ETV Bharat / bharat

ಮೈಕ್ರೋಸಾಫ್ಟ್​ CEO ಸತ್ಯ ನಾದೆಲ್ಲಾ, Google CEO ಸುಂದರ್ ಪಿಚೈಗೆ ಪದ್ಮಭೂಷಣ - 2022 ಪದ್ಮಪ್ರಶಸ್ತಿ ಘೋಷಣೆ

2022ನೇ ಸಾಲಿನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರಕಟಗೊಂಡಿದ್ದು, ಪ್ರಮುಖವಾಗಿ ಮೈಕ್ರೋಸಾಫ್ಟ್​ CEO ಸತ್ಯ ನಾದೆಲ್ಲಾ, ದೈತ್ಯ Google CEO ಸುಂದರ್ ಪಿಚೈ ಅವರಿಗೆ ಪದ್ಮಭೂಷಣ ಘೋಷಣೆಯಾಗಿವೆ.

Microsoft Satya Nadella Padma Bhushan
Microsoft Satya Nadella Padma Bhushan
author img

By

Published : Jan 25, 2022, 10:23 PM IST

ನವದೆಹಲಿ: 2022ನೇ ಸಾಲಿನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಘೋಷಣೆಯಾಗಿದ್ದು, 128 ಸಾಧಕರಿಗೆ ಪ್ರಶಸ್ತಿ ಘೋಷಿಸಿ ಕೇಂದ್ರ ಸರ್ಕಾರ ಪ್ರಕಟಣೆ ಹೊರಡಿಸಿದೆ. ಇದರಲ್ಲಿ ಪ್ರಮುಖವಾಗಿ ಮೈಕ್ರೋಸಾಫ್ಟ್ ಕಂಪನಿ ಸಿಇಒ ಸತ್ಯ ನಾದೆಲ್ಲಾ, ಗೂಗಲ್​ನ ಸಿಇಒ ಸುಂದರ್​​ ಪಿಚೈ ಅವರನ್ನು ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಭಾರತ ರತ್ನ ಮತ್ತು ಪದ್ಮವಿಭೂಷಣ ನಂತರ ನೀಡಲಾಗುವ ಪದ್ಮಭೂಷಣ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದ್ದು, ಇವರ ಸಾಧನೆ ಗುರುತಿಸಿ ಈ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿರಿ: ಸಿಡಿಎಸ್​ ಬಿಪಿನ್ ರಾವತ್​ಗೆ ಮರಣೋತ್ತರ ಪದ್ಮವಿಭೂಷಣ.. ಕೋವ್ಯಾಕ್ಸಿನ್​ ತಯಾರಕ ಕೃಷ್ಣ ಎಲ್ಲಾ, ಪೂನಾವಾಲಾಗೂ ಗೌರವ

ಅಮೆ​ರಿ​ಕದ ಮೈಕ್ರೋ​ಸಾಫ್ಟ್‌ ಕಂಪ​ನಿಯ ಸಿಇಒ ಆಗಿ​ರುವ ಭಾರತ ಮೂಲದ ಸತ್ಯ ನಾದೆಲ್ಲಾ ಕಳೆದ ವರ್ಷ ಜೂನ್​ ತಿಂಗಳಲ್ಲಿ ಕಂಪ​ನಿಯ ಸಿಇಒ ಆಗಿ ಆಯ್ಕೆಯಾಗಿದ್ದಾರೆ. ಇವರ ಜೊತೆಗೆ ಮತ್ತೋರ್ವ ಭಾರತೀಯ ಗೂಗಲ್​​​ ಸಿಇಒ ಸುಂದರ್​ ಪಿಚೈಗೂ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯಲ್ಲಿರುವ ಗೂಗಲ್​ ಪ್ರಧಾನ ಕಚೇರಿಯಲ್ಲಿ ಇವರು ಸೇವೆ ಸಲ್ಲಿಸುತ್ತಿದ್ದು, ಇವರ ಸಾಧನೆಗೆ ಈ ಗೌರವ ಒಲಿದು ಬಂದಿದೆ.

2022ರಲ್ಲಿ ಪದ್ಮಭೂಷಣ ಪಡೆದ ಸಾಧಕರು

  • ಗುಲಾಬ್ ನಬಿ ಆಜಾದ್​(ಜಮ್ಮು-ಕಾಶ್ಮೀರ)
  • ವಿಕ್ಟೋರ್ ಬ್ಯಾನರ್ಜಿ(ಪಶ್ಚಿಮ ಬಂಗಾಳ)
  • ಗುರ್ಮಿತ್ ಬಾವಾ(ಪಂಜಾಬ್​)
  • ಪ.ಬಂಗಾಳ ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಯ
  • ನಟರಾಜನ್ ಚಂದ್ರಶೇಖರನ್​(ಮಹಾರಾಷ್ಟ್ರ)
  • ಕೃಷ್ಣ ಎಲ್ಲಾ, ಸುಚಿತ್ರಾ ಎಲ್ಲ(ತೆಲಂಗಾಣ)
  • ಮಾಧೂರ್ ಜಾಫ್ರೆ(ಯುಎಸ್​)
  • ದೇವೇಂದ್ರ ಜಝಾರಿಯಾ(ರಾಜಸ್ಥಾನ)
  • ರಾಶೀದ್ ಖಾನ್​(ಉತ್ತರ ಪ್ರದೇಶ
  • ರಾಜೀವ್​ ಮೆಹರ್ಷಿ(ರಾಜಸ್ಥಾನ)
  • ಸತ್ಯ ನಾರಾಯಣ ನಾದೆಲ್ಲಾ(ಯುಎಸ್)
  • ಸುಂದರ್​ ಪಿಚೈ( ಯುಎಸ್​)
  • ಪೂನಾವಾಲಾ( ಮಹಾರಾಷ್ಟ್ರ)
  • ಸಂಜಯ್​ ರಾಜರಾಮ್​(ಮೆಕ್ಸಿಕೊ)
  • ಪ್ರತಿಭಾ ರಾಯ್​​(ಒಡಿಶಾ)
  • ಸ್ವಾಮಿ ಸಚ್ಚಿದಾನಂದ(ಗುಜರಾತ್)
  • ಶ್ರೀ ವೈಶಿಷ್ಟ ತ್ರಿಪ್ತಿ(ಉತ್ತರ ಪ್ರದೇಶ)

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.