ETV Bharat / bharat

22nd Kargil Vijay Diwas: ಕಾರ್ಗಿಲ್​ ವೀರ ಯೋಧರಿಗೆ ಪ್ರಧಾನಿ ಸೇರಿ ಗಣ್ಯರಿಂದ ಗೌರವ! - ಪ್ರಧಾನಿ ಮೋದಿ ಟ್ವೀಟ್

ಕಾರ್ಗಿಲ್​ ವಿಜಯೋತ್ಸವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿ ಹಲವರು ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ್ದಾರೆ. ಅಲ್ಲದೇ, ಯುದ್ಧದಲ್ಲಿ ಹೋರಾಡಿದವರಿಗೆ ಗೌರವ ಸಮರ್ಪಿಸಿದ್ದಾರೆ.

Kargil Vijay Diwas
Kargil Vijay Diwas
author img

By

Published : Jul 26, 2021, 11:09 AM IST

ನವದೆಹಲಿ: 22 ನೇ ಕಾರ್ಗಿಲ್​ ವಿಜಯೋತ್ಸವ ಹಿನ್ನೆಲೆ, ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಇಂದು ಬಾರಾಮುಲ್ಲಾ ಯುದ್ಧ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದ್ದಾರೆ. ಯುದ್ಧದ ಸಮಯದಲ್ಲಿ ಸಶಸ್ತ್ರ ಪಡೆಗಳ ಅದಮ್ಯ ಧೈರ್ಯ ಮತ್ತು ತ್ಯಾಗದ ಗೌರವಾರ್ಥವಾಗಿ ರಾಷ್ಟ್ರಪತಿ ಕೋವಿಂದ್ ಮಾಲಾರ್ಪಣೆ ಮಾಡಿದ್ದಾರೆ ಎಂದು ಭಾರತೀಯ ಸೇನಾಧಿಕಾರಿಗಳು ತಿಳಿಸಿದ್ದಾರೆ.

ಕಾರ್ಗಿಲ್​ ವೀರ ಯೋಧರಿಗೆ ಪ್ರಧಾನಿ ಸೇರಿ ಗಣ್ಯರಿಂದ ಗೌರವ!

‘ನಿಮ್ಮ ತ್ಯಾಗವನ್ನು ನಾವೆಂದಿಗೂ ಮರೆಯಲ್ಲ’

ಕಾರ್ಗಿಲ್​ ಯುದ್ಧದಲ್ಲಿ ಹೋರಾಡಿದ ಯೋಧರಿಗೆ ಪ್ರಧಾನಿ ಮೋದಿ ಗೌರವ ಸಲ್ಲಿಸಿದ್ದಾರೆ. ಭಾರತೀಯ ಯೋಧರ ತ್ಯಾಗ, ಶೌರ್ಯ ನೆನೆಪಿಸಿಕೊಂಡಿರುವ ನಮೋ, ಅವರ ತ್ಯಾಗವನ್ನು ನಾವೆಂದಿಗೂ ಮರೆಯುವುದಿಲ್ಲ. ಅವರ ಶೌರ್ಯವನ್ನು ಭಾರತ ಎಂದೆಂದೂ ನೆನಪಿನಲ್ಲಿಡಲಿದೆ. ಯೋಧರ ಧೈರ್ಯ ನಮ್ಮನ್ನು ನಿತ್ಯವೂ ಪ್ರೇರೇಪಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

  • We remember their sacrifices.

    We remember their valour.

    Today, on Kargil Vijay Diwas we pay homage to all those who lost their lives in Kargil protecting our nation. Their bravery motivates us every single day.

    Also sharing an excerpt from last year’s ’Mann Ki Baat.’ pic.twitter.com/jC42es8OLz

    — Narendra Modi (@narendramodi) July 26, 2021 " class="align-text-top noRightClick twitterSection" data=" ">

ನಿನ್ನೆಯ ಮನ್​ಕಿ ಬಾತ್​ನಲ್ಲಿ ಮೋದಿ, ರಾಷ್ಟ್ರವೇ ಹೆಮ್ಮೆ ಪಡುವ ಧೈರ್ಯಶಾಲಿ ಹೃದಯಗಳಿಗೆ ನಾಳೆ (ಜನವರಿ 26, ಅಂದರೆ ಇಂದು) ನಮಸ್ಕರಿಸುವಂತೆ ಜನತೆಗೆ ಕೋರಿದ್ದರು. ದೇಶ ಭಕ್ತಿಯ ಈ ಭಾವನೆ ನಮ್ಮೆಲ್ಲರನ್ನೂ ಒಗ್ಗೂಡಿಸುತ್ತದೆ. ಕಾರ್ಗಿಲ್​ ವಿಜಯ್​ ದಿವಸ್​​ ನಮ್ಮ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಶಿಸ್ತಿನ ಸಂಕೇತ. ಇದನ್ನು ಇಡೀ ಜಗತ್ತೇ ಕಂಡಿದೆ. ಈ ಅದ್ಭುತ ದಿನವನ್ನು ಎಲ್ಲರೂ ಆಚರಿಸಿ, ಕಾರ್ಗಿಲ್​ ವೀರರಿಗೆ ನಮಸ್ಕರಿಸಿ ಎಂದು ಕರೆ ನೀಡಿದ್ದರು.

ಉಪರಾಷ್ಟ್ರಪತಿಯಿಂದ ನಮನ

1999 ರ ಯುದ್ಧದಲ್ಲಿ ಹೋರಾಡಿದ ಯೋಧರನ್ನು ನೆನಪು ಮಾಡಿಕೊಂಡಿರುವ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು, ವೀರ ಯೋಧರಿಗೆ ನಮನ ಸಲ್ಲಿಸಿದ್ದಾರೆ. ಹುತಾತ್ಮರ ತ್ಯಾಗಕ್ಕೆ ನಮ್ಮ ಗೌರವ ಸಲ್ಲಿಸುತ್ತೇನೆ. ರಾಷ್ಟ್ರವು ಯೋಧರ ಮತ್ತು ಅವರ ಕುಟುಂಬಗಳಿಗೆ ಕೃತಜ್ಞರಾಗಿರಬೇಕು ಎಂದು ಉಪಾಧ್ಯಕ್ಷ ಸಚಿವಾಲಯ ಟ್ವೀಟ್ ಮಾಡಿದೆ.

  • On Kargil Vijay Diwas, I join the nation in remembering our armed forces' saga of valour & gallantry. I salute the heroes of the Kargil War & Operation Vijay & pay my respectful homage to the martyrs for their supreme sacrifice. #KargilVijayDiwas

    — Vice President of India (@VPSecretariat) July 26, 2021 " class="align-text-top noRightClick twitterSection" data=" ">

‘ಪ್ರತಿಯೊಬ್ಬರನ್ನೂ ದೇಶ ನೆನಪು ಮಾಡಿಕೊಳ್ಳುತ್ತದೆ’

ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಬಲಿಕೊಟ್ಟ ಪ್ರತಿಯೊಬ್ಬರನ್ನೂ ದೇಶ ನೆನಪು ಮಾಡಿಕೊಳ್ಳುತ್ತದೆ, ನಿಮ್ಮ ಮತ್ತು ನಿಮ್ಮ ಕುಟುಂಬದ ತ್ಯಾಗವನ್ನು ನಾವೆಂದೂ ಮರೆಯಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಯುದ್ಧ ಸ್ಮಾರಕಕ್ಕೆ ಗೌರವ

ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ರಾಜ್ಯ ಸಚಿವ ಅಜಯ್ ಭಟ್, ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ, ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಆರ್.ಕೆ.ಎಸ್ ಭದೌರಿಯಾ, ನೌಕಾಪಡೆಯ ಉಪಾಧ್ಯಕ್ಷ ವೈಸ್ ಅಡ್ಮಿರಲ್ ಜಿ ಅಶೋಕ್ ಕುಮಾರ್, ಮತ್ತು ಸಿಐಎಸ್​​ಸಿ ವೈಸ್ ಅಡ್ಮಿರಲ್ ಅತುಲ್ ಜೈನ್ ಗೌರವ ಸಲ್ಲಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.