ನವದೆಹಲಿ: ಜನವರಿ 3 ರಿಂದ ಇಲ್ಲಿಯವರೆಗೂ 15 ರಿಂದ 18 ವಯೋಮಾನದ 3.5 ಕೋಟಿಗೂ ಹೆಚ್ಚು ಮಕ್ಕಳಿಗೆ ಕೊರೊನಾ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವೀಯ ತಿಳಿಸಿದ್ದಾರೆ.
ಈ ಬಗ್ಗೆ ಅವರು ಟ್ವೀಟ್ ಮಾಡಿದ್ದು, ಕೊರೊನಾ ಲಸಿಕೆ ಪಡೆಯುವಲ್ಲಿ 'ಯಂಗ್ ಇಂಡಿಯಾ'ದ ಉತ್ಸಾಹವನ್ನು ಶ್ಲಾಘಿಸಿದ್ದಾರೆ.
-
Amazing enthusiasm among Young India for #COVID19 vaccination 💉
— Dr Mansukh Mandaviya (@mansukhmandviya) January 17, 2022 " class="align-text-top noRightClick twitterSection" data="
Over 3.5 crore children between the 15-18 Age group have received 1st dose of COVID-19 vaccine, since 3rd January.
Congratulations to all my young friends who have got vaccinated.#SabkoVaccineMuftVaccine pic.twitter.com/4sa8DzCIJ4
">Amazing enthusiasm among Young India for #COVID19 vaccination 💉
— Dr Mansukh Mandaviya (@mansukhmandviya) January 17, 2022
Over 3.5 crore children between the 15-18 Age group have received 1st dose of COVID-19 vaccine, since 3rd January.
Congratulations to all my young friends who have got vaccinated.#SabkoVaccineMuftVaccine pic.twitter.com/4sa8DzCIJ4Amazing enthusiasm among Young India for #COVID19 vaccination 💉
— Dr Mansukh Mandaviya (@mansukhmandviya) January 17, 2022
Over 3.5 crore children between the 15-18 Age group have received 1st dose of COVID-19 vaccine, since 3rd January.
Congratulations to all my young friends who have got vaccinated.#SabkoVaccineMuftVaccine pic.twitter.com/4sa8DzCIJ4
ಕೊರೊನಾ ಲಸಿಕೆ ಪಡೆಯುವಲ್ಲಿ ಯುವಕರು ಅತ್ಯುತ್ಸಾಹ ತೋರಿದ್ದಾರೆ. ಜನವರಿ 3 ನೇ ತಾರೀಖಿನಿಂದ 15- 18 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ ಹಾಕಲು ಆರಂಭಿಸಲಾಗಿದೆ. ಇಲ್ಲಿಯವರೆಗೆ 3.5 ಕೋಟಿ ತರುಣರು ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ. ನನ್ನೆಲ್ಲಾ ಯುವ ಸ್ನೇಹಿತರಿಗೆ ಅಭಿನಂದನೆಗಳು ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಡಿಸೆಂಬರ್ 25 ರಂದು 15- 18 ವರ್ಷದವರಿಗೆ ಮೊದಲ ಡೋಸ್, 60 ವರ್ಷ ಮೇಲ್ಪಟ್ಟ ನಾಗರಿಕರು, ಆರೋಗ್ಯ ರಕ್ಷಕರು, ವೈದ್ಯರು, ಆರೋಗ್ಯ ಸಿಬ್ಬಂದಿಗೆ ಮುಂಜಾಗ್ರತಾ ಡೋಸ್ ಲಸಿಕೆ ನೀಡಲಾಗುವುದು ಎಂದು ಘೋಷಿಸಿದ್ದರು.
ಇದನ್ನೂ ಓದಿ: ಬೆಂಗಳೂರೊಂದರಲ್ಲೇ 287 ಮಂದಿಗೆ ಒಮಿಕ್ರಾನ್ ದೃಢ: 766ಕ್ಕೆ ಏರಿದ ಸೋಂಕಿತರ ಸಂಖ್ಯೆ!