ETV Bharat / bharat

ವಿದೇಶಿ ರಾಯಾಭಾರಿಗಳಿಗೆ ಬಿಜೆಪಿಯ ಇತಿಹಾಸ, ಸಿದ್ಧಾಂತ ವಿಶ್ಲೇಷಿಸಿದ ಜೆ ಪಿ ನಡ್ಡಾ

author img

By

Published : Apr 7, 2022, 12:53 PM IST

ಬಿಜೆಪಿ ಪ್ರಧಾನ ಕಚೇರಿಯಲ್ಲಿ 3 ಗಂಟೆಗಳ ಕಾಲವಿದ್ದ ವಿದೇಶಿ ರಾಯಭಾರಿಗಳು ಸುಮಾರು 90 ನಿಮಿಷ ಸಂವಾದದಲ್ಲಿ ಭಾಗವಹಿಸಿದ್ದರು. ಈ ಸಂವಾದ ಬಿಜೆಪಿಯನ್ನು ತಿಳಿಯಿರಿ ಅಭಿಯಾನದ ಭಾಗವಾಗಿರುವುದರಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ವಿದೇಶಿ ರಾಯಭಾರಿಗಳಿಗೆ ಬಿಜೆಪಿಯ, ಇತಿಹಾಸ, ಸಿದ್ಧಾಂತ ಮತ್ತು ತತ್ವಗಳು, ಅದರ ದೂರದೃಷ್ಟಿ ಮತ್ತು ಚುನಾವಣಾ ಹೋರಾಟಗಳು ಮತ್ತು ಯಶಸ್ಸಿನ ಬಗ್ಗೆ ವಿವರಿಸಿದರು.

BJP National President Jagat Prakash Nadda
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ಬುಧವಾರ ಪಕ್ಷದ ಪ್ರಧಾನ ಕಚೇರಿಯಲ್ಲಿ ಯುರೋಪಿಯನ್ ಯೂನಿಯನ್ ಸೇರಿದಂತೆ 13 ದೇಶಗಳ ಮಿಷನ್‌ಗಳ ಮುಖ್ಯಸ್ಥರೊಂದಿಗೆ ಸಂವಾದ ನಡೆಸಿದ್ದಾರೆ. ಸಭೆಯ ನಂತರ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ವಿಯೆಟ್ನಾಂನ ಭಾರತದ ರಾಯಭಾರಿ ಫಾಮ್ ಸಾನ್ಹ್ ಚೌ, ಪಕ್ಷದ ಬಗ್ಗೆ ಅತ್ಯುತ್ತಮವಾಗಿ ವಿವರಿಸಲಾಗಿದ್ದು, ನಾವು ವ್ಯವಸ್ಥೆಯ ಬಗ್ಗೆ ಸಾಕಷ್ಟು ಕಲಿಯಲಿದ್ದೇವೆ ಎಂದು ಪ್ರಸಂಸೆಯ ಮಾತನ್ನಾಡಿದ್ದಾರೆ.

ಬಿಜೆಪಿ ಸಂಸ್ಥಾಪನಾ ದಿನದಂದು 'ಬಿಜೆಪಿಯನ್ನು ತಿಳಿಯಿರಿ' ಅಭಿಯಾನಕ್ಕೆ ಚಾಲನೆ ನೀಡಿ, ಜನಸಂಘ ಮತ್ತು ಭಾರತೀಯ ಜನತಾ ಪಕ್ಷದ ಪ್ರಯಾಣವನ್ನು ಚಿತ್ರಿಸುವ ಸಾಕ್ಷ್ಯಚಿತ್ರವನ್ನು ವಿದೇಶಿ ರಾಯಭಾರಿಗಳಿಗೆ ತೋರಿಸಲಾಯಿತು. ಈ ಸಂವಾದ ಬಿಜೆಪಿಯನ್ನು ತಿಳಿಯಿರಿ ಅಭಿಯಾನದ ಭಾಗವಾಗಿರುವುದರಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ವಿದೇಶಿ ರಾಯಭಾರಿಗಳಿಗೆ ಬಿಜೆಪಿಯ, ಇತಿಹಾಸ, ಸಿದ್ಧಾಂತ ಮತ್ತು ತತ್ವಗಳು, ಅದರ ದೂರದೃಷ್ಟಿ ಮತ್ತು ಚುನಾವಣಾ ಹೋರಾಟಗಳು ಮತ್ತು ಯಶಸ್ಸಿನ ಬಗ್ಗೆ ವಿವರಿಸಿದರು.

ಬಿಜೆಪಿ ಪ್ರಧಾನ ಕಚೇರಿಯಲ್ಲಿ 3 ಗಂಟೆಗಳ ಕಾಲವಿದ್ದ ವಿದೇಶಿ ರಾಯಭಾರಿಗಳು ಸುಮಾರು 90 ನಿಮಿಷ ಸಂವಾದದಲ್ಲಿ ಭಾಗವಹಿಸಿದ್ದರು. ಸಿಂಗಾಪುರದ ರಾಯಭಾರಿ ಸೈಮನ್​ ವಾಂಗ್​ ಸಭೆಯ ಆಯೋಜನೆ ಬಗ್ಗೆ, 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ರೊಮೇನಿಯಾದ ರಾಯಭಾರಿ ಇಂತಹ ಕಾರ್ಯಕ್ರಮ ಇದು ಮೊದಲನೆಯದು ಮತ್ತು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದರು.

ಪಕ್ಷದ ವಿದೇಶಾಂಗ ವಿಭಾಗದ ಉಸ್ತುವಾರಿ ಡಾ.ವಿಜಯ್ ಚೌತೈವಾಲಾ ಅವರು ಬಿಜೆಪಿ ಪ್ರಧಾನ ಕಚೇರಿಗೆ ವಿದೇಶಿ ರಾಯಭಾರಿಗಳನ್ನು ಸ್ವಾಗತಿಸಿದರು. ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ವಿಜಯಂತ್ ಜೈ ಪಾಂಡಾ ಅವರು ಬಿಜೆಪಿಯ ಬೆಳವಣಿಗೆ ಮತ್ತು ಪಕ್ಷದ ಸಿದ್ಧಾಂತದ ಬಗ್ಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಎಂಟು ವರ್ಷಗಳ ಅಧಿಕಾರಾವಧಿಯಲ್ಲಿ ಭಾರತದ ಅಭಿವೃದ್ಧಿಯ ಪಯಣದ ಜೊತೆಗೆ ಪಕ್ಷದ ಸಿದ್ಧಾಂತ ಮತ್ತು ಕಾರ್ಯಕ್ರಮಗಳ ಬಗ್ಗೆ ವಿದೇಶಿ ರಾಯಭಾರಿಗಳಿಗೆ ತಿಳಿಸುವುದು 'ಬಿಜೆಪಿಯನ್ನು ತಿಳಿಯಿರಿ' ಅಭಿಯಾನದ ಹಿಂದಿನ ಆಲೋಚನೆಯಾಗಿದೆ ಎಂದರು.

ಮಾಧ್ಯಮಗಳಿಗೆ ಮಾಹಿತಿ ನೀಡಿದ ಚೌತೈವಾಲಾ, ಇಂದು ಬಿಜೆಪಿ ಸಂಸ್ಥಾಪನಾ ದಿನದ ಹಿನ್ನೆಲೆ ‘ಬಿಜೆಪಿಯನ್ನು ತಿಳಿಯಿರಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ವಿದೇಶದಲ್ಲಿರುವ ಜನರು ಬಿಜೆಪಿಯ ಇತಿಹಾಸ ತಿಳಿದುಕೊಳ್ಳುವ ಆಶಯ ವ್ಯಕ್ತಪಡಿಸಿದ್ದರು. ಪ್ರತಿನಿಧಿಗಳು ಪಕ್ಷದ ಇತ್ತೀಚಿನ ಗೆಲುವಿನ ಬಗ್ಗೆಯೂ ಪ್ರಶ್ನೆಗಳನ್ನು ಮಾಡಿದ್ದಾರೆ. ನಾವು ಈ ರೀತಿಯ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಮಾಡುತ್ತಲೇ ಇರುತ್ತೇವೆ. ಹೈಕಮಿಷನರ್‌ ಮತ್ತು ರಾಯಭಾರಿಗಳಿಂದಲೂ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ ಎಂದು ಹೇಳಿದರು.

ಇದನ್ನೂ ಓದಿ: ಕಾರ್ಯಕಾರಿಣಿ ನಂತರ ಸಂಪುಟ ವಿಸ್ತರಣೆ: ಸಿಎಂ ಬೊಮ್ಮಾಯಿ

ಸಂವಾದದ ಸಮಯದಲ್ಲಿ, ಹಲವಾರು ಮಿಷನ್‌ಗಳ ಮುಖ್ಯಸ್ಥರು ನರೇಂದ್ರ ಮೋದಿ ಸರ್ಕಾರದ ಬಡವರ ಪರವಾದ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಮತ್ತು ಅವುಗಳ ಪರಿಣಾಮಕಾರಿ ಅನುಷ್ಠಾನವನ್ನು ಶ್ಲಾಘಿಸಿದ್ದಾರೆ. ಬಿಜೆಪಿ ಅತ್ಯಂತ ಕೆಳಮಟ್ಟದಿಂದ ದೊಡ್ಡ ಯಶಸ್ಸಿನವರೆಗೆ ಹಲವು ಮೈಲಿಗಲ್ಲುಗಳನ್ನು ದಾಟಿದೆ. ಬಿಜೆಪಿ ತನ್ನ 42ನೇ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದ್ದು, 1951ರಲ್ಲಿ ಜನಸಂಘದ ರಚನೆಯೊಂದಿಗೆ ನಮ್ಮ ಪ್ರಯಾಣ ಪ್ರಾರಂಭಿಸಿತ್ತು ಎಂದು ನಡ್ಡಾ ವಿವರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.