ETV Bharat / bharat

ಮಧ್ಯರಾತ್ರಿ ಕುಸಿದು ಬಿದ್ದ ಮೂರು ಅಂತಸ್ತಿನ ಕಟ್ಟಡ.. ಒಬ್ಬನ ಸಾವು, ಅವಶೇಷಗಳಡಿ ಸಿಲುಕಿರುವ ಹಲವರು! - ಮುಂಬೈ ಕಟ್ಟಡ ಕುಸಿತ ಪ್ರಕರಣ

ಮಧ್ಯರಾತ್ರಿ ಮೂರು ಅಂತಸ್ತಿನ ಕಟ್ಟಡ ಕುಸಿದಿದ್ದು, ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

building collapsed in Mumbai, seriously injured in Mumbai building collapse, Mumbai building collapse case, Mumbai building collapse news, ಮುಂಬೈನಲ್ಲಿ ಕಟ್ಟಡ ಕುಸಿತ, ಮುಂಬೈ ಕಟ್ಟಡ ಕುಸಿತದಲ್ಲಿ ಹಲವರಿಗೆ ಗಂಭೀರ ಗಾಯ, ಮುಂಬೈ ಕಟ್ಟಡ ಕುಸಿತ ಪ್ರಕರಣ, ಮುಂಬೈ ಕಟ್ಟಡ ಕುಸಿತ ಸುದ್ದಿ,
ಮಧ್ಯರಾತ್ರಿ ಕುಸಿದು ಬಿದ್ದ ಮೂರು ಅಂತಸ್ತಿನ ಕಟ್ಟಡ
author img

By

Published : Jun 9, 2022, 8:14 AM IST

ಮುಂಬೈ: ಇಲ್ಲಿನ ಬಾಂದ್ರಾ ಪ್ರದೇಶದಲ್ಲಿ ಮಧ್ಯರಾತ್ರಿ 12:30ರ ಸುಮಾರಿಗೆ ಮೂರು ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದಿದೆ. ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾಂದ್ರಾದ ಶಾಸ್ತ್ರಿ ನಗರದಲ್ಲಿ ಈ ಘಟನೆ ನಡೆದಿದೆ. ಮಾಹಿತಿ ಪಡೆದ ರಕ್ಷಣಾ ಪಡೆ, 4 ಅಗ್ನಿಶಾಮಕ ದಳ, ಪೊಲೀಸರು, 1 ಆ್ಯಂಬುಲೆನ್ಸ್​ ಮತ್ತು ಎನ್‌ಎಂಸಿ ತಂಡವು ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯ ಆರಂಭವಿಸಿವೆ. ಮಧ್ಯರಾತ್ರಿ ಮನೆ ಕುಸಿದು ಬಿದ್ದು ಅವಘಡ ಸಂಭವಿಸಿದೆ.

ಘಟನೆಯಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಸುಮಾರು 16ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಮುಂಬೈ ಪೊಲೀಸ್ ಡಿಸಿಪಿ ಮಂಜುನಾಥ್ ಸಿಂಗ್ ತಿಳಿಸಿದ್ದಾರೆ.

ಓದಿ: ಬಸ್​ ದುರಂತದ ರಕ್ಷಣಾ ಕಾರ್ಯ ಅಂತ್ಯ, 26 ಮಂದಿ ಸಾವು; ಗಾಯಾಳುಗಳ ಭೇಟಿಯಾದ ಮಧ್ಯಪ್ರದೇಶ, ಉತ್ತರಾಖಂಡ ಸಿಎಂ

3 ರಿಂದ 4 ಮಂದಿ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ ಎಂದು ಬಿಎಂಸಿ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.