ETV Bharat / bharat

Opposition Dharna: ಮಣಿಪುರ ಕುರಿತು ಪ್ರಧಾನಿ ಮೋದಿ ಹೇಳಿಕೆಗೆ ಆಗ್ರಹ; ಸಂಸತ್ ಹೊರಗೆ 'ಇಂಡಿಯಾ' ನಾಯಕರ ಧರಣಿ

Opposition Dharna: ಮಣಿಪುರ ಹಿಂಸಾಚಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡುವವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ಪ್ರತಿಪಕ್ಷಗಳು ಹೇಳಿವೆ.

Protest by alliance opposition leaders
ಮೈತ್ರಿ ಪ್ರತಿಪಕ್ಷ ನಾಯಕರಿಂದ ಪ್ರತಿಭಟನೆ
author img

By

Published : Jul 25, 2023, 1:05 PM IST

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನದಿಂದಲೇ ಪ್ರತಿಪಕ್ಷಗಳು ಮಣಿಪುರ ಜನಾಂಗೀಯ ಹಿಂಸಾಚಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಒತ್ತಾಯಿಸುತ್ತಲೇ ಬಂದಿವೆ. ಆದರೆ ಇದೀಗ ಅಧಿವೇಶನದಿಂದ ಹೊರಬಂದು, ಪ್ರಧಾನಿ ಹೇಳಿಕೆಗೆ ಆಗ್ರಹಿಸಿ ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯಸಭೆಯ ಪ್ರತಿಪಕ್ಷದ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ 'ಇಂಡಿಯಾ' ಮೈತ್ರಿ ಕೂಟದ ನಾಯಕರು ಸೇರಿ ಪ್ರತಿಭಟಿಸಿದ್ದಾರೆ.

'ಮಣಿಪುರ ಉಳಿಸಿ' ಫಲಕಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕರು ಮಣಿಪುರ ಜನಾಂಗೀಯ ಹಿಂಸಾಚಾರದ ಬಗ್ಗೆ ಪ್ರಧಾನಿ ಹೇಳಿಕೆ ನೀಡಬೇಕು ಎಂದರು. ಸಂಸತ್ತಿನೊಳಗೆ ಅಶಿಸ್ತು ವರ್ತನೆಗಾಗಿ ಎಎಪಿ ಸಂಸದ ಸಂಜಯ್ ಸಿಂಗ್ ಅವರನ್ನು ಅಧಿವೇಶನ ಮುಗಿಯುವವರೆಗೆ ಅಮಾನತುಗೊಳಿಸಿದ ನಂತರ, ಮೈತ್ರಿ ಪ್ರತಿಪಕ್ಷಗಳ ಸಂಸದರು ನಿನ್ನೆ (ಸೋಮವಾರ) ರಾಜ್ಯಸಭೆಯಿಂದ ಹೊರಬಂದು ಸಂಸತ್ ಭವನದ ಆವರಣದಲ್ಲಿರುವ ಗಾಂಧಿ ಪ್ರತಿಮೆಯ ಬಳಿ ರಾತ್ರಿಯಿಡೀ ಧರಣಿ ಕುಳಿತಿದ್ದರು.

ಇಂದು (ಮಂಗಳವಾರ) ಬೆಳಗ್ಗೆ 10.45 ಯವರೆಗೆ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದ್ದ ಪ್ರತಿಪಕ್ಷಗಳ ನಾಯಕರು, ಮುಂಗಾರು ಅಧಿವೇಶನದಲ್ಲಿ ಮಣಿಪುರ ಜನಾಂಗೀಯ ಹಿಂಸಾಚಾರ ವಿಷಯದ ಬಗ್ಗೆ ಕೇಂದ್ರೀಕರಿಸುವುದು ತಮ್ಮ ಗುರಿ ಎನ್ನುವುದನ್ನು ನಿರ್ಧರಿಸಿದರು. ವಿಸ್ತೃತ ಚರ್ಚೆಯ ನಂತರ ಮಣಿಪುರದ ಕುರಿತು ಪ್ರಧಾನಿ ಹೇಳಿಕೆಗೆ ಒತ್ತಾಯಿಸಿದ ಪ್ರತಿಪಕ್ಷಗಳು ಬೇಡಿಕೆಗಳನ್ನು ಈಡೇರಿಸುವವರೆಗೆ ತಮ್ಮ ಪ್ರತಿಭಟನೆ ಮುಂದುವರೆಸುವುದಾಗಿ ಹೇಳಿವೆ.

ಮಣಿಪುರ ಬಗ್ಗೆ ಯಾವುದೇ ಚರ್ಚೆಗೆ ಮುನ್ನ ಮೋದಿ ಮಣಿಪುರ ಸಮಸ್ಯೆಗೆ ಸಂಬಂಧಿಸಿದಂತೆ ಸದನವನ್ನು ಉದ್ದೇಶಿಸಿ ಮಾತನಾಡಬೇಕು ಎಂಬುದು ಪ್ರತಿಪಕ್ಷಗಳ ಪ್ರಮುಖ ಬೇಡಿಕೆಗಳಲ್ಲಿ ಒಂದು. ಅಧಿವೇಶನ ಶುರುವಾದ ದಿನದಿಂದಲೇ ಈ ಬಗ್ಗೆ ತಕ್ಷಣದ ಕ್ರಮಕ್ಕಾಗಿ ವಿಪಕ್ಷಗಳು ಒತ್ತಾಯಿಸುತ್ತಿವೆ. ಆಡಳಿತ ಸರ್ಕಾರ ಚರ್ಚೆಗೆ ಸಿದ್ಧ ಎಂದು ಹೇಳಿ, ಈ ಸಮಸ್ಯೆಯನ್ನು ಗೃಹ ಸಚಿವ ಅಮಿತ್​ ಶಾ ಪರಿಹರಿಸುತ್ತಾರೆ ಎಂದು ಸಮರ್ಥಿಸಿಕೊಂಡಿತ್ತು. ಆದರೆ ಪ್ರತಿಪಕ್ಷಗಳು ನೇರವಾಗಿ ಪ್ರಧಾನಿ ಮೋದಿಯವರೇ ಹೇಳಿಕೆ ನೀಡಬೇಕು ಎಂದು ಒತ್ತಾಯಿಸುತ್ತಿವೆ.

ನಿನ್ನೆ ರಾತ್ರಿಯಾಗುತ್ತಿದ್ದಂತೆ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೇರಿದಂತೆ ಪ್ರತಿಪಕ್ಷ ನಾಯಕರು 'ಮಣಿಪುರಕ್ಕಾಗಿ ಭಾರತ' ಎಂಬ ಫಲಕಗಳನ್ನು ಹಿಡಿದು ಒಗ್ಗಟ್ಟಿನಿಂದ ಮಣಿಪುರ ಹಿಂಸಾಚಾರದ ವಿರುದ್ಧ ನಿಂತಿದ್ದರು. ಆದರೆ ಮಣಿಪುರ ಹಿಂಸಾಚಾರದ ವಿಷಯದ ಕುರಿತು ಸಂಸತ್ತಿನಲ್ಲಿ ಪ್ರಧಾನಿ ಮೋದಿ ಹೇಳಿಕೆಗೆ ಒತ್ತಾಯಿಸಿದ ಸಂಸದ ಸಂಜಯ್ ಸಿಂಗ್ ಅವರನ್ನು ಮುಂಗಾರು ಅಧಿವೇಶನ ಮುಗಿಯುವವರೆಗೆ ಅಮಾನತುಗೊಳಿಸಿದ್ದರಿಂದ ಪ್ರತಿಪಕ್ಷಗಳ ಪ್ರತಿಭಟನೆಗೆ ಮತ್ತಷ್ಟು ಪ್ರಚೋದನೆ ಸಿಕ್ಕಂತಾಗಿದೆ.

ಇದನ್ನೂ ಓದಿ: ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ: ಪ್ರತಿಪಕ್ಷಗಳ ಬತ್ತಳಿಕೆಯಲ್ಲಿ ಮಣಿಪುರ ಹಿಂಸಾಚಾರ, ದೆಹಲಿ ಸುಗ್ರೀವಾಜ್ಞೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.