ETV Bharat / bharat

ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ; ಕಾಮುಕನ ಕಂಬಿ ಹಿಂದೆ ಕಳಿಸಿದ್ಲು ಎರಡನೇ ಪತ್ನಿ - ಹೈದರಾಬಾದ್​​ನಲ್ಲಿ ರೇಪ್​​ ಕೇಸ್

ಬೇಲಿಯೇ ಎದ್ದು ಹೊಲ ಮೇಯ್ದಂತೆ ಕಾಮುಕ ತಂದೆಯೋರ್ವ ಹೆತ್ತ ಮಗಳ ಮೇಲೆ ಅತ್ಯಾಚಾರವೆಸಗಿರುವ ಪ್ರಕರಣ ತೆಲಂಗಾಣದಲ್ಲಿ ಬೆಳಕಿಗೆ ಬಂದಿದೆ.

Father raped his daughter
Father raped his daughter
author img

By

Published : Mar 17, 2022, 9:15 PM IST

ಮೆಹಬೂಬ್​ನಗರ(ತೆಲಂಗಾಣ): ಕಾಮುಕ ತಂದೆಯೋರ್ವ ಮಗಳ ಮೇಲೆ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಅತ್ಯಾಚಾರವೆಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಮೆಹಬೂಬ್​ನಗರ ಜಿಲ್ಲೆಯ ರಮೇಶ್​ ಕೂಲಿ ಕೆಲಸಕ್ಕಾಗಿ ಹೈದರಾಬಾದ್​ಗೆ ಆಗಮಿಸಿ ಬೋಯಿನ್​ ಪಲ್ಲಿಯಲ್ಲಿ ವಾಸವಾಗಿದ್ದನು. ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದ ಈತ ಬೇರೊಬ್ಬ ಮಹಿಳೆ ಜೊತೆ ಮದುವೆ ಮಾಡಿಕೊಂಡಿದ್ದನು. ಆದರೆ, ಈತನ ಮೊದಲ ಪತ್ನಿಗೆ ಜನಿಸಿದ್ದ ಹೆಣ್ಣು ಮಗಳು ತಂದೆ ಜೊತೆ ಉಳಿದುಕೊಂಡಿದ್ದಳು.

ಇದನ್ನೂ ಓದಿರಿ: 6 ರಿಂದ 12ನೇ ತರಗತಿವರೆಗೆ ಭಗವದ್ಗೀತೆ ಬೋಧನೆ: ಗುಜರಾತ್​​ ಸರ್ಕಾರದ ಮಹತ್ವದ ನಿರ್ಧಾರ

ಕಳೆದ 15 ವರ್ಷಗಳಿಂದ ಹೈದರಾಬಾದ್​​ನಲ್ಲಿ ವಾಸವಾಗಿದ್ದ ಕಾಮುಕ​ ಮೊದಲ ಪತ್ನಿಯ ಮಗಳ ಮೇಲೆ ಅತ್ಯಾಚಾರವೆಸಗಲು ಶುರು ಮಾಡಿದ್ದಾನೆ. ಇದರ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಸಹ ಹಾಕಿದ್ದಾನೆ. ದುಷ್ಕೃತ್ಯದ ಬಗ್ಗೆ ಎರಡನೇ ಹೆಂಡತಿ ಗಮನಕ್ಕೆ ಬರುತ್ತಿದ್ದಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪೊಲೀಸರು ಆತನನ್ನು ಕಂಬಿ ಹಿಂದೆ ತಳ್ಳಿದ್ದಾರೆ.

ಸಂತ್ರಸ್ತೆಯನ್ನ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಸದ್ಯ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಬೇಗಂಪೇಟ್​ ಎಸಿಪಿ ನರೇಶ್​ ರೆಡ್ಡಿ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.