ನವದೆಹಲಿ: ಸಾಮಾಜಿಕ ಮಾಧ್ಯಮ, ಆನ್‌ಲೈನ್ ಸ್ಟ್ರೀಮಿಂಗ್ ಮತ್ತು ಡಿಜಿಟಲ್ ವಿಷಯವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಗುರುವಾರ ಹೊಸ ನಿಯಮಗಳನ್ನು ರೂಪಿಸಿದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷವು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇಟ್ ಮಾಧ್ಯಮಗಳ ಜೊತೆ ಮಾತನಾಡಿ, ಮಕ್ಕಳ ಅಶ್ಲೀಲತೆ ಅಥವಾ ಇಂತಹ ಯಾವುದೇ ಅನಿಷ್ಠ ಪದ್ಧತಿಗಳ ವಿರುದ್ಧ ಕ್ರಮ ತೆಗೆದುಕೊಂಡರೆ ಅಂತಹ ಕ್ರಮಗಳು ಸ್ವಾಗತಾರ್ಹ. ನಮ್ಮ ಮಕ್ಕಳಿಗೆ ಮತ್ತು ನಮ್ಮ ಮಹಿಳೆಯರಿಗಾಗಿ ನಾವು ಹೆಚ್ಚು ಸುರಕ್ಷಿತ ಸಮಾಜವನ್ನು ಒದಗಿಸಿಕೊಡಬೇಕಿದೆ. ಆದರೆ. ಹೊಸದಾಗಿ ತಂದ ಈ ನೀತಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತಡೆಯುವ ಕಾರಣಕ್ಕೆ ಜಾರಿ ಮಾಡಲು ಮುಂದಾಗಿದೆ ಎಂಬಂತೆ ತೋರುತ್ತದೆ ಎಂದು ಆರೋಪಿಸಿದರು.
ಹೊಸ ನಿಯಮಗಳನ್ನು ವಿವರಿಸಿದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಈ ಕ್ರಮವು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಸಶಕ್ತಗೊಳಿಸುತ್ತದೆ ಎಂದು ಹೇಳಿದ್ದಾರೆ ಹಾಗೆ ದೇಶದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಎಚ್ಚರಿಕೆ ಎಂದೂ ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದ ಈ ಎರಡು ಮಾನದಂಡಗಳು ಸ್ವೀಕಾರಾರ್ಹವಲ್ಲ ಎಂದು ಸುಪ್ರಿಯಾ ಹೇಳಿದ್ದಾರೆ.
ರವಿಶಂಕರ್ ಪ್ರಸಾದ್ ಅವರು ಕಾನೂನು ಮಂತ್ರಿಯಾಗಿ, ಅದರಲ್ಲೂ ಟೆಲಿಕಾಂ ಮತ್ತು ಐಟಿ ಸಚಿವರಾಗಿ ಭಾರತೀಯ ಟೆಲಿಕಾಂ ಸಾವಿನ ಅಧ್ಯಕ್ಷತೆ ವಹಿಸಿದ್ದರು. ಈಗ ಭಾರತೀಯರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸಾವಿಗೆ ಅಧ್ಯಕ್ಷತೆ ವಹಿಸುತ್ತಿದ್ದಾರೆ. ಅವರು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮತ್ತು ಅಂತಿಮವಾಗಿ ಗೆದ್ದ ಮಹಾತ್ಮ ಗಾಂಧಿಯವರ ಮೂಲವನ್ನೇ ಬುಡಮೇಲು ಮಾಡುತ್ತದೆ ಎಂಬುದನ್ನು ಅವರು ತಿಳಿಯಬೇಕಿದೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದರೆ ಅದನ್ನು ಸಹಿಸಬಾರದು ಎಂದೂ ಅವರು ಕರೆ ನೀಡಿದ್ದಾರೆ.