ETV Bharat / bharat

ದೇಶದ ಶೇ 93 ಕ್ಕಿಂತ ಹೆಚ್ಚು ಹಳ್ಳಿಗಳಲ್ಲಿ ಮೊಬೈಲ್ ಬ್ರಾಡ್‌ಬ್ಯಾಂಡ್: ಚೌಹಾಣ್ - 5,97,618 ಜನವಸತಿ ಗ್ರಾಮಗಳಲ್ಲಿ 5,58,537 ಹಳ್ಳಿಗಳು ಮೊಬೈಲ್ ವೈರ್‌ಲೆಸ್ ಬ್ರಾಡ್‌ಬ್ಯಾಂಡ್ ವ್ಯಾಪ್ತಿಯನ್ನು ಹೊಂದಿವೆ

ಟೆಲಿಕಾಂ ಸೇವಾ ಪೂರೈಕೆದಾರರು ಮತ್ತು ದೂರಸಂಪರ್ಕ ಇಲಾಖೆಯ ಕ್ಷೇತ್ರ ಘಟಕಗಳು ಒದಗಿಸಿದ ಮಾಹಿತಿಯ ಪ್ರಕಾರ, ದೇಶದಲ್ಲಿ 5,97,618 ಜನವಸತಿ ಗ್ರಾಮಗಳಲ್ಲಿ (ಜನಗಣತಿ 2011 ರ ಪ್ರಕಾರ), 5,58,537 ಹಳ್ಳಿಗಳು ಮೊಬೈಲ್ ವೈರ್‌ಲೆಸ್ ಬ್ರಾಡ್‌ಬ್ಯಾಂಡ್ ವ್ಯಾಪ್ತಿಯನ್ನು ಹೊಂದಿವೆ ಎಂದು ಸಚಿವ ಚೌಹಾಣ್ ಅವರು ತಿಳಿಸಿದ್ದಾರೆ.

ದೇಶದ 93% ಕ್ಕಿಂತ ಹೆಚ್ಚು ಹಳ್ಳಿಗಳು ಮೊಬೈಲ್ ಬ್ರಾಡ್‌ಬ್ಯಾಂಡ್ ವ್ಯಾಪ್ತಿಯನ್ನು ಹೊಂದಿವೆ ಎಂದ ಕೇಂದ್ರ ಸಚಿವ ಚೌಹಾಣ್

author img

By

Published : Apr 1, 2022, 5:18 PM IST

ನವದೆಹಲಿ: ದೇಶದ ಶೇ.93ರಷ್ಟು ಜನವಸತಿ ಗ್ರಾಮಗಳು ಮೊಬೈಲ್ ವೈರ್‌ಲೆಸ್ ಬ್ರಾಡ್‌ಬ್ಯಾಂಡ್ ಕವರೇಜ್ ಹೊಂದಿವೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. ಮೇಲ್ಮನೆಯಲ್ಲಿ ರಾಜ್ಯ ಸಚಿವ ಸಂವಹನಗಳ ದೇಬುಸಿನ್ಹ್ ಚೌಹಾಣ್ ಅವರು ಲಿಖಿತ ಉತ್ತರದಲ್ಲಿ ಮಾಹಿತಿಯನ್ನು ನೀಡಿದ್ದಾರೆ. 2011 ರ ಜನಗಣತಿಯ ಪ್ರಕಾರ, ದೇಶದ 5,97,618 ಜನವಸತಿ ಗ್ರಾಮಗಳಲ್ಲಿ 5,58,537 ಹಳ್ಳಿಗಳು ಮೊಬೈಲ್ ವೈರ್‌ಲೆಸ್ ಬ್ರಾಡ್‌ಬ್ಯಾಂಡ್ ವ್ಯಾಪ್ತಿ ಹೊಂದಿವೆ ಎಂದು ಅಂದಾಜಿಸಲಾಗಿದೆ ಎಂದು ಸಚಿವರು ಉಲ್ಲೇಖಿಸಿದ್ದಾರೆ.

ಟೆಲಿಕಾಂ ಸೇವಾ ಪೂರೈಕೆದಾರರು ಮತ್ತು ದೂರಸಂಪರ್ಕ ಇಲಾಖೆಯ ಕ್ಷೇತ್ರ ಘಟಕಗಳು ಒದಗಿಸಿದ ಮಾಹಿತಿ ಪ್ರಕಾರ, ದೇಶದಲ್ಲಿ 5,97,618 ಜನವಸತಿ ಗ್ರಾಮಗಳಲ್ಲಿ (ಜನಗಣತಿ 2011 ರ ಪ್ರಕಾರ), 5,58,537 ಹಳ್ಳಿಗಳು ಮೊಬೈಲ್ ವೈರ್‌ಲೆಸ್ ಬ್ರಾಡ್‌ಬ್ಯಾಂಡ್ ವ್ಯಾಪ್ತಿಯನ್ನು ಹೊಂದಿವೆ ಎಂದು ಅಂದಾಜಿಸಲಾಗಿದೆ. ಹೆಚ್ಚಿನ ವೇಗದ ಇಂಟರ್ನೆಟ್/ಬ್ರಾಡ್‌ಬ್ಯಾಂಡ್ ಒದಗಿಸಲು ದೇಶದ ಎಲ್ಲ ಗ್ರಾಮ ಪಂಚಾಯತ್‌ಗಳು (ಜಿಪಿಗಳು) ಮತ್ತು ಹಳ್ಳಿಗಳಲ್ಲಿ ಭಾರತ್‌ನೆಟ್ ಯೋಜನೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ: ರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಸ್ಪರ್ಧೆ

28.02.2022 ರಂತೆ ಭಾರತ್‌ನೆಟ್ ಅಡಿ ಬ್ರಾಡ್‌ಬ್ಯಾಂಡ್ ಮೂಲಸೌಕರ್ಯದೊಂದಿಗೆ ದೇಶದಲ್ಲಿ ಒಟ್ಟು 1,72,361 ಗ್ರಾಮ ಪಂಚಾಯತ್‌ಗಳನ್ನು ಈ ಸೇವೆಗೆ ಸಿದ್ಧಗೊಳಿಸಲಾಗಿದೆ. ಇಂಟರ್‌ನೆಟ್ ಸೌಲಭ್ಯದ ಲಭ್ಯತೆಯ ಮೇಲ್ವಿಚಾರಣೆಯನ್ನು ಚಂದಾದಾರರ ಸಂಖ್ಯೆಯ ಆಧಾರದ ಮೇಲೆ ಮಾಡಲಾಗುತ್ತದೆ. ಇಂಟರ್ನೆಟ್ ಸಂಪರ್ಕದ ಲಭ್ಯತೆಯು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಸೇರಿದಂತೆ ಎಲ್ಲ ರೀತಿಯ ಆನ್‌ಲೈನ್ ಡಿಜಿಟಲ್ ಸೇವೆಗಳನ್ನು ಒದಗಿಸುವ ಮೂಲಕ ಸಾರ್ವಜನಿಕರಿಗೆ ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.