ಹೈದರಾಬಾದ್: ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರು ಆರ್ಥಿಕ ಸುಧಾರಣೆಗಳ ಪಿತಾಮಹ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಬಣ್ಣಿಸಿದ್ದಾರೆ.
ಕಾಂಗ್ರೆಸ್‌ನ ಜನಪ್ರಿಯ ನಾಯಕ ಹಾಗೂ ಪರಿಣಿತ ಪಿ.ವಿ. ನರಸಿಂಹ ರಾವ್ ಅವರ ಆಡಳಿತದ ಅವಧಿಯಲ್ಲಿ ಮೊದಲ ಬಾರಿಗೆ ಆರ್ಥಿಕ ಸುಧಾರಣೆಗಳು ಆರಂಭವಾಯಿತು. ದೇಶದ ಆರ್ಥಿಕ ಸುಧಾರಣೆಗಳ ಪಿತಾಮಹ ಯಾರು ಗೊತ್ತಾ..? ಬೇರ್ಯಾರು ಅಲ್ಲ, ಅವರೇ ತೆಲಂಗಾಣದ ಮಗ ಪಿವಿಆರ್ ಎಂದು ಹೇಳಿದ್ದಾರೆ.
ಹೈದರಾಬಾದ್‌ನ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಮತ್ತು ಮಧ್ಯಸ್ಥಿಕೆಯ ಟ್ರಸ್ಟ್ ಡೀಡ್ ನೋಂದಣಿ ಕೇಂದ್ರದಲ್ಲಿ ಮಾತನಾಡಿದ ಸಿಜೆಐ, ಮಾತುಕತೆ ಮತ್ತು ಮಧ್ಯಸ್ಥಿಕೆಯ ಮೂಲಕ ವಿವಾದ ಪರಿಹಾರವು ಭಾರತೀಯ ಸಂಸ್ಕೃತಿಯ ಭಾಗವಾಗಿದೆ. ನಗರವು ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರವನ್ನು ಹೊಂದಿದ್ದು, ಇತರ ದೇಶಗಳಿಗೆ ಹೋಲಿಸಿದರೆ ಕೇಂದ್ರದ ಮೂಲಕ ವಿವಾದ ಪರಿಹಾರದ ವೆಚ್ಚವು ಅಗ್ಗವಾಗಲಿದೆ ಎಂದು ತಿಳಿಸಿದರು.
ಇದು (ಆರ್ಬಿಟ್ರೇಷನ್ ಮತ್ತು ಮೀಡಿಯೇಷನ್) ನಾವು ಹೊಸದಾಗಿ ಮಾಡಿದ ವಿಷಯವಲ್ಲ. ಭಾರತೀಯ ಸಂಸ್ಕೃತಿಯಲ್ಲಿ ನಾವು ಎಲ್ಲಾ ವಿವಾದಗಳನ್ನು ಮಧ್ಯಸ್ಥಿಕೆ ಮತ್ತು ಸಮಾಲೋಚನೆ ಹಾಗೂ ಸಮನ್ವಯದ ಮೂಲಕ ಬಗೆಹರಿಸಿಕೊಳ್ಳುತ್ತೇವೆ ಎಂಬುದು ನಿಮಗೆ ತಿಳಿದಿದೆ. ಪ್ರತಿದಿನ ನಾವು ನಮ್ಮ ಮಕ್ಕಳು, ಸಹೋದರರು ಮತ್ತು ಸ್ನೇಹಿತರೊಂದಿಗೆ ಮಾತುಕತೆ ಮೂಲಕ ವಿವಾದಗಳನ್ನು ಬಗೆಹರಿಸಿಕೊಳ್ಳುತ್ತೇವೆ ಎಂದರು.
ಇದನ್ನೂ ಓದಿ: ನ್ಯಾಯಾಧೀಶರ ನೇಮಕಾತಿ ಕುರಿತ ಮಾಧ್ಯಮಗಳ ಊಹಾಪೋಹಗಳ ವರದಿಗಳು ದುರದೃಷ್ಟಕರ : ಸಿಜೆಐ
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಲ್.ನಾಗೇಶ್ವರ ರಾವ್ ಮತ್ತು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರವೀಂದ್ರನ್ ಮಧ್ಯಸ್ಥಿಕೆ ಕೇಂದ್ರದ ಅಜೀವ ಟ್ರಸ್ಟಿಗಳಾಗಿರುತ್ತಾರೆ. ಭವಿಷ್ಯದಲ್ಲಿ ಅವರು ಇನ್ನೂ ಕೆಲವು ಸದಸ್ಯರನ್ನು ಸೇರಿಸಿಕೊಂಡು ಸಹಕರಿಸುತ್ತಾರೆ ಎಂದು ಸಿಜೆಐ ಹೇಳಿದರು.
ಭಾರತೀಯ ನ್ಯಾಯಾಂಗದಲ್ಲಿ ವಿವಾದ ಪರಿಹಾರ ಪ್ರಕ್ರಿಯೆಗೆ ತೆಗೆದುಕೊಳ್ಳುವ ಸಮಯದ ಬಗ್ಗೆ ಹಿಂದಿನ ವಿದೇಶಿ ಹೂಡಿಕೆದಾರರು ಆತಂಕಗೊಂಡಿದ್ದರು. 1996ರಲ್ಲಿ ಮಧ್ಯಸ್ಥಿಕೆ ಮತ್ತು ಸಮನ್ವಯ ಕಾಯ್ದೆ ಜಾರಿಗೆ ಬಂದ ನಂತರ ನ್ಯಾಯಾಲಯದ ಹೊರಗಿನ ಪ್ರಕ್ರಿಯೆಗಳ ವೇಗವು ಪ್ರಾರಂಭವಾಯಿತು ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ವಿವರಿಸಿದರು.