ETV Bharat / bharat

ಎರಡು ವರ್ಷಗಳಲ್ಲಿ 24 ಸಾವಿರ ಮಕ್ಕಳು ಆತ್ಮಹತ್ಯೆಗೆ ಶರಣು, ಕಾರಣ ಇಲ್ಲಿದೆ..

ದೇಶದಲ್ಲಿ ಕೇವಲ ಎರಡು ವರ್ಷಗಳ ಅವಧಿಯಲ್ಲಿ 24 ಸಾವಿರಕ್ಕೂ ಅಧಿಕ ಮಕ್ಕಳು ಆತ್ಮಹತ್ಯೆಗೆ ಶರಣಾಗಿರುವ ಮಾಹಿತಿಯನ್ನು ಎನ್‌ಸಿಆರ್‌ಬಿ ವರದಿ ಬಹಿರಂಗಪಡಿಸಿದೆ.

Children suicide
ಮಕ್ಕಳು ಆತ್ಮಹತ್ಯೆ
author img

By

Published : Aug 3, 2021, 8:10 AM IST

Updated : Aug 3, 2021, 8:34 AM IST

ನವದೆಹಲಿ: 2017 ರಿಂದ 2019ರ ಅವಧಿಯಲ್ಲಿ ದೇಶದಲ್ಲಿ 14-18 ವಯಸ್ಸಿನ 24 ಸಾವಿರಕ್ಕೂ ಅಧಿಕ ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಪೈಕಿ 4,000ಕ್ಕೂ ಹೆಚ್ಚು ಮಕ್ಕಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿಲ್ಲ ಎಂಬ ಕಾರಣಕ್ಕೆ ಸಾವಿನ ಹಾದಿ ತುಳಿದಿದ್ದಾರೆ ಎಂದು ಕೇಂದ್ರದ ಸರ್ಕಾರ ಮಾಹಿತಿ ನೀಡಿದೆ.

ಮಕ್ಕಳ ಸಾವಿನ ಕುರಿತಾಗಿ ಎನ್‌ಸಿಆರ್‌ಬಿ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದ್ದು, 2017-19ರ ಅವಧಿಯಲ್ಲಿ 24,568 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ 13,325 ಮಂದಿ ಬಾಲಕಿಯರಾಗಿದ್ದಾರೆ. 2017 ರಲ್ಲಿ 8,029, 2018ರಲ್ಲಿ 8,168 ಮತ್ತು 2019ರಲ್ಲಿ 8,377 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ರಾಜ್ಯಗಳಲ್ಲಿ ಮಕ್ಕಳ ಆತ್ಮಹತ್ಯೆಗಳು ಹೆಚ್ಚಿವೆ..

ಮಧ್ಯಪ್ರದೇಶ- 3,115

ಪಶ್ಚಿಮ ಬಂಗಾಳ- 2,802

ಮಹಾರಾಷ್ಟ್ರ- 2,527

ತಮಿಳುನಾಡು - 2,035

ಈ ಪೈಕಿ 4,046 ಮಕ್ಕಳ ಆತ್ಮಹತ್ಯೆಗೆ ಪರೀಕ್ಷೆಯ ವೈಫಲ್ಯವೇ ಕಾರಣವಾಗಿದೆ. ಮದುವೆಗೆ ಸಂಬಂಧಿಸಿದ ಸಮಸ್ಯೆಗಳಿಂದ 639 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಲ್ಲಿ ಕನಿಷ್ಠ 411 ಬಾಲಕಿಯರಾಗಿದ್ದಾರೆ. 3,315 ಮಕ್ಕಳು ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದು, 2,567 ಮಕ್ಕಳು ಅನಾರೋಗ್ಯದ ಹಿನ್ನೆಲೆ, 81 ಮಕ್ಕಳು ದೈಹಿಕ ಕಿರುಕುಳದಿಂದ ಸೂಸೈಡ್ ಮಾಡಿಕೊಂಡಿದ್ದಾರೆ.

ಪ್ರೀತಿಪಾತ್ರರ ಸಾವು, ಮಾದಕ ದ್ರವ್ಯ ಮತ್ತು ಮದ್ಯ ವ್ಯಸನ, ಬೇಡದ ಗರ್ಭಧಾರಣೆ, ಸಾಮಾಜಿಕ ಪ್ರತಿಷ್ಠೆಗೆ ಹಾನಿ, ನಿರುದ್ಯೋಗ, ಬಡತನ ಹಾಗೂ ಸೈದ್ಧಾಂತಿಕ ಕಾರಣಗಳು ಮಕ್ಕಳ ಆತ್ಮಹತ್ಯೆಗೆ ಕಾರಣವೆಂದು ಹೇಳಲಾಗಿದೆ.

ಇದನ್ನೂ ಓದಿ: "ನನ್ನ ಆ ಆಸೆ ಈಡೇರಿಸಿದ್ರೆ, ಪಾಸಿಂಗ್​ ಪ್ರಮಾಣ ಪತ್ರ ನೀಡುವೆ"..ವಿದ್ಯಾರ್ಥಿನಿಗೆ ಪ್ರಾಂಶುಪಾಲನ ಕಿರುಕುಳ!

ಚಿಕ್ಕಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳಲು ದುಃಖ, ಗೊಂದಲ, ಕೋಪ, ಒತ್ತಡ ಕಾರಣವಾಗಿರಬಹುದು. ಹದಿಹರೆಯದವರಲ್ಲಿ ಒತ್ತಡ, ಆರ್ಥಿಕ ಅನಿಶ್ಚಿತತೆ, ನಿರಾಶೆ, ಖಿನ್ನತೆ, ಜೀವನದಲ್ಲಿ ಯಶಸ್ಸು ಕಾಣಲಿಲ್ಲವೆಂಬ ಹತಾಶೆ, ಪ್ರೇಮ ವೈಫಲ್ಯಗಳು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿರುತ್ತವೆ ಎಂದು ಚೈಲ್ಡ್ ರೈಟ್ಸ್ ಅಂಡ್ ಯು (Child Rights and You) ಅಧ್ಯಕ್ಷೆ ಪೂಜಾ ಮಾರ್ವಾಹ ಹೇಳಿದರು.

Last Updated : Aug 3, 2021, 8:34 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.