ತೆಲಂಗಾಣ: ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ದಂತಲಪಲ್ಲಿ ಮಂಡಲದ ವೇಮುಲಪಲ್ಲಿ ಉಪನಗರ ಪಂತುಲು ತಾಂಡಾದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೇವಲ ನಾಲ್ಕು ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರಿದ್ದಾರೆ. ಈ ಹಿಂದೆ ಇಬ್ಬರು ಶಿಕ್ಷಕರು ಹಾಗೂ ಹದಿನೈದು ವಿದ್ಯಾರ್ಥಿಗಳಿದ್ದರು. ಇದನ್ನು ಗಮನಿಸಿದರೆ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದು ಎದ್ದು ಕಾಣುತ್ತದೆ.
ತಾಂಡಾದ ಕೆಲವರು ಕೆಲಸಕ್ಕಾಗಿ ಬೇರೆಡೆ ವಲಸೆ ಹೋಗಿರುವ ಕಾರಣ ತಮ್ಮ ಮಕ್ಕಳನ್ನು ಕೂಡ ಕರೆದುಕೊಂಡು ಹೋಗಿದ್ದಾರೆ. ಹೀಗಾಗಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ನಾಲ್ಕಕ್ಕಿಳಿದಿದೆ. ಕೋವಿಡ್ ಕಾರಣ ಮೂರು ವರ್ಷಗಳ ಹಿಂದೆೇ ಶಾಲೆ ಮುಚ್ಚಲಾಗಿತ್ತು. ಆ ಸಂದರ್ಭದಲ್ಲಿ ಶಿಕ್ಷಕರು ಬೇರೆ ಶಾಲೆಗೆ ನಿಯೋಜನೆಗೊಂಡಿದ್ದರು. ಈ ವರ್ಷ ಶಿಕ್ಷಕರು ತಾಂಡಾದ ಜನರೊಂದಿಗೆ ಮಾತನಾಡಿ, ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವಿ ಮಾಡಿದ್ದಾರೆ. ತಾಂಡಾದವರೊಂದಿಗೆ ಚರ್ಚಿಸಿಯೇ ಮತ್ತೆ ಶಾಲೆ ತೆರೆಯಲಾಗಿದೆ. ಹೀಗಿದ್ದರೂ ಪ್ರಸ್ತುತ ಕೇವಲ ನಾಲ್ಕು ವಿದ್ಯಾರ್ಥಿಗಳು ಮಾತ್ರ ವ್ಯಾಸಂಗ ಮಾಡುತ್ತಿದ್ದಾರೆ.
ಇದನ್ನೂ ಓದಿ: ಇದು ಝೆಡ್ ಪ್ಲಸ್ ಅಲ್ಲವೇ ಅಲ್ಲ, Z+++! ಮರಿಯಾನೆಗೆ ಬೇಧಿಸಲಾಗದ ಕೋಟೆ ಕಟ್ಟಿದ ಜಂಬೋ ಗುಂಪು
ಪರಿಸ್ಥಿತಿ ಹೀಗಿದ್ದರೂ ಶಿಕ್ಷಕರು ಭರವಸೆ ಕಳೆದುಕೊಂಡಿಲ್ಲ. ಈಗ ನಮ್ಮಲ್ಲಿ ನಾಲ್ಕು ವಿದ್ಯಾರ್ಥಿಗಳಿದ್ದಾರೆ. ನಾವು ಇತರೆ ಪೋಷಕರಿಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಮನವೊಲಿಸುತ್ತೇವೆ ಎಂದು ಹೇಳುತ್ತಾರೆ. ಇನ್ನು ನಾಲ್ವರು ವಿದ್ಯಾರ್ಥಿಗಳಲ್ಲಿ ಒಬ್ಬರು ಕಾರಣಾಂತರಗಳಿಂದ ಕೆಲವು ದಿನಗಳಿಂದ ಗೈರು ಹಾಜರಾಗಿದ್ದು, ಸದ್ಯ ಮೂವರು ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಈ ಮೂವರು ವಿದ್ಯಾರ್ಥಿಗಳಿಗೆ ಇಬ್ಬರು ಶಿಕ್ಷಕರು ಪಾಠ ಮಾಡುತ್ತಿದ್ದಾರೆ.