ETV Bharat / bharat

Valmiki Jayanti : ಎಐಸಿಸಿ ಕೇಂದ್ರ ಕಚೇರಿಯಿಂದ ಶೋಭಾ ಯಾತ್ರೆ, ವಾಲ್ಮೀಕಿ ಸಮುದಾಯ ಓಲೈಸಲು ರಾಗಾ ತಂತ್ರ!?

ಇಂದು ಸಂವಿಧಾನ ಮತ್ತು ವಾಲ್ಮೀಕಿ ಅವರ ಸಿದ್ಧಾಂತದ ಮೇಲೆ ದಾಳಿ ಮಾಡಲಾಗುತ್ತಿದೆ. ಇದು ಎಲ್ಲರಿಗೂ ಗೋಚರಿಸುತ್ತಿದೆ. ನಮ್ಮ ದಲಿತ ಸಹೋದರ-ಸಹೋದರಿಯರ ಮೇಲೆ ದೌರ್ಜನ್ಯಗಳನ್ನು ಮಾಡಲಾಗುತ್ತಿದೆ. ಆದರೆ, ನಿಮ್ಮೆಲ್ಲರಿಗೂ ಒಂದು ಸಂದೇಶ ನೀಡಲು ನಾನು ಇಲ್ಲಿದ್ದೇನೆ. ಕಾಂಗ್ರೆಸ್ ಪಕ್ಷವು ಇದನ್ನು ಅನುಮತಿಸುವುದಿಲ್ಲ..

ವಾಲ್ಮೀಕಿ ಜಯಂತಿ ಆಚರಣೆ
ವಾಲ್ಮೀಕಿ ಜಯಂತಿ ಆಚರಣೆ
author img

By

Published : Oct 20, 2021, 9:03 PM IST

Updated : Oct 20, 2021, 10:41 PM IST

ನವದೆಹಲಿ : ಮುಂದಿನ ವರ್ಷ ನಡೆಯಲಿರುವ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಮುನ್ನ ವಾಲ್ಮೀಕಿ ಸಮುದಾಯವನ್ನು ಓಲೈಸುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ವಾಲ್ಮೀಕಿ ಜಯಂತಿಯಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಕೇಂದ್ರ ಕಚೇರಿಯಿಂದ ಶೋಭಾ ಯಾತ್ರೆಯನ್ನು ಆರಂಭಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜನರನ್ನು ಅವರು ಅಭಿನಂದಿಸಿದರು. ಇದೇ ವೇಳೆ ಮಹರ್ಷಿ ವಾಲ್ಮೀಕಿ ಹೇಗೆ ಬದುಕಬೇಕೆಂದು ಕಲಿಸಿದ್ದಾರೆ. ಭಾರತೀಯ ಸಮಾಜಕ್ಕೆ ಅವರ ಕೊಡುಗೆ ಅಮೂಲ್ಯವಾದುದು ಎಂದು ಹೇಳಿದರು.

ಎಐಸಿಸಿ ಕೇಂದ್ರ ಕಚೇರಿಯಿಂದ ಶೋಭಾ ಯಾತ್ರೆ

ಇಂದು ಸಂವಿಧಾನ ಮತ್ತು ವಾಲ್ಮೀಕಿ ಅವರ ಸಿದ್ಧಾಂತದ ಮೇಲೆ ದಾಳಿ ಮಾಡಲಾಗುತ್ತಿದೆ. ಇದು ಎಲ್ಲರಿಗೂ ಗೋಚರಿಸುತ್ತಿದೆ. ನಮ್ಮ ದಲಿತ ಸಹೋದರ-ಸಹೋದರಿಯರ ಮೇಲೆ ದೌರ್ಜನ್ಯಗಳನ್ನು ಮಾಡಲಾಗುತ್ತಿದೆ. ಆದರೆ, ನಿಮ್ಮೆಲ್ಲರಿಗೂ ಒಂದು ಸಂದೇಶ ನೀಡಲು ನಾನು ಇಲ್ಲಿದ್ದೇನೆ. ಕಾಂಗ್ರೆಸ್ ಪಕ್ಷವು ಇದನ್ನು ಅನುಮತಿಸುವುದಿಲ್ಲ ಎಂದು ರಾಹುಲ್​ ಕಾರ್ಯಕ್ರಮದಲ್ಲಿ ಹೇಳಿದರು.

ಕೇವಲ 10 ರಿಂದ 15 ಜನರು ಮಾತ್ರ ದೇಶವನ್ನು ನಡೆಸುತ್ತಿದ್ದಾರೆ. ಆದರೆ, ನಮ್ಮ ದೇಶದಲ್ಲಿ ಲಕ್ಷ ಮತ್ತು ಕೋಟಿ ಸಂಖ್ಯೆಯಲ್ಲಿರುವ ದಲಿತರ ಮೇಲೆ ದಾಳಿ ಮಾಡಲಾಗುತ್ತಿದೆ. ಈ ಜನರು ಎಷ್ಟೇ ದ್ವೇಷವನ್ನು ಸೃಷ್ಟಿಸಲು ಪ್ರಯತ್ನಿಸಿದರೂ, ನಾವು ದೇಶದಲ್ಲಿ ಪ್ರೀತಿಯನ್ನು ಹರಡುತ್ತೇವೆ ಎಂದು ಹೇಳಿದರು.

Last Updated : Oct 20, 2021, 10:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.