ETV Bharat / bharat

ತೆರಿಗೆ ವಂಚನೆ: ₹1 ಲಕ್ಷ ಕೋಟಿ ಪಾವತಿಸಲು ಆನ್‌ಲೈನ್ ಗೇಮಿಂಗ್ ಕಂಪನಿಗಳಿಗೆ ಕೇಂದ್ರ ಸರ್ಕಾರ ನೋಟಿಸ್​ - Online gaming companys gets GST notices

ತೆರಿಗೆ ವಂಚಿಸುತ್ತಿರುವ ಆನ್​ಲೈನ್​ ಗೇಮಿಂಗ್​ ಕಂಪನಿಗಳಿಗೆ ಕೇಂದ್ರ ಸರ್ಕಾರ 1 ಲಕ್ಷ ಕೋಟಿ ರೂಪಾಯಿಯಷ್ಟು ನೋಟಿಸ್​ ನೀಡಿದೆ.

ತೆರಿಗೆ ವಂಚನೆ
ತೆರಿಗೆ ವಂಚನೆ
author img

By PTI

Published : Oct 25, 2023, 9:13 PM IST

ನವದೆಹಲಿ: 'ಕೌಶಲ್ಯದ ಆಟಗಳು' ಎಂಬ ಹೆಸರಿನಲ್ಲಿ ಜನರಿಂದ ಕೋಟಿಗಟ್ಟಲೆ ಹಣ ಸಂಪಾದಿಸಿ, ತೆರಿಗೆ ವಂಚಿಸುತ್ತಿರುವ ವಿವಿಧ ಆನ್​ಲೈನ್​ ಗೇಮಿಂಗ್​ ಕಂಪನಿಗಳಿಗೆ ಇದುವರೆಗೂ 1 ಲಕ್ಷ ಕೋಟಿ ರೂಪಾಯಿ ಪಾವತಿಸಲು ಶೋಕಾಸ್​ ನೋಟಿಸ್​ ಜಾರಿ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ.

ತೆರಿಗೆ ವಂಚನೆಗಾಗಿ ಜಿಎಸ್‌ಟಿ ಅಧಿಕಾರಿಗಳು ಇದುವರೆಗೆ ಆನ್‌ಲೈನ್ ಗೇಮಿಂಗ್ ಕಂಪನಿಗಳಿಗೆ 1 ಲಕ್ಷ ಕೋಟಿ ರೂಪಾಯಿ ಪಾವತಿಸಲು ಎಚ್ಚರಿಕೆ ಪತ್ರ ರವಾನಿಸಿದ್ದಾರೆ. ಅಕ್ಟೋಬರ್ 1 ರಿಂದ ವಿದೇಶಿ ಗೇಮಿಂಗ್ ಕಂಪನಿಗಳು ಭಾರತದಲ್ಲಿ ನೋಂದಾಯಿಸಿದ ಯಾವುದೇ ದಾಖಲೆಗಳು ಇಲ್ಲ. ಸರ್ಕಾರ ಜಿಎಸ್‌ಟಿ ಕಾನೂನನ್ನು ತಿದ್ದುಪಡಿ ಮಾಡಿದೆ. ಸಾಗರೋತ್ತರ ಆನ್‌ಲೈನ್ ಗೇಮಿಂಗ್ ಕಂಪನಿಗಳು ಅಕ್ಟೋಬರ್ 1 ರಿಂದ ಭಾರತದಲ್ಲಿ ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಬುಧವಾರ ಹೇಳಿದರು.

ಆನ್‌ಲೈನ್ ಗೇಮಿಂಗ್ ವೇದಿಕೆಗಳಲ್ಲಿ ಕಟ್ಟಲಾದ ಪಂತದ ಮೌಲ್ಯದ ಪೈಕಿ 28 ಪ್ರತಿಶತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಲಾಗುವುದು ಎಂದು ಆಗಸ್ಟ್‌ನಲ್ಲಿ ಜಿಎಸ್‌ಟಿ ಕೌನ್ಸಿಲ್ ಸ್ಪಷ್ಟಪಡಿಸಿದೆ. ಅಲ್ಲಿಂದೀಚೆಗೆ, ಜಿಎಸ್​ಟಿ ಕಟ್ಟಲು ಸೂಚಿಸಿ ಗೇಮಿಂಗ್ ಕಂಪನಿಗಳಿಗೆ ಶೋಕಾಸ್ ನೋಟಿಸ್ ಜಾರಿಯಾಗಿದೆ.

ಡ್ರೀಮ್​-11 ಗೇಮಿಂಗ್ ಕಂಪನಿಗೆ 40,000 ಕೋಟಿ ರೂ.ಗಳ ವಂಚನೆ ಆರೋಪದ ಮೇಲೆ ಶೋಕಾಸ್ ನೋಟಿಸ್ ನೀಡಲಾಗಿದೆ. ಕ್ಯಾಸಿನೊ ಆಪರೇಟರ್‌ಗಳು ಮತ್ತು ಗೇಮಿಂಗ್ ಪ್ಲಾಟ್‌ಫಾರ್ಮ್ ಆದ ಡೆಲ್ಟಾ ಕಾರ್ಪೊಗೆ ಎರಡು ಕಂತುಗಳಲ್ಲಿ ಒಟ್ಟು 23,000 ಕೋಟಿ ರೂ. ಕಟ್ಟುವಂತೆ GST ಅಧಿಕಾರಿಗಳು ಸೂಚಿಸಿದ್ದಾರೆ.

ಗೇಮಿಂಗ್​ ಕಂಪನಿಗಳಿಂದ ಕೋರ್ಟ್​ ಮೊರೆ: ತೆರಿಗೆ ವಂಚನೆ ಆರೋಪದ ಮೇಲೆ ಸರ್ಕಾರ ತಮ್ಮ ವಿರುದ್ಧ ಜಾರಿ ಮಾಡಿರುವ ಶೋಕಾಸ್​ ನೋಟಿಸ್​ ಪ್ರಶ್ನಿಸಿ ಹಲವು ಆನ್​ಲೈನ್​ ಕಂಪನಿಗಳು ಕೋರ್ಟ್​ ಮೊರೆ ಹೋಗಿವೆ. ಆನ್‌ಲೈನ್ ಆಡುವ ಪ್ರತಿ ಆಟಗಳು 'ಕೌಶಲ್ಯದ ಆಟಗಳು' ಆಗಿರುವುದರಿಂದ, ತಾವು ಶೇಕಡಾ 18 ರ ದರದಲ್ಲಿ ತೆರಿಗೆಯನ್ನು ಪಾವತಿಸುತ್ತಿದ್ದೇವೆ ಎಂದು ಸಮರ್ಥಿಸಿಕೊಂಡಿವೆ. ಇದು ಕಂದಾಯ ಅಧಿಕಾರಿಗಳ ಹಕ್ಕುಗಳನ್ನೇ ಪ್ರಶ್ನಿಸಿದಂತಾಗಿದೆ.

ಜಿಎಸ್‌ಟಿ ಸೂಚನೆಯನ್ನು ಪ್ರಶ್ನಿಸಿ ಡೆಲ್ಟಾ ಕಾರ್ಪ್ ಕಂಪನಿ ಬಾಂಬೆ ಈಚೆಗೆ ಹೈಕೋರ್ಟ್‌ನ ಮೊರೆ ಹೋಗಿದೆ. ಅಕ್ಟೋಬರ್ 23, 2023 ರಂದು ಕಂಪನಿ ಮತ್ತು ಅದರ ಅಂಗಸಂಸ್ಥೆಗಳು ಸಲ್ಲಿಸಿದ ರಿಟ್ ಅರ್ಜಿಗಳನ್ನು ಗೋವಾದ ಬಾಂಬೆ ಹೈಕೋರ್ಟ್ ಪರಿಗಣಿಸಿದೆ. ಶೋಕಾಸ್​ ನೋಟಿಸ್​ಗಳ ಮೇಲೆ ಅಧಿಕಾರಿಗಳು ಅಂತಿಮ ನಿರ್ಧಾರ ಕೈಗೊಳ್ಳಬಾರದು ಎಂದೂ ಸೂಚನೆ ನೀಡಿದ್ದಾಗಿ ಡೆಲ್ಟಾ ಕಾರ್ಪ್​ ಹೇಳಿದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ 21,000 ಕೋಟಿ ಜಿಎಸ್‌ಟಿ ವಂಚನೆ ಆರೋಪದ ಮೇಲೆ ಗೇಮ್ಸ್‌ಕ್ರಾಫ್ಟ್‌ಗೆ ಶೋಕಾಸ್ ನೋಟಿಸ್ ಕಳುಹಿಸಲಾಗಿತ್ತು. ಕರ್ನಾಟಕ ಹೈಕೋರ್ಟ್ ಕಂಪನಿಯ ಪರವಾಗಿ ತೀರ್ಪು ನೀಡಿದ್ದು, ಇದರ ವಿರುದ್ಧ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ವಿಶೇಷ ಅರ್ಜಿ ಸಲ್ಲಿಸಿದೆ.

ಇದನ್ನೂ ಓದಿ: ಜಡ್ಜ್​ಗಳಿಗೆ ಶಿಸ್ತು ಮುಖ್ಯ, ತಮಗೆ ವಹಿಸದ ಪ್ರಕರಣ ಕೈಗೆತ್ತಿಕೊಳ್ಳಬಾರದು: ಸುಪ್ರೀಂ ಕೋರ್ಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.