ನವದೆಹಲಿ: ಕೋವಿಡ್ಗೆ ತುತ್ತಾಗಿ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಮಾಜಿ ಅಧ್ಯಕ್ಷ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಕೆ.ಕೆ. ಅಗರ್‌ವಾಲ್ (62) ಅವರು ನಿಧನರಾಗಿದ್ದಾರೆ.
ಹಿರಿಯ ಹೃದಯಶಾಸ್ತ್ರಜ್ಞರಾಗಿದ್ದ ಅಗರ್‌ವಾಲ್ ಅವರನ್ನು ಸೋಂಕು ದೃಢಪಟ್ಟ ಬಳಿಕ ದೆಹಲಿಯ ಏಮ್ಸ್ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ನಿನ್ನೆ ರಾತ್ರಿ 11.30ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ಅಗರ್‌ವಾಲ್ ಕುಟುಂಬಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ: ಕೊರೊನಾಗೆ ದೇಶದಲ್ಲಿ ಒಂದೇ ದಿನ 4,329 ಮಂದಿ ಸಾವು: 4.22 ಲಕ್ಷ ಸೋಂಕಿತರು ಗುಣಮುಖ
ತಮ್ಮ ಜೀವನವನ್ನು ಸಾರ್ವಜನಿಕರ ಆರೋಗ್ಯದ ಹಿತಕ್ಕಾಗಿ ಮುಡಿಪಾಗಿಟ್ಟಿದ್ದ ಅಗರ್‌ವಾಲ್ ಅವರು, ಕೊರೊನಾ ಸಾಂಕ್ರಾಮಿಕ ಸಮಯದಲ್ಲೂ ಹಲವಾರು ವಿಡಿಯೋ ಕಾನ್ಫರೆನ್ಸ್ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ 100 ಮಿಲಿಯನ್ಗೂ ಹೆಚ್ಚಿನ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ಹೇಳಿದ್ದಾರೆ.
ಅಗರ್‌ವಾಲ್ ಅವರು ತಮ್ಮ ಫೇಸ್ಬುಕ್ ಪೇಜ್ನಲ್ಲಿ ಕೊರೊನಾ ವೈರಸ್ ಹಾಗೂ ಬ್ಲಾಕ್ ಫಂಗಸ್ ಬಗ್ಗೆ ಮಾಹಿತಿಗಳನ್ನು ಪೋಸ್ಟ್ ಮಾಡುತ್ತಿದ್ದರು. ಇವರ ಸಾವಿಗೆ ಅನೇಕ ವೈದ್ಯಕೀಯ ತಜ್ಞರು ಕಂಬನಿ ಮಿಡಿದಿದ್ದಾರೆ.