ಪರಭಾನಿ (ಮಹಾರಾಷ್ಟ್ರ): ಸುಮಾರು 20 ವರ್ಷಗಳ ಹಿಂದೆ ಅಕಸ್ಮಾತ್ ಆಗಿ ಪಾಕಿಸ್ತಾನಕ್ಕೆ ಹೋಗಿ ಕಾಣೆಯಾಗಿದ್ದ ಶ್ರವಣದೋಷವುಳ್ಳ ಬಾಲಕಿ, 2015ರಲ್ಲಿ ದಿವಂಗತ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಪ್ರಯತ್ನದಿಂದ ಭಾರತಕ್ಕೆ ಬಂದಿದ್ದಳು. ಆದ್ರೆ ಆಕೆ ತಂದೆ-ತಾಯಿಯನ್ನು ಸೇರಲು ಸಾಧ್ಯವಾಗಿರಲಿಲ್ಲ.
ಗೀತಾ 2015 ರಲ್ಲಿ ಭಾರತಕ್ಕೆ ಮರಳಿದ್ದಳು. ಇದೀಗ 5 ವರ್ಷದ ಸತತ ಪರಿಶ್ರಮದ ನಂತರ ಈಕೆಗೆ ತಾಯಿ ಸಿಕ್ಕಿದ್ದಾಳೆ. ಮಹಾರಾಷ್ಟ್ರದ ಪರಭಣಿ ಜಿಲ್ಲೆಯ ಜಿಂಟೂರು ಗ್ರಾಮದ ಮೀನಾ ಎಂಬುವವರೇ ಮೇಲ್ನೋಟಕ್ಕೆ ಆಕೆಯ ತಾಯಿ ಎಂದು ತಿಳಿದುಬಂದಿದೆ. ಡಿಎನ್‌ಎ ಪರೀಕ್ಷೆ ಕೂಡ ಖಚಿತವಾದರೆ ಇದು ಅಧಿಕೃತವಾಗಲಿದೆ.
ಗೀತಾ ಭಾರತಕ್ಕೆ ಬಂದ ನಂತರ ಸರ್ಕಾರ, ಅರೆ ಸರ್ಕಾರಿ ಸಂಸ್ಥೆಗಳು, ಇಂದೋರ್‌ನ ಆನಂದ್ ಸರ್ವಿಸ್ ಸೊಸೈಟಿ (ಎಎಸ್‌ಎಸ್) ನಂತಹ ಎನ್‌ಜಿಒಗಳು ರಾಷ್ಟ್ರವ್ಯಾಪಿ ಆಕೆಯ ತಾಯಿಗಾಗಿ ಭಾರಿ ಶೋಧ ನಡೆಸುತ್ತಿದ್ದವು.

ಇದನ್ನೂ ಓದಿ: ಇ.ಶ್ರೀಧರನ್ ಪಾಲಕ್ಕಾಡ್‌ನಿಂದ ಸ್ಪರ್ಧಿಸುವ ಸಾಧ್ಯತೆ
ಇತ್ತೀಚೆಗೆ ಬೇರೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಆನಂದ್ ಫೌಂಡೇಶನ್‌ನವರು ಮಹಾರಾಷ್ಟ್ರದ ಪರಭಣಿಯಲ್ಲಿ ಕೆಲಸದಲ್ಲಿ ತೊಡಗಿದ್ದಾಗ ಅಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರ ಮೂಲಕ ಗೀತಾಳ ತಾಯಿಯ ಸುಳಿವು ಸಿಕ್ಕಿದೆ.

ನನ್ನ ಮಗಳು 1999-2000ನೇ ಇಸವಿಯಿಂದ ಕಾಣೆಯಾಗಿದ್ದಳು. ಆಕೆಯ ಹೊಟ್ಟೆಯ ಮೇಲೆ ಸುಟ್ಟಕಲೆ ಇದೆ ಎಂದು 71 ವರ್ಷದ ವೃದ್ಧೆ ಹೇಳಿದ್ದಾಳೆ. ಗೀತಾಳ ಹೊಟ್ಟೆಯನ್ನು ಪೊಲೀಸರು ಪರಿಶೀಲಿಸಿದಾಗ ಸುಟ್ಟಕಲೆ ಇರುವುದು ದೃಢಪಟ್ಟಿದೆ. ಇದೀಗ ಡಿಎನ್‌ಎ ವರದಿ ಬಂದರೆ ಇದು ಸತ್ಯವಾಗಲಿದೆ.