ಕೋಲ್ಕತಾ : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಎರಡು ಸಿಂಡಿಕೇಟ್‌ಗಳಿವೆ. ಒಬ್ಬರು ದಂಗೆಕೋರರು, ದೆಹಲಿ, ಗುಜರಾತ್ ಮತ್ತು ಯುಪಿಗಳಲ್ಲಿ ಗಲಭೆಗಳನ್ನು ಉಂಟು ಮಾಡಿದ್ದಾರೆ. ಇನ್ನೊಬ್ಬರು ಕೈಗಾರಿಕಾ ಬೆಳವಣಿಗೆಯನ್ನು ನಿಧಾನಗೊಳಿಸಿದ್ದಾರೆ.
ಆದರೆ, ಗಡ್ಡವನ್ನು ಮಾತ್ರ ಬೆಳೆಸುತ್ತಿದ್ದಾರೆ. ಕೆಲವೊಮ್ಮೆ ತಮ್ಮನ್ನು ತಾವು ಸ್ವಾಮಿ ವಿವೇಕಾನಂದ ಎಂದು ಕರೆದುಕೊಳ್ಳುತ್ತಾರೆ ಮತ್ತು ಕ್ರೀಡಾಂಗಣಗಳಿಗೆ ಸ್ವತಃ ತಮ್ಮ ಹೆಸರಿಟ್ಟುಕೊಳ್ಳುತ್ತಾರೆ.
ಒಂದು ದಿನ ಅವರು ದೇಶವನ್ನೂ ಮಾರಿ ತನ್ನದೇ ಹೆಸರನ್ನು ಇಟ್ಟುಕೊಳ್ಳುತ್ತಾರೆ. ಅವರ ತಲೆಯಲ್ಲಿ ಏನೋ ಇದೆ. ಒಂದು ತಿರುಪು ಸಡಿಲವಾಗಿದೆ ಎಂದು ತೋರುತ್ತದೆ ಎಂದು ಪರೋಕ್ಷವಾಗಿ ಮೋದಿ ತಲೆ ಸರಿ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಅವರು ಕ್ರೀಡಾಂಗಣಗಳ ಹೆಸರನ್ನು ಮರುನಾಮಕರಣ ಮಾಡುತ್ತಾರೆ. ತಮ್ಮ ಚಿತ್ರಗಳನ್ನು ಕೊರೊನಾ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳಲ್ಲಿ ಮುದ್ರಿಸಿದ್ದಾರೆ ಎಂದ ದೀದಿ, ದೇಶವನ್ನು ಅವರ ಹೆಸರಿನಿಂದ ಮರುನಾಮಕರಣ ಮಾಡುವ ದಿನ ದೂರವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಇಲ್ಲಿ ಅಧಿಕಾರ ಪಡೆಯಲು ತನ್ನದೇ ಆದ ಚಾಣಾಕ್ಷ ಬುದ್ಧಿ ತೋರುತ್ತಿದೆ. ಎರಡು ಬಾರಿ ಸಿಎಂ ಆದ ಬ್ಯಾನರ್ಜಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಎಲ್ಲಾ ಪ್ರಯತ್ನ ಮಾಡುತ್ತಿದೆ. ಅದರಲ್ಲೂ ಹೆಚ್ಚಿನ ಸಂಖ್ಯೆಯ ತೃಣಮೂಲ ನಾಯಕರನ್ನು ತನ್ನತ್ತ ಸೆಳೆದುಕೊಂಡಿದೆ. ಮಾರ್ಚ್ 27ರಿಂದ ದಾಖಲೆಯ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೇ 2ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.