ETV Bharat / bharat

ಪಾಟ್ನಾದಲ್ಲಿ ವಿಪಕ್ಷ ನಾಯಕರ ಮೆಗಾ ಸಭೆ: ಲೋಕಸಭೆ ಚುನಾವಣೆಗೆ ರೂಪುರೇಷೆ ಚರ್ಚೆ- ಯಾರೆಲ್ಲಾ ಭಾಗಿ? - ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಎದುರಿಸಲು ಪ್ರತಿಪಕ್ಷಗಳು ಒಗ್ಗೂಡುವ ನಿಟ್ಟಿನಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪಾಟ್ನಾದಲ್ಲಿ ಬೃಹತ್​ ಸಭೆಯನ್ನು ಆಯೋಜಿಸಿದ್ದರು.

Etv Bharat
Etv Bharat
author img

By

Published : Jun 23, 2023, 4:06 PM IST

ಪಾಟ್ನಾ (ಬಿಹಾರ): 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ವಿರೋಧಿರಂಗ ರಚನೆಗೆ ಮಾರ್ಗಸೂಚಿ ರೂಪಿಸಲು ಪ್ರತಿಪಕ್ಷಗಳ ಉನ್ನತ ನಾಯಕರು ಶುಕ್ರವಾರ ಬಿಹಾರದ ಪಾಟ್ನಾದಲ್ಲಿ ಚರ್ಚೆ ನಡೆಸಿದರು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನಿವಾಸದಲ್ಲಿ ನಡೆದ ಸಭೆಯಲ್ಲಿ 15 ವಿರೋಧ ಪಕ್ಷಗಳ 30ಕ್ಕೂ ಹೆಚ್ಚು ನಾಯಕರು ಭಾಗವಹಿಸಿದ್ದರು.

ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಎದುರಿಸಲು ಪ್ರತಿಪಕ್ಷಗಳು ಒಗ್ಗೂಡುವ ನಿಟ್ಟಿನಲ್ಲಿ ಈ ಮಹತ್ವದ ಸಭೆಯನ್ನು ಹಿರಿಯ ನಾಯಕರು ಸಭೆ ನಡೆಸಿದ್ದಾರೆ. ಇದು ಆರಂಭಿಕ ಹಂತವಾಗಿದೆ. ಈ ಸಭೆಯನ್ನು ಜೆಡಿಯು ವರಿಷ್ಠರಾದ ಸಿಎಂ ನಿತೀಶ್ ಕುಮಾರ್ ಮತ್ತು ಆರ್​ಜೆಡಿ ನಾಯಕ, ಡಿಸಿಎಂ ತೇಜಸ್ವಿ ಯಾದವ್ ಆಯೋಜಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ನಿತೀಶ್ ಪಕ್ಕದಲ್ಲಿ ಒಂದು ಕಡೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮತ್ತೊಂದೆಡೆ ಆರ್​ಡಿಜೆ ಅಧ್ಯಕ್ಷ ಲಾಲು ಪ್ರಸಾದ್ ಕುಳಿತಿದ್ದರು. ಸಭೆಯಲ್ಲಿ ಸೀಟು ಹಂಚಿಕೆ ವಿವಾದದ ವಿಷಯ ಮತ್ತು ನಾಯಕತ್ವದ ಪ್ರಶ್ನೆಗಳನ್ನು ಸದ್ಯಕ್ಕೆ ತಪ್ಪಿಸಬೇಕು. ಪ್ರತಿಪಕ್ಷಗಳ ಐಕ್ಯತೆಯ ಮೂಲ ರೂಪರೇಷೆ ಮತ್ತು ಮಾರ್ಗಸೂಚಿ ಬಗ್ಗೆ ಚರ್ಚಿಸಲಾಯಿತು ಎಂದು ತಿಳಿದು ಬಂದಿದೆ.

  • #WATCH पटना: आगामी लोकसभा चुनाव में भाजपा से मुकाबले के लिए संयुक्त रणनीति बनाने के लिए विपक्षी नेताओं की बैठक पटना में शुरू हो गई है।

    बैठक में 15 से ज्यादा विपक्षी दल शामिल हैं। pic.twitter.com/XQ03zhOSgZ

    — ANI_HindiNews (@AHindinews) June 23, 2023 " class="align-text-top noRightClick twitterSection" data=" ">

ನಾಯಕ ನಾಯಕ ರಾಹುಲ್ ಗಾಂಧಿ, ಟಿಎಂಸಿ ನಾಯಕಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಮ್​ ಆದ್ಮಿ ಪಕ್ಷದ ನಾಯಕರಾದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್‌ ಸಿಎಂ ಭಗವಂತ್ ಮಾನ್, ಡಿಎಂಕೆ ನಾಯಕ, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ಜೆಎಂಎಂ ನಾಯಕ, ಜಾರ್ಖಂಡ್‌ನ ಹೇಮಂತ್ ಸೊರೇನ್, ಸಮಾಜವಾದಿ ಪಕ್ಷದ ನಾಯಕ, ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್, ಶಿವಸೇನೆ-ಯುಬಿಟಿ ಬಣದ ನಾಯಕ, ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ, ಎನ್‌ಸಿಪಿ ಅಧ್ಯಕ್ಷ, ಕೇಂದ್ರದ ಮಾಜಿ ಸಚಿವ ಶರದ್ ಪವಾರ್ ಹಾಗೂ ಪಿಡಿಪಿ, ಸಿಪಿಐ(ಎಂ), ಸಿಪಿಐ, ಸಿಪಿಐ(ಎಂಎಲ್) ಮತ್ತು ನ್ಯಾಷನಲ್ ಕಾನ್ಫರೆನ್ಸ್‌ನ ನಾಯಕರು ಸಹ ಸಭೆಯಲ್ಲಿ ಪಾಲ್ಗೊಂಡಿದ್ದರು.

80 ಲೋಕಸಭೆ ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶದಿಂದ ಬಿಎಸ್‌ಪಿ ವರಿಷ್ಠೆ ಮಾಯಾವತಿ ಅವರನ್ನು ಸಭೆಗೆ ಆಹ್ವಾನಿಸಿರಲಿಲ್ಲ. ಈ ರಾಜ್ಯದಿಂದ ಸಮಾಜವಾದಿ ಪಕ್ಷ ಮಾತ್ರ ಹಾಜರಾಗಿತ್ತು. ಕುಟುಂಬ ಕಾರ್ಯಕ್ರಮವೊಂದರ ಕಾರಣದಿಂದ ರಾಷ್ಟ್ರೀಯ ಲೋಕದಳದ ಮುಖ್ಯಸ್ಥ ಜಯಂತ್ ಚೌಧರಿ ಸಭೆಯಿಂದ ದೂರು ಇದ್ದರು. ಸಭೆಯ ದೃಶ್ಯಗಳನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿರುವ ಖರ್ಗೆ, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವುದು ನಮ್ಮ ಏಕೈಕ ಜವಾಬ್ದಾರಿಯಾಗಿದೆ. ದೇಶಕ್ಕೆ ಹೊಸ ದಿಕ್ಕನ್ನು ನೀಡಲು ನಮ್ಮ ಸಭೆ ಎಂದು ಬರೆದುಕೊಂಡಿದ್ದಾರೆ.

ಕೇಂದ್ರದ ಸುಗ್ರೀವಾಜ್ಞೆ ಬಿಕ್ಕಟ್ಟು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಡಳಿತಾತ್ಮಕ ನಿಯಂತ್ರಣ ಕುರಿತ ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯು ಪ್ರತಿಪಕ್ಷಗಳು ಅದರಲ್ಲೂ ಕಾಂಗ್ರೆಸ್​ ಹಾಗೂ ದೆಹಲಿ ಆಡಳಿತಾರೂಢ ಆಪ್​ ನಡುವೆ ಬಿಕ್ಕಟ್ಟಿಗೆ ಕಾರಣವಾಗಿದೆ. ಸಂಸತ್ತಿನಲ್ಲಿ ಸುಗ್ರೀವಾಜ್ಞೆಗೆ ಅಂಗೀಕಾರ ದೊರೆಯದಂತೆ ತಡೆಯಲು ಸಿಎಂ ಅರವಿಂದ್​ ಕೇಜ್ರಿವಾಲ್ ಈಗಾಗಲೇ ಹಲವು ಪ್ರತಿಪಕ್ಷಗಳ ನಾಯಕರೊಂದಿಗೆ ಚರ್ಚಿಸಿದ್ದಾರೆ. ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್​ನ ಖರ್ಗೆ, ರಾಹುಲ್​ ಭೇಟಿಗೂ ಕೇಜ್ರಿವಾಲ್​ ಸಮಯ ಕೋರಿದ್ದಾರೆ. ಆದರೆ, ಇದಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ.

  • संविधान और लोकतंत्र की रक्षा हमारा एकमात्र दायित्व है।

    देश को एक नई दिशा देने के लिए हमारी बैठक। pic.twitter.com/BjvqvJigX9

    — Mallikarjun Kharge (@kharge) June 23, 2023 " class="align-text-top noRightClick twitterSection" data=" ">

ಇದನ್ನೂ ಓದಿ: Opposition meet: ಆಪ್ ಅಪಸ್ವರ, ಬಿಆರ್​ಎಸ್​ ಗೈರು: ಮೈತ್ರಿ ಸಭೆಗೂ ಮುನ್ನವೇ ಬಿಜೆಪಿಯೇತರ ಕೂಟದಲ್ಲಿ ಬಿರುಕು!

ಹೀಗಾಗಿ ಈ ನಿರ್ಣಾಯಕ ಸಭೆಗೆ ಒಂದು ದಿನ ಮುನ್ನವೇ ಎಂದರೆ ಗುರುವಾರ ಆಪ್​ - ಕಾಂಗ್ರೆಸ್​ ನಡುವಿನ ಬಿರುಕು ಮುನ್ನೆಲೆಗೆ ಬಂದಿತ್ತು. ಕೇಂದ್ರದ ಸುಗ್ರೀವಾಜ್ಞೆಯನ್ನು ವಿರೋಧಿಸಲು ಕಾಂಗ್ರೆಸ್​ ತನ್ನ ಬೆಂಬಲದ ಭರವಸೆ ನೀಡದಿದ್ದರೆ ಪಕ್ಷವು ಸಭೆಯಿಂದ ಹೊರನಡೆಯುತ್ತದೆ ಎಂದು ಆಪ್​ ಎಚ್ಚರಿಸಿತ್ತು ಎಂದು ಹೇಳಲಾಗಿದೆ. ಹೀಗಾಗಿ ಸಭೆಯ ಕಾರ್ಯಸೂಚಿಯ ಮೇಲೆ ಎಲ್ಲರ ಕಣ್ಣುಗಳು ಇದ್ದವು. ಆಪ್​ ಬಯಸಿದಂತೆ ರಾಷ್ಟ್ರ ರಾಜಧಾನಿಯಲ್ಲಿ ಆಡಳಿತಾತ್ಮಕ ಸೇವೆಗಳ ನಿಯಂತ್ರಣದ ಕುರಿತು ಕೇಂದ್ರದ ಸುಗ್ರೀವಾಜ್ಞೆಯು ಚರ್ಚೆಯ ಪ್ರಮುಖ ಭಾಗವಾಗಿತ್ತೇ ಎಂದು ಗೊತ್ತಾಗಿಲ್ಲ. ಈ ವಿಚಾರದಲ್ಲಿ ತನ್ನ ನಿಲುವನ್ನು ಕಾಂಗ್ರೆಸ್ ಇದುವರೆಗೆ ಅಸ್ಪಷ್ಟವಾಗಿಯೇ ಇಟ್ಟುಕೊಂಡಿದೆ.

ಶುಕ್ರವಾರ ಬೆಳಗ್ಗೆ ಪಾಟ್ನಾಕ್ಕೆ ತೆರಳುವ ಮುನ್ನ ಸುಗ್ರೀವಾಜ್ಞೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ಸುಗ್ರೀವಾಜ್ಞೆಯನ್ನು ವಿರೋಧಿಸುವುದು ಅಥವಾ ಪ್ರತಿಪಾದಿಸುವುದು ಹೊರಗೆ ನಡೆಯುವುದಿಲ್ಲ. ಅದು ಸಂಸತ್ತಿನಲ್ಲಿ ನಡೆಯುತ್ತದೆ. ಸಂಸತ್ತು ಪ್ರಾರಂಭವಾಗುವ ಮೊದಲು ಎಲ್ಲ ಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕಾದ ವಿಷಯಗಳ ಬಗ್ಗೆ ನಿರ್ಧರಿಸುತ್ತವೆ. ಅದು ಅವರಿಗೆ (ಆಪ್​ನವರಿಗೆ) ಗೊತ್ತಿದೆ. ಆ ನಾಯಕರೂ ಸಹ ನಮ್ಮ ಸರ್ವಪಕ್ಷ ಸಭೆಗಳಿಗೆ ಬರುತ್ತಾರೆ. ಆದರೆ, ಅದರ ಬಗ್ಗೆ ಹೊರಗೆ ಏಕೆ ಪ್ರಚಾರವಾಗುತ್ತಿದೆ ಎಂದು ಗೊತ್ತಿಲ್ಲ ಎಂದು ಹೇಳಿದ್ದರು.

ಸಭೆಗೂ ಮುನ್ನ ಕಾಂಗ್ರೆಸ್​ ಸಮಾವೇಶ: ಮತ್ತೊಂದೆಡೆ, ಎಲ್ಲ ಪಕ್ಷಗಳ ಸಭೆಗೂ ಮುನ್ನ ಕಾಂಗ್ರೆಸ್​ ಬೃಹತ್​ ಸಭೆ ನಡೆಸಿದೆ. ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಎಲ್ಲ ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಸೋಲಿಸಲಿವೆ. ಬಿಜೆಪಿಯು ಭಾರತವನ್ನು ವಿಭಜಿಸಲು ಮತ್ತು ದ್ವೇಷ ಮತ್ತು ಹಿಂಸಾಚಾರವನ್ನು ಹರಡಲು ಕೆಲಸ ಮಾಡುತ್ತಿದೆ. ಒಂದೆಡೆ ಕಾಂಗ್ರೆಸ್‌ನ ಭಾರತ್ ಜೋಡೋ ಸಿದ್ಧಾಂತವಿದೆ. ಇನ್ನೊಂದೆಡೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಭಾರತ್ ತೋಡೋ ಚಿಂತನೆ ಇದೆ. ದ್ವೇಷವನ್ನು ದ್ವೇಷದಿಂದ ಎದುರಿಸಲು ಸಾಧ್ಯವಿಲ್ಲ ಎಂದು ನಿಮಗೆ ಗೊತ್ತಿದೆ. ಅದನ್ನು ಪ್ರೀತಿಯಿಂದ ಮಾತ್ರ ಸೋಲಿಸಬಹುದು ಎಂದು ಹೇಳಿದರು.

ಕಾಂಗ್ರೆಸ್ ದೇಶವನ್ನು ಒಗ್ಗೂಡಿಸಲು ಮತ್ತು ಪ್ರೀತಿಯನ್ನು ಹರಡಲು ಕೆಲಸ ಮಾಡುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ನಾಯಕರು ಭಾಷಣ ಮಾಡಿದ್ದರು. ಎಲ್ಲೆಡೆ ಪ್ರಚಾರವನ್ನೂ ಮಾಡಿದ್ದರು. ಆದರೆ, ಈಗ ಫಲಿತಾಂಶವು ಎಲ್ಲರಿಗೂ ಗೋಚರಿಸುತ್ತಿದೆ. ಕಾಂಗ್ರೆಸ್ ಒಗ್ಗಟ್ಟಾಗಿ ನಿಂತ ತಕ್ಷಣ ಕರ್ನಾಟಕದಲ್ಲಿ ಬಿಜೆಪಿ ಕಣ್ಮರೆಯಾಯಿತು. ತೆಲಂಗಾಣ, ಛತ್ತೀಸ್‌ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲೂ ಬಿಜೆಪಿ ಇಲ್ಲ. ಇಲ್ಲೂ ಕಾಂಗ್ರೆಸ್ ಗೆಲ್ಲುತ್ತದೆ ಎಂದು ರಾಹುಲ್​ ವಿಶ್ವಾಸ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಖರ್ಗೆ ಮಾತನಾಡಿ, ಬಿಹಾರದಲ್ಲಿ ಗೆದ್ದರೆ ದೇಶವನ್ನು ಗೆಲ್ಲುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: Patna Opposition Meet: ಎಲ್ಲರೂ ಒಟ್ಟಾಗಿ ಬಿಜೆಪಿ ಸೋಲಿಸೋಣ: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.