ETV Bharat / bharat

ಈಗ ಒಂದು ದೇಶ ಒಂದು ಚುನಾವಣೆ.. ಮುಂದೆ, ಒಂದು ರಾಷ್ಟ್ರ ಒಂದೇ ಧರ್ಮ: ಡಿಸಿಎಂ ತೇಜಸ್ವಿ ಯಾದವ್​ - ಒಂದು ದೇಶ ಒಂದು ಚುನಾವಣೆ

ಒಂದು ರಾಷ್ಟ್ರ ಒಂದು ಚುನಾವಣೆಗೆ ಪರ ವಿರೋಧ ವ್ಯಕ್ತವಾಗುತ್ತಿದ್ದು, ಕೇಂದ್ರ ಸರ್ಕಾರ ಮುಂದೆ ಒಂದು ದೇಶ ಒಂದು ಧರ್ಮವನ್ನು ತರಲಿದೆ ಎಂದು ಬಿಹಾರ ಡಿಸಿಎಂ ತೇಜಸ್ವಿ ಯಾದವ್ ಆರೋಪಿಸಿದ್ದಾರೆ.

ತೇಜಸ್ವಿ ಯಾದವ್
ತೇಜಸ್ವಿ ಯಾದವ್
author img

By ETV Bharat Karnataka Team

Published : Sep 2, 2023, 4:24 PM IST

ಬಿಹಾರ(ಆಂಧ್ರಪ್ರದೇಶ): ಕೇಂದ್ರ ಸರ್ಕಾರ ಜಾರಿ ಮಾಡಲು ಉದ್ದೇಶಿಸಿರುವ 'ಒಂದು ದೇಶ ಒಂದೇ ಚುನಾವಣೆ' ಪ್ರಸ್ತಾವನೆಗೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದರೆ, ಎನ್​ಡಿಎ ಮೈತ್ರಿಕೂಟದ ವೈಎಸ್‌ಆರ್‌ಸಿಪಿ ಬೆಂಬಲ ನೀಡುವ ಮಾತನ್ನಾಡಿದೆ. ಒನ್​ ನೇಷನ್​, ಒನ್​ ಎಲೆಕ್ಷನ್​ನ ಸಾಧಕ- ಬಾಧಕಗಳ ಬಗ್ಗೆ ತಿಳಿಯಲು ಸರ್ಕಾರ ಸಮಿತಿ ರಚಿಸಿದೆ.

ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಮಾತನಾಡಿರುವ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು, ಮೋದಿ ಸರ್ಕಾರ ಒಂದೇ ದೇಶ ಒಂದು ಚುನಾವಣೆ ಘೋಷಣೆಗಾಗಿ ಲೋಕಸಭೆ ವಿಶೇಷ ಅಧಿವೇಶನವನ್ನು ಕರೆದಿದೆ. ಮುಂದೆ 'ಇದು ಒನ್ ನೇಷನ್ ಒನ್ ಲೀಡರ್', 'ಒನ್ ನೇಷನ್ ಒನ್ ರಿಲಿಜನ್' ಕೂಡ ಆಗಬಹುದು ಎಂದು ಆಪಾದಿಸಿದರು.

ಮುಂಬೈನಲ್ಲಿ ನಡೆದ ಇಂಡಿಯಾ ಸಭೆಯಿಂದ ಬಿಜೆಪಿ ಮತ್ತು ಅದರ ಅಂಗ ಪಕ್ಷಗಳು ಬೆದರಿವೆ. ಅದಕ್ಕಾಗಿಯೇ ಲೋಕಸಭೆ ವಿಶೇಷ ಅಧಿವೇಶನವನ್ನು ತುರ್ತಾಗಿ ಕರೆಯಲಾಗಿದೆ. ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸುತ್ತಿದೆ. ಅವಧಿಗೂ ಮುನ್ನವೇ ಚುನಾವಣೆ ನಡೆಸುವ ಬಗ್ಗೆ ಈಗಾಗಲೇ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಅದರಂತೆಯೇ ನಡೆಯುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಏಕಕಾಲಕ್ಕೆ ಚುನಾವಣೆ ಅನಗತ್ಯ: ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವುದು ಅಗತ್ಯವಿಲ್ಲ. ಕೇಂದ್ರ ಸರ್ಕಾರ ಒಂದು ದೇಶ, ಒಂದು ಚುನಾವಣೆ ಎನ್ನುತ್ತಿದೆ, ಮುಂದೆ ಒಂದು ರಾಷ್ಟ್ರ ಒಂದೇ ಧರ್ಮ, ಒಂದು ರಾಷ್ಟ್ರ ಒಂದೇ ನಾಯಕ ಎಂದರೂ ಅಚ್ಚರಿಯಿಲ್ಲ. ಬಿಜೆಪಿ ದೇಶದಲ್ಲಿ ದ್ವೇಷ ಹರಡುತ್ತಿದೆ. ನಾವು ದೇಶದ ಯುವಕರಿಗೆ ಪೆನ್ನು ಕೊಡಬೇಕು ಎಂದು ಬಯಸಿದರೆ, ಬಿಜೆಪಿ ಆಯುಧಗಳನ್ನು ನೀಡಲು ಮುಂದಾಗಿದೆ. ಈ ರೀತಿಯ ರಾಜಕೀಯ ದೇಶದಲ್ಲಿ ತರವಲ್ಲ. ವಿರೋಧ ಪಕ್ಷಗಳು ಸಂವಿಧಾನ ಉಳಿವಿನ ಮೇಲೆ ನಂಬಿಕೆ ಇಟ್ಟಿವೆ. ಸಂವಿಧಾನ ಸುರಕ್ಷಿತವಾಗಿದ್ದರೆ ದೇಶ ಸುರಕ್ಷಿತ ಎಂದು ತೇಜಸ್ವಿ ಯಾದವ್​ ಹೇಳಿದರು.

ಕೇಂದ್ರದ ಪ್ರಸ್ತಾವನೆಗೆ ವೈಎಸ್‌ಆರ್‌ಸಿಪಿ ಬೆಂಬಲ: ಇತ್ತ ಎನ್​ಡಿಎ ಕೂಟದ ಜೊತೆಗಿರುವ ಆಂಧ್ರಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ವೈಎಸ್‌ಆರ್‌ಸಿಪಿ ಕೇಂದ್ರದ ಪ್ರಸ್ತಾವನೆಯ ಪರ ಬ್ಯಾಟಿಂಗ್​ ಮಾಡಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ವಿ ವಿಜಯಸಾಯಿ ರೆಡ್ಡಿ ಮಾತನಾಡಿ. ಒಂದು ರಾಷ್ಟ್ರ, ಒಂದು ಚುನಾವಣೆ ಪ್ರಸ್ತಾವನೆ ಹಲವು ಸಕಾರಾತ್ಮಕ ಅಂಶಗಳನ್ನು ಹೊಂದಿದೆ. ಚುನಾವಣೆಯಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಉಳಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಒಂದು ರಾಷ್ಟ್ರ, ಒಂದು ಚುನಾವಣೆಯ ಪರಿಕಲ್ಪನೆಯು ಅನೇಕ ಸಕಾರಾತ್ಮಕ ಅಂಶಗಳನ್ನು ಹೊಂದಿದೆ. ಎಲ್ಲದ್ದಕ್ಕಿಂತ ಹೆಚ್ಚಾಗಿ ಹಣದ ಉಳಿತಾಯವಾಗಲಿದೆ. ಈ ಪರಿಕಲ್ಪನೆಯು ಭಾರತಕ್ಕೆ ಹೊಸದಲ್ಲ. 1967 ರವರೆಗೂ ದೇಶದಲ್ಲಿ ಏಕಕಾಲದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದಿವೆ ಎಂದು ಅವರು ಎಕ್ಸ್​​ನಲ್ಲಿ(ಹಿಂದಿನ ಟ್ವಿಟರ್​) ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಸಂಸತ್ತಿ​ನ ವಿಶೇಷ ಅಧಿವೇಶನವು ಅವಧಿ ಪೂರ್ವ ಚುನಾವಣೆ ನಿರೀಕ್ಷೆ ಹುಟ್ಟುಹಾಕಿದೆ: ನಿತೀಶ್​ ಕುಮಾರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.