ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) : ರಾಷ್ಟ್ರಾದ್ಯಂತ ಮುಸ್ಲಿಂ ಬಾಂಧವರು ಈದ್ ಉಲ್ ಫಿತರ್ ಅನ್ನು ಅತ್ಯಂತ ಸಂಭ್ರಮ ಮತ್ತು ಉತ್ಸಾಹದಿಂದ ಆಚರಿಸುತ್ತಿದ್ದಾರೆ. ಈ ಹಬ್ಬವು ಒಂದು ತಿಂಗಳ ಪವಿತ್ರ ರಂಜಾನ್ ಆಚರಣೆ ಅಂತ್ಯವನ್ನು ಸೂಚಿಸುತ್ತದೆ. ಆದರೆ ಶ್ರೀನಗರದ ಐತಿಹಾಸಿಕ ಜಾಮಿಯಾ ಮಸೀದಿಯಲ್ಲಿ ಮಾತ್ರ ಮೌನ ಆವರಿಸಿದೆ. ಕಳೆದ ನಾಲ್ಕು ವರ್ಷಗಳಿಂದ ಈ ಮಸೀದಿಯಲ್ಲಿ ಈದ್ ನಮಾಜ್ ಮಾಡಿಲ್ಲ.
ಹೌದು, ಆಡಳಿತ ಮಂಡಳಿಯು ನಿಗದಿತ ಸಮಯದಲ್ಲಿ ನಮಾಜ್ ಮಾಡುವುದನ್ನು ನಿಷೇಧಿಸಿರುವುದರಿಂದ ಈ ವರ್ಷವೂ ಪ್ರಾರ್ಥನೆ ನಡೆಯಲಿಲ್ಲ ಎಂದು ಮಸೀದಿ ಆಡಳಿತ ಸಮಿತಿಯ ಸದಸ್ಯರು ಹೇಳಿದ್ದಾರೆ. "ಇಂದು ಆಡಳಿತ ಮಂಡಳಿಯು ನಿಗದಿತ ಸಮಯಕ್ಕೆ ಬದಲಾಗಿ 7:30 ಕ್ಕೆ ಪ್ರಾರ್ಥನೆ ನಡೆಸಲು ಅವಕಾಶ ನೀಡಬೇಕೆಂದು ಮನವಿ ಮಾಡಲಾಗಿತ್ತು. ಆದರೆ, ನಮ್ಮ ಮನವಿಗಳ ಹೊರತಾಗಿಯೂ ಅವರು ಪ್ರಾರ್ಥನೆ ಮಾಡಲು ನಿರಾಕರಿಸಿದರು. ಪರಿಣಾಮವಾಗಿ ಈ ಬಾರಿ ಸಹ ಐತಿಹಾಸಿಕ ಮಸೀದಿಯಲ್ಲಿ ಪ್ರಾರ್ಥನೆಯನ್ನು ಮುಂದೂಡಲಾಯಿತು" ಎಂದು ಹೇಳಿದರು.
ಇನ್ನು ಜಾಮಿಯಾ ಮಸೀದಿ ಹೊರತುಪಡಿಸಿ ಜಮ್ಮು ಮತ್ತು ಕಾಶ್ಮೀರದ ಇತರ ಸ್ಥಳೀಯ ಮಸೀದಿಗಳಲ್ಲಿ ಈದ್ ಉಲ್ ಫಿತರ್ ಪ್ರಾರ್ಥನೆಗಳು ಸುಗಮವಾಗಿ ನಡೆದವು. ಈ ವೇಳೆ ಮುಸ್ಲಿಮರು ಕಾಶ್ಮೀರ ಕಣಿವೆಯ ಶಾಂತಿ, ಭದ್ರತೆ, ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದರು. ಶ್ರೀನಗರ ಸೇರಿದಂತೆ ಕಣಿವೆಯ ಇತರ ಜಿಲ್ಲೆಗಳ ಸಣ್ಣ ಮತ್ತು ದೊಡ್ಡ ಮಸೀದಿಗಳಲ್ಲಿ ಇಂದು ಪ್ರಾರ್ಥನೆ ಸಲ್ಲಿಕೆ ಮಾಡಲಾಯಿತು. ಜೊತೆಗೆ, ಕಾಶ್ಮೀರ ಕಣಿವೆಯ ದರ್ಗಾ ಹಜರತ್ ಬಾಲ್‌ನಲ್ಲಿ ಅತಿದೊಡ್ಡ ಈದ್ ಪ್ರಾರ್ಥನೆ ಕೂಟವು ನಡೆಯಲಿದೆ.
ಇದನ್ನೂ ಓದಿ : ದೇಶಾದ್ಯಂತ ಈದ್ ಉಲ್ ಫಿತರ್ ಸಂಭ್ರಮ: ಪ್ರಧಾನಿ ಮೋದಿ ಶುಭ ಕೋರಿಕೆ
ಈದ್ ಉಲ್ ಫಿತರ್ ಬಗ್ಗೆ : ಇದು ಒಂದು ಪ್ರಮುಖ ಇಸ್ಲಾಮಿಕ್ ಹಬ್ಬವಾಗಿದ್ದು, ಇದನ್ನು ಪವಿತ್ರ ರಂಜಾನ್ ತಿಂಗಳ ಕೊನೆಯಲ್ಲಿ ವಿಶ್ವಾದ್ಯಂತ ಮುಸ್ಲಿಮರು ಆಚರಿಸುತ್ತಾರೆ. ಈದ್ ಉಲ್ ಫಿತರ್ ದಿನಾಂಕವನ್ನ ಅಮಾವಾಸ್ಯೆ ಚಂದಿರನ ದರ್ಶನದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಮತ್ತು ಇದು ಇಸ್ಲಾಮಿಕ್ ತಿಂಗಳ ಶಾವ್ವಾಲ್‌ನ ಮೊದಲ ದಿನದಂದು ಬರುತ್ತದೆ. ಈ ಬಾರಿ ಅಂದರೆ 2023 ರ ಈದ್ ಅನ್ನು ಕೆಲವೆಡೆ ನಿನ್ನೆ ಆಚರಿಸಿದ್ದಾರೆ. ಭಾರತ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಇಂದು ಆಚರಿಸಲಾಗುತ್ತಿದೆ.
ಇದನ್ನೂ ಓದಿ : ಭಟ್ಕಳ ರಂಜಾನ್ ಮಾರ್ಕೆಟ್ನಲ್ಲಿ ಭರ್ಜರಿ ವ್ಯಾಪಾರ
ಈ ಹಬ್ಬದ ಸಮಯದಲ್ಲಿ ಮುಸ್ಲಿಮರು ವಿಶಿಷ್ಟವಾಗಿ ಬೆಳಗ್ಗೆಯೇ ವಿಶೇಷ ಪ್ರಾರ್ಥನೆ ಸಲ್ಲಿಸಲು ಮಸೀದಿಗೆ ಹಾಜರಾಗುತ್ತಾರೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಈ ಹಬ್ಬವು ಕ್ಷಮೆ, ದಾನ ಮತ್ತು ಸಮುದಾಯದೊಳಗಿನ ಸಂಬಂಧಗಳನ್ನು ಬಲಪಡಿಸುತ್ತದೆ.
ಇದನ್ನೂ ಓದಿ : ಚಿತ್ರರಂಗದಲ್ಲಿ ರಂಜಾನ್ ಸಂಭ್ರಮ: ಸಲ್ಮಾನ್, ಅಮೀರ್ರಿಂದ ಹಬ್ಬದ ಶುಭಾಶಯ