ETV Bharat / bharat

ಆಪರೇಷನ್ ಬ್ಲೂ ಸ್ಟಾರ್​ 38ನೇ ವಾರ್ಷಿಕೋತ್ಸವ.. ಗೋಲ್ಡನ್ ಟೆಂಪಲ್​ನಲ್ಲಿ ಬೋಗ್​ ಅರ್ಪಿಸಿದ ಸಿಖ್​ರು! - ಆಪರೇಷನ್ ಬ್ಲೂ ಸ್ಟಾರ್​ ವಾರ್ಷಿಕೋತ್ಸವ ಸುದ್ದಿ

ಆಪರೇಷನ್ ಬ್ಲೂ ಸ್ಟಾರ್ 38 ವರ್ಷಗಳನ್ನು ಪೂರೈಸಿದೆ. ಈ ಸಂಸ್ಮರಣಾ ದಿನದಂದು ಧಾರ್ಮಿಕ ಸಂಘಟನೆಗಳ ಕಾರ್ಯಕ್ರಮಗಳು ಮತ್ತು ಅಮೃತಸರ ಬಂದ್​ಗೆ ಕರೆ ನೀಡಿರುವ ಹಿನ್ನೆಲೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅಮೃತಸರದ ಗೋಲ್ಡನ್ ಟೆಂಪಲ್ ಕಾಂಪ್ಲೆಕ್ಸ್ ನಲ್ಲಿರುವ ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ 1984 ರಲ್ಲಿ ಆಪರೇಷನ್ ಬ್ಲೂಸ್ಟಾರ್ ಸಮಯದಲ್ಲಿ ಹಾನಿಗೊಳಗಾದ ಗುರು ಗ್ರಂಥ ಸಾಹಿಬ್​ನ ಪ್ರತಿಯನ್ನು ವೀಕ್ಷಣೆಗಾಗಿ ಇರಿಸಿದೆ..

Operation Blue Star Anniversary  Operation Blue Star Anniversary news  Heavy Police Deployment for Operation Blue Star Anniversary  ಆಪರೇಷನ್ ಬ್ಲೂ ಸ್ಟಾರ್​ ವಾರ್ಷಿಕೋತ್ಸವ  ಆಪರೇಷನ್ ಬ್ಲೂ ಸ್ಟಾರ್​ ವಾರ್ಷಿಕೋತ್ಸವ ಸುದ್ದಿ  ಆಪರೇಷನ್ ಬ್ಲೂ ಸ್ಟಾರ್​ ವಾರ್ಷಿಕೋತ್ಸವ ಹಿನ್ನೆಲೆ ಬಿಗಿ ಪೊಲೀಸ್​ ಬಂದೋಬಸ್ತ್​
ಆಪರೇಷನ್ ಬ್ಲೂ ಸ್ಟಾರ್​ 38ನೇ ವಾರ್ಷಿಕೋತ್ಸವ
author img

By

Published : Jun 6, 2022, 2:13 PM IST

ಅಮೃತಸರ : ಇಂದು ಆಪರೇಷನ್ ಬ್ಲೂಸ್ಟಾರ್​ನ 38ನೇ ವಾರ್ಷಿಕೋತ್ಸವವನ್ನು ಸಿಖ್​ರು ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಅಕಲ್ ತಖ್ತ್ ಸಾಹಿಬ್‌ನಲ್ಲಿ ಶ್ರೀ ಅಖಂಡ ಪಥ ಸಾಹಿಬ್ ಅವರ ಭೋಗ್ ಅರ್ಪಿಸಲಾಯಿತು. ಈ ವೇಳೆ ಖಲಿಸ್ತಾನದ ಘೋಷಣೆಗಳು ಮೊಳಗಿದವು. ಈ ಸಂದರ್ಭದಲ್ಲಿ ದರ್ಬಾರ್ ಸಾಹಿಬ್‌ಗೆ ನಮನ ಸಲ್ಲಿಸಲು ಸಾವಿರಾರು ಸಿಖ್​ ಪ್ರಜೆಗಳು ಆಗಮಿಸಿದ್ದರು.

ಸಿಖ್ ರಾಷ್ಟ್ರದ ಹೆಸರಿನಲ್ಲಿ ಸಂದೇಶ : ಆಪರೇಷನ್ ಬ್ಲೂ ಸ್ಟಾರ್‌ನ ವಾರ್ಷಿಕೋತ್ಸವದಂದು ಶ್ರೀ ಅಕಲ್ ತಖ್ತ್ ಸಾಹಿಬ್‌ನ ಜಥೇದಾರ್ ಜಿಯಾನಿ ಹರ್‌ಪ್ರೀತ್ ಸಿಂಗ್ ಹುತಾತ್ಮರ ಸ್ಮರಣಾರ್ಥದ ಸಂದೇಶವನ್ನು ಸಿಖ್ ರಾಷ್ಟ್ರದ ಹೆಸರಿನಲ್ಲಿ ಸಾರಿದರು. ಹುತಾತ್ಮರನ್ನು ಸ್ಮರಿಸುವುದಕ್ಕಾಗಿ ನಾವು ಸೇರಿದ್ದೇವೆ.

1947ರಲ್ಲಿ ಭಾರತ ಸ್ವತಂತ್ರವಾಗುವ ವೇಳೆಗೆ ಜವಾಹರಲಾಲ್ ನೆಹರು ಅವರು ರೂಪಿಸಿದ್ದ ಸಿಖ್ಖರನ್ನು ಎದುರಿಸಲು ತಂತ್ರ ರೂಪಿಸಲಾಗಿತ್ತು ಎಂದು ಜಥೇದಾರ್ ಹೇಳಿದರು. ಸಿಖ್ಖರನ್ನು ಎಲ್ಲ ರೀತಿಯಲ್ಲೂ ದುರ್ಬಲಗೊಳಿಸುವುದು ಅಂದಿನ ಸರ್ಕಾರದ ಕುತಂತ್ರವಾಗಿತ್ತು. ನಮ್ಮಲ್ಲಿ ಸಾಕಷ್ಟು ಸವಾಲುಗಳಿವೆ.

ಅದು ನಮ್ಮನ್ನು ದುರ್ಬಲಗೊಳಿಸುತ್ತಿದೆ. ನಾವು ಹೋರಾಡಬೇಕಾಗಿದೆ. ಇಂದು ಪ್ರತಿ ಗ್ರಾಮ, ನಗರಗಳಲ್ಲಿ ಕ್ರೈಸ್ತ ಧರ್ಮ ಪ್ರಚಾರ ಮಾಡಲಾಗುತ್ತಿದೆ. ಇದು ದೊಡ್ಡ ಸವಾಲಾಗಿದೆ. ಇಂದು ನಾನು ಸಿಖ್ ಧರ್ಮ ಪ್ರಚಾರಕರನ್ನು ಗ್ರಾಮದಿಂದ ಗ್ರಾಮಕ್ಕೆ ತೆರಳಿ ಪ್ರಚಾರ ಮಾಡುವಂತೆ ವಿನಂತಿಸುತ್ತೇನೆ ಎಂದು ಜಥೇದಾರ್ ಹೇಳಿದರು.

ಓದಿ: ಅಮೃತಸರದ ಸ್ವರ್ಣ ಮಂದಿರ ಅಪವಿತ್ರಗೊಳಿಸಲು ಯತ್ನ ಆರೋಪ : ಓರ್ವ ವ್ಯಕ್ತಿಯ ಹತ್ಯೆ

ನಮ್ಮ ಯುವಕರು ಮಾದಕ ವ್ಯಸನಿಗಳಾಗುತ್ತಿದ್ದಾರೆ. ಇದರಿಂದ ದೂರವಿರುವುದನ್ನು ರೂಢಿಸಿಕೊಳ್ಳಬೇಕು ಎಂದರು. ಈ ಬಾರಿ ಲಯನ್​ ಸಮುದಾಯವನ್ನು ತಡೆಯಲು ಸುವರ್ಣಸೌಧದ ಮುಂದೆ ಸಾಕಷ್ಟು ಪೊಲೀಸರನ್ನು ನಿಯೋಜಿಸಲಾಗಿದೆ. ಈ ಕುರಿತು ಸರಕಾರವನ್ನು ಕೇಳಿದಾಗ ಸಿಖ್ಖರ ಸುರಕ್ಷತೆಗಾಗಿ ಈ ವ್ಯವಸ್ಥೆ ಮಾಡಲಾಗಿದೆ ಅಂತಾ ಹೇಳಿದ್ದಾರೆ. ಈ ವ್ಯವಸ್ಥೆಗಳನ್ನು ಸಿಖ್ಖರ ಸುರಕ್ಷತೆಗಾಗಿ ಮಾಡಲಾಗಿಲ್ಲ. ಆದರೆ, ಸಿಂಹಗಳನ್ನು ತಡೆಯಲು ಮಾಡಲಾಗಿದೆ ಎಂದು ಜಥೇದಾರ್ ಹೇಳಿದರು.

ಸಿಖ್‌ ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ : ಸಿಂಹ ಅಸಹಾಯಕ ಮತ್ತು ಅಮಾಯಕರ ಮೇಲೆ ದಾಳಿ ಮಾಡುವುದಿಲ್ಲ. ಇತರ ಧರ್ಮದ ಜನರು ತಮ್ಮ ಯುವಕರಿಗೆ ರಹಸ್ಯವಾಗಿ ಶಸ್ತ್ರಾಸ್ತ್ರಗಳ ತರಬೇತಿ ನೀಡುತ್ತಿದ್ದಾರೆ. ಆದರೆ, ನಾವು ಸಿಖ್ಖರಿಗೆ ಕಾನೂನುಬದ್ಧ ಆಯುಧಗಳನ್ನು ಕಲಿಸುತ್ತೇವೆ. ಸಚ್‌ಖಂಡ್ ಶ್ರೀ ದರ್ಬಾರ್ ಸಾಹಿಬ್ ಮೇಲೆ ದಾಳಿ ಮಾಡಿದ ಪಕ್ಷ ಇಂದು ನಾಶವಾಗುತ್ತಿದೆ. ಅದನ್ನು ಉಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಜಥೇದಾರ್ ಹೇಳಿದರು.

ಬಿಗಿ ಪೊಲೀಸ್ ಬಂದೋಬಸ್ತ್ : ಆಪರೇಷನ್ ಬ್ಲೂ ಸ್ಟಾರ್‌ನ ವಾರ್ಷಿಕೋತ್ಸವದ ಹಿನ್ನೆಲೆ ಶ್ರೀ ಹರಿಮಂದರ್ ಸಾಹಿಬ್‌ಗೆ ಹೋಗುವ ಎಲ್ಲಾ ರಸ್ತೆಗಳಲ್ಲಿ ಬಿಗಿ ಪೊಲೀಸ್ ಮತ್ತು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಶಿರೋಮಣಿ ಸಮಿತಿಯು ತನ್ನ ಕಾರ್ಯಪಡೆಯನ್ನು ಕ್ಯಾಂಪಸ್‌ನೊಳಗೆ ನಿಯೋಜಿಸಿದ್ದರಿಂದ ವಾತಾವರಣವು ಶಾಂತವಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.