿ ನಡೆಸಿದ ಮಾಹಿತಿ ನೀಡಿದ ದೆಹಲಿ ಪೊಲೀಸ್ ಇಲಾಖೆಯ ವಿಶೇಷ ದಳದ ಅಧಿಕಾರಿಗಳು, ರಾಜಸ್ಥಾನದ ಕೋಟಾದಲ್ಲಿ ಸಮೀರ್, ದೆಹಲಿಯಿಂದ ಇಬ್ಬರು ಮತ್ತು ಉತ್ತರ ಪ್ರದೇಶದಿಂದ ಮೂವರನ್ನು ಬಂಧಿಸಲಾಗಿದೆ. ಈ 6 ಜನರಲ್ಲಿ ಇಬ್ಬರನ್ನು ಮಸ್ಕತ್ ಮೂಲಕ ಪಾಕಿಸ್ತಾನಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರಿಗೆ ಸ್ಫೋಟಕಗಳು ಮತ್ತು ಬಂದೂಕುಗಳನ್ನು ಬಳಸುವ ಕುರಿತು 15 ದಿನಗಳ ಕಾಲ ತರಬೇತಿ ನೀಡಲಾಗಿದೆ ಎಂದು ವಿವರಿಸಿದರು.

ಇದೇ ರೀತಿ ತಮ್ಮ ಗುಂಪಿನಲ್ಲಿ 14-15 ಮಂದಿ ಬಂಗಾಳಿ ಮಾತನಾಡುವ ವ್ಯಕ್ತಿಗಳು ಸಹ ತರಬೇತಿ ಪಡೆದಿರಬಹುದು ಎಂದು ಬಂಧಿತರು ಹೇಳಿರುವುದಾಗಿ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರು ಉಗ್ರರು ಸೇರಿ 6 ಜನರ ಬಂಧನ
ಬಂಧಿತ ಭಯೋತ್ಪಾದಕರು

ಪಾಕಿಸ್ತಾನಕ್ಕೆ ತೆರಳಿ ಉಗ್ರ ತರಬೇತಿ:

ಪಾಕಿಸ್ತಾನಕ್ಕೆ ತೆರಳಿ ಭಯೋತ್ಪಾದಕ ಕೃತ್ಯ ನಡೆಸುವ ಬಗ್ಗೆ ತರಬೇತಿ ಪಡೆದಿದ್ದ, ಪಾಕ್-ಐಎಸ್‌ಐ ಸೂಚನೆಗಳ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಉಗ್ರರಾದ ಒಸಾಮಾ ಮತ್ತು ಜೀಶನ್, ಐಇಡಿಗಳನ್ನು(ಸುಧಾರಿತ ಸ್ಫೋಟಕಗಳು) ಇರಿಸಲು ದೆಹಲಿ ಮತ್ತು ಯುಪಿಯಲ್ಲಿ ಬೇರೆ ಬೇರೆ ಸೂಕ್ತ ಸ್ಥಳಗಳನ್ನು ಗುರುತಿಸುವ ಜವಾಬ್ದಾರಿಯನ್ನು ಹೊಂದಿದ್ದರು.

ಕಾರ್ಯಾಚರಣೆ ವೇಳೆ ಬಂಧಿತ ಉಗ್ರರಿಂದ ಜೀವಂತ ಬಾಂಬ್ ಅನ್ನು ಉತ್ತರ ಪ್ರದೇಶದ ಪ್ರಯಾಗರಾಜ್ ಜಿಲ್ಲೆಯಲ್ಲಿ ಪತ್ತೆ ಮಾಡಲಾಗಿದೆ.

ದಾವುದ್ ಇಬ್ರಾಹಿಂ ಸಹೋದರನಿಂದ ತಂಡದ ಮೇಲ್ವಿಚಾರಣೆ:

ದೇಶದಲ್ಲಿ ದಾಳಿ ನಡೆಸಲು 2 ತಂಡಗಳನ್ನು ರಚಿಸಿದ್ದರು. ಒಂದನ್ನು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಅನೀಸ್ ಇಬ್ರಾಹಿಂ ಸಂಘಟಿಸಿದ್ದಾನೆ. ಗಡಿಯಾಚೆಯಿಂದ ಶಸ್ತ್ರಾಸ್ತ್ರಗಳನ್ನು ತಂದು, ಅವುಗಳನ್ನು ಭಾರತದಲ್ಲಿ ಅಡಗಿಸಿಡುವ ಹೊಣೆ ಇವರದ್ದಾಗಿತ್ತು. ಇವರಿಗೆ ಹವಾಲಾ ಮೂಲಕ ಧನಸಹಾಯ ನಡೆಯುತ್ತಿತ್ತು.

ಪಾಕಿಸ್ತಾನದ ಕುಮ್ಮಕ್ಕು ಮತ್ತೊಮ್ಮೆ ಬಯಲು:

ದೆಹಲಿ ಪೊಲೀಸ್ ವಿಶೇಷ ಆಯುಕ್ತ ನೀರಜ್ ಠಾಕೂರ್ ಪ್ರಕಾರ, ಕಾರ್ಯಾಚರಣೆಯಲ್ಲಿ ಎರಡು ಅಂಶಗಳಿದ್ದವು. ಒಂದು ಭಾರತದಲ್ಲಿ ಅಡಗಿರುವ ಭಯೋತ್ಪಾದಕರಿಗೆ ಐಇಡಿ ಸುರಕ್ಷಿತವಾಗಿ ತಲುಪಿಸುವುದು ಮತ್ತು ಎರಡನೆಯದು ಹಬ್ಬದ ಸಮಯದಲ್ಲಿ ಪ್ರಮುಖ ನಗರಗಳಲ್ಲಿ ಬಾಂಬ್​ ದಾಳಿ ನಡೆಸುವುದು. ಇಡೀ ಕಾರ್ಯಾಚರಣೆಯನ್ನು ಪಾಕಿಸ್ತಾನ ಸಂಘಟಿಸಿದೆ ಎಂದು ಹೇಳಿದರು.

Last Updated : Sep 14, 2021, 9:08 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.