ETV Bharat / bharat

ಅರೇ ಬಾಪ್ ರೇ! ಹೆಲ್ಮೆಟ್​ ಹಾಕಿಲ್ಲವೆಂದು ಕಾರ್ ಡ್ರೈವರ್​ಗೆ ಸಾವಿರ ರೂ. ದಂಡ! - ಹೆಲ್ಮೆಟ್​ ಹಾಕಿಲ್ಲವೆಂದು ಕಾರ್ ಡ್ರೈವರ್​ಗೆ ದಂಡ

ಕಾರು ಚಲಾವಣೆ ಮಾಡಿಕೊಂಡು ಹೋಗುತ್ತಿದ್ದ ಡ್ರೈವರ್​ ಒಬ್ಬನಿಗೆ ಹೆಲ್ಮೆಟ್​ ಹಾಕ್ಕಿಲ್ಲ ಎಂದು ಸಾವಿರ ರೂ. ದಂಡ ಕಟ್ಟುವಂತೆ ರಶೀದಿ ನೀಡಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

Patna police New
Patna police New
author img

By

Published : Aug 11, 2021, 5:27 PM IST

ಪಾಟ್ನಾ(ಬಿಹಾರ): ಬೈಕ್​ ಮೇಲೆ ಪ್ರಯಾಣಿಸುವಾಗ ಹೆಲ್ಮೆಟ್​ ಹಾಕಿಲ್ಲ ಎಂದು ದಂಡ ವಸೂಲಿ ಮಾಡುವುದು ಸರ್ವೆ ಸಾಮಾನ್ಯ. ಆದರೆ ಇಲ್ಲೊಬ್ಬ ಟ್ರಾಫಿಕ್​ ಪೊಲೀಸ್​ನ ವರ್ತನೆಗೆ ಇನ್ನಿಲ್ಲದ ಆಶ್ಚರ್ಯ ವ್ಯಕ್ತವಾಗಿದೆ. ಬಿಹಾರದ ಪಾಟ್ನಾದಲ್ಲಿನ ಕಂಕರ್‌ಬಾಗ್‌ನ ಟ್ರಾಫಿಕ್ ಚೆಕ್ ಪೋಸ್ಟ್‌ನಲ್ಲಿ ಈ ಘಟನೆ ನಡೆದಿದೆ.

ಕಾರು ಡ್ರೈವ್ ಮಾಡಿಕೊಂಡು ತೆರಳುತ್ತಿದ್ದ ವಕೀಲನೊಬ್ಬನಿಗೆ ಹೆಲ್ಮೆಟ್ ಹಾಕಿಲ್ಲವೆಂದು ಸಾವಿರ ರೂ.ದಂಡ ಹಾಕಿರುವ ಘಟನೆ ನಡೆದಿದೆ. ಕನಕರಬಾಗ್​ ಟ್ರಾಫಿಕ್​​ ಸಿಗ್ನಲ್​​ನಲ್ಲಿ ಸೇವೆ ಸಲ್ಲಿಸುತ್ತಿದ್ದ ಟ್ರಾಫಿಕ್​​ ಪೊಲೀಸ್ ಸಿಬ್ಬಂದಿ ಈ ರೀತಿಯಾಗಿ ನಡೆದುಕೊಂಡಿದ್ದಾರೆ. ಪಾಟ್ನಾ ಹೈಕೋರ್ಟ್​ನ ವಕೀಲ ಪ್ರಕಾಶ್​ ಚಂದ್ರ ಅಗರವಾಲ್​​ ಕಾರು ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಹೆಲ್ಮೆಟ್​ ಹಾಕಿಲ್ಲವೆಂದು 1,000 ರೂಪಾಯಿ ದಂಡ ಕಟ್ಟುವಂತೆ ರಶೀದಿ ಅವರ ಕೈಗೆ ನೀಡಿದ್ದಾರೆ.

ಈ ವೇಳೆ ಪೊಲೀಸರು ಹಾಗೂ ವಕೀಲನ ನಡುವೆ ವಾದ ನಡೆದಿದೆ. ಕಾರಿನ ಎಲ್ಲ ದಾಖಲೆ ತಪಾಸಣೆ ನಡೆಸಿದ್ದಾಗ ಎಲ್ಲವೂ ಸರಿಯಾಗಿದ್ದ ಕಾರಣ 1000 ರೂಪಾಯಿ ಚಲನ್​​​ ಕ್ಯಾನ್ಸಲ್​ ಮಾಡಿದ್ದಾರೆ.

ಇದನ್ನೂ ಓದಿರಿ: ಕಲ್ಲು ಗಣಿಗಾರಿಕೆಯಲ್ಲಿ ಕುಸಿತ: ಮೂವರು ಮಹಿಳೆಯರು ಸೇರಿ ಏಳು ಕಾರ್ಮಿಕರ ಸಾವು

ಈ ಆಘಾತಕಾರಿ ಸುದ್ದಿ ಕೇಳಿರುವ ವಕೀಲರಿಗೆ ಕೆಲ ಕಾಲ ಆಶ್ಚರ್ಯವಾಗಿದ್ದು, ಹೆಲ್ಮೆಟ್​​ ಧರಿಸದ ಕಾರಣ ಕಾರಿನ ಚಾಲಕರಿಗೂ ದಂಡ ವಿಧಿಸಲಾಗುವುದೇ? ಎಂದು ಪ್ರಶ್ನೆ ಮಾಡಿಕೊಂಡಿದ್ದಾರೆ. ಈ ವಿಷಯದ ಕುರಿತು ವಕೀಲರು ಇದೀಗ ಸಂಚಾರಿ ವಿಭಾಗದ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದು, ತನಿಖೆ ನಡೆಸಲಾಗುವುದು ಎಂಬ ಭರವಸೆ ಸಿಕ್ಕಿದೆ. ಜೊತೆಗೆ ತಪ್ಪು ಮಾಡಿರುವ ಟ್ರಾಫಿಕ್ ಪೊಲೀಸ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ಸಹ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.