ETV Bharat / bharat

ಸುಡಾನ್‌ನಿಂದ ಭಾರತೀಯರನ್ನು ಕರೆತರಲು 'ಆಪರೇಷನ್ ಕಾವೇರಿ' ಪ್ರಾರಂಭ

ಈಗಾಗಲೇ ಪೋರ್ಟ್ ಸುಡಾನ್​ನಲ್ಲಿ ಸಿಲುಕಿರುವ ಸುಮಾರು 500 ಭಾರತೀಯರನ್ನು ಮರಳಿ ಕರೆತರಲು ಆಪರೇಷನ್ ಕಾವೇರಿಯನ್ನು ಪ್ರಾರಂಭಿಸಲಾಗಿದೆ.

ಆಪರೇಷನ್ ಕಾವೇರಿ
ಆಪರೇಷನ್ ಕಾವೇರಿ
author img

By

Published : Apr 24, 2023, 7:50 PM IST

ನವದೆಹಲಿ: ಸುಡಾನ್​ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ನೂರಾರು ಭಾರತೀಯರನ್ನು ಮರಳಿ ಕರೆತರಲು ಭಾರತ ಸರ್ಕಾರವು ಆಪರೇಷನ್ ಕಾವೇರಿಯನ್ನು ಪ್ರಾರಂಭಿಸಿದೆ. ಸೂಡಾನ್‌ನಲ್ಲಿ ಸಿಲುಕಿರುವ ನಮ್ಮ ನಾಗರಿಕರನ್ನು ಮರಳಿ ಕರೆತರಲು ಆಪರೇಷನ್ ಕಾವೇರಿ ಕಾರ್ಯಾಚರಣೆ ನಡೆಯುತ್ತಿದೆ. ಸುಮಾರು 500 ಭಾರತೀಯರು ಪೋರ್ಟ್ ಸುಡಾನ್ ತಲುಪಿದ್ದಾರೆ. ಅವರ ದಾರಿಯಲ್ಲಿ ಇನ್ನಷ್ಟು ನಮ್ಮ ಹಡಗುಗಳು ಮತ್ತು ವಿಮಾನಗಳು ಅವರನ್ನು ಮರಳಿ ಮನೆಗೆ ಕರೆತರಲು ಸಿದ್ಧವಾಗಿವೆ. ಸುಡಾನ್‌ನಲ್ಲಿರುವ ನಮ್ಮ ಎಲ್ಲಾ ಸಹೋದರರಿಗೆ ಸಹಾಯ ಮಾಡಲು ಸರ್ಕಾರ ಬದ್ಧವಾಗಿದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಟ್ವೀಟ್​ ಮಾಡಿದ್ದಾರೆ.

ಭಾರತ ಸರ್ಕಾರವು ಈಗಾಗಲೇ ಎರಡು C-130J ಮಿಲಿಟರಿ ವಿಮಾನಗಳನ್ನು ಜೆಡ್ಡಾದಲ್ಲಿ ಸ್ಟ್ಯಾಂಡ್‌ಬೈನಲ್ಲಿ ಇರಿಸಿದೆ. ಭಾರತೀಯ ನೌಕಾಪಡೆಯ ಹಡಗು ಈ ಪ್ರದೇಶದ ಪ್ರಮುಖ ಬಂದರನ್ನು ತಲುಪಿದೆ.

  • Operation Kaveri gets underway to bring back our citizens stranded in Sudan.

    About 500 Indians have reached Port Sudan. More on their way.

    Our ships and aircraft are set to bring them back home.

    Committed to assist all our bretheren in Sudan. pic.twitter.com/8EOoDfhlbZ

    — Dr. S. Jaishankar (@DrSJaishankar) April 24, 2023 " class="align-text-top noRightClick twitterSection" data=" ">

ಈಜಿಪ್ಟ್ ಮತ್ತು ಯುಎಸ್ ಮತ್ತು ಇತರರೊಂದಿಗೆ ನಿಯಮಿತ ಸಂಪರ್ಕ: ಸುಡಾನ್‌ನಲ್ಲಿ ಭದ್ರತಾ ಪರಿಸ್ಥಿತಿಯು ಅಸ್ಥಿರವಾಗಿದೆ. ರಾಜಧಾನಿ ಖಾರ್ಟೂಮ್‌ನ ವಿವಿಧ ಸ್ಥಳಗಳಿಂದ ಉಗ್ರ ಹೋರಾಟದ ವರದಿಗಳು ಬರುತ್ತಿವೆ. ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಭಾರತವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು MEA ಭರವಸೆ ನೀಡಿದೆ. ಸುಡಾನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಸುಡಾನ್ ಅಧಿಕಾರಿಗಳು, ಯುಎನ್, ಸೌದಿ ಅರೇಬಿಯಾ, ಯುಎಇ, ಈಜಿಪ್ಟ್ ಮತ್ತು ಯುಎಸ್ ಮತ್ತು ಇತರರೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದೆ.

ಇದನ್ನೂ ಓದಿ: ಬಿಜೆಪಿ ನಾಯಕ ಮಿಥುನ್​ ಚಕ್ರವರ್ತಿ ಒಡಿಶಾ ಭೇಟಿ: ಹುತಾತ್ಮ ಯೋಧನಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಟ

INS ಸುಮೇಧಾ ಪೋರ್ಟ್ ಸುಡಾನ್ ತಲುಪಿದೆ: ತ್ವರಿತ ಸ್ಥಳಾಂತರವನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರವು ಬಹು ಆಯ್ಕೆಗಳನ್ನು ಅನುಸರಿಸುತ್ತಿದೆ ಎಂದು MEA ಹೇಳಿದೆ. ಎರಡು ಭಾರತೀಯ ವಾಯುಪಡೆಯ C-130J ವಿಮಾನಗಳು ಪ್ರಸ್ತುತ ಜೆಡ್ಡಾದಲ್ಲಿ ಸ್ಟ್ಯಾಂಡ್‌ಬೈ ಸ್ಥಾನದಲ್ಲಿವೆ ಮತ್ತು INS ಸುಮೇಧಾ ಪೋರ್ಟ್ ಸುಡಾನ್ ತಲುಪಿದೆ. ಆದಾಗ್ಯೂ, ನೆಲದ ಮೇಲಿನ ಯಾವುದೇ ಚಲನೆಯು ಭದ್ರತಾ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ಅದು ಅಸ್ಥಿರವಾಗಿ ಮುಂದುವರಿಯುತ್ತದೆ. ಪ್ರಸ್ತುತ ಎಲ್ಲಾ ವಿದೇಶಿ ವಿಮಾನಗಳಿಗೆ ಸುಡಾನ್ ವಾಯುಪ್ರದೇಶವನ್ನು ಮುಚ್ಚಲಾಗಿದೆ ಮತ್ತು ಭೂಪ್ರದೇಶದ ಚಲನೆಯು ಅಪಾಯಗಳು ಮತ್ತು ವ್ಯವಸ್ಥಾಪನಾ ಸವಾಲುಗಳನ್ನು ಹೊಂದಿದೆ.

ಇದನ್ನೂ ಓದಿ: ನಾಗ್ಪುರ ಹಿಂಗಾನಾ MIDC ಕಂಪನಿಯಲ್ಲಿ ಬೆಂಕಿ ಅವಘಡ.. ಮೂವರು ಕಾರ್ಮಿಕರು ಸಾವು

500 ಭಾರತೀಯರನ್ನು ಮರಳಿ ಕರೆತರಲು ಆಪರೇಷನ್ ಕಾವೇರಿ: ಈಗಾಗಲೇ ಪೋರ್ಟ್ ಸುಡಾನ್​ನಲ್ಲಿ ಸಿಲುಕಿರುವ ಸುಮಾರು 500 ಜನ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಆಪರೇಷನ್ ಕಾವೇರಿಯನ್ನು ಪ್ರಾರಂಭಿಸಲಾಗಿದೆ ಮತ್ತು ಇನ್ನೂ ಹೆಚ್ಚಿನವರು ತಮ್ಮ ಹಾದಿಯಲ್ಲಿದ್ದಾರೆ. ಭಾರತವು ಸುಡಾನ್‌ನಲ್ಲಿರುವ ತನ್ನ ಎಲ್ಲಾ ಸಹೋದರ ಸಹೋದರಿಯರಿಗೆ ಸಹಾಯ ಮಾಡಲು ಬದ್ಧವಾಗಿದೆ ಎಂದು ಜೈಶಂಕರ್​ ಅಭಯ ನೀಡಿದ್ದಾರೆ.

ಇದನ್ನೂ ಓದಿ : ಸುಡಾನ್​ನಿಂದ ಭಾರತೀಯರನ್ನು ಸ್ಥಳಾಂತರಿಸಲು ಐಎನ್‌ಎಸ್ ಸುಮೇಧಾ, ಸಿ-130ಜೆ ಮಿಲಿಟರಿ ಸಾರಿಗೆ ವಿಮಾನ ಸಜ್ಜು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.