ETV Bharat / bharat

ಪರೀಕ್ಷೆ ತೆಗೆದುಕೊಳ್ಳದೇ ಐಎಎಸ್​ ಪಾಸಾಗಿರುವ ಟೀಕೆ.. ಲೋಕಸಭಾ ಸ್ಪೀಕರ್​ ಪುತ್ರಿ ತಿರುಗೇಟು!

author img

By

Published : Jan 22, 2021, 4:19 AM IST

Updated : Jan 22, 2021, 6:09 AM IST

ಪರೀಕ್ಷೆಗೆ ಹಾಜರಾಗದೇ ತಂದೆಯ ಪ್ರಭಾವ ಬಳಸಿಕೊಂಡು ಅಂಜಲಿ ಬಿರ್ಲಾ ಐಎಎಸ್​​ ಪಾಸ್ ಮಾಡಿದ್ದಾರೆ ಎಂಬ ಟೀಕೆಗೆ ತಿರುಗೇಟು ನೀಡಿದ್ದಾರೆ.

Om Birla's Daughter Anjali birla
Om Birla's Daughter Anjali birla

ನವದೆಹಲಿ: ನಾಗರಿಕ ಸೇವಾ ಆಯೋಗದ ಪರೀಕ್ಷೆಗೆ ಹಾಜರಾಗದೇ ಉತ್ತೀರ್ಣರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಲೋಕಸಭಾ ಸ್ಫೀಕರ್​ ಓಂ ಬಿರ್ಲಾ ಪುತ್ರಿ ಅಂಜಲಿ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದು, ಅದಕ್ಕೆ ಖುದ್ದಾಗಿ ಅಂಜಲಿ ಬಿರ್ಲಾ ತಿರುಗೇಟು ನೀಡಿದ್ದಾರೆ.

Om Birla's Daughter Anjali birla
ಲೋಕಸಭಾ ಸ್ಪೀಕರ್​ ಪುತ್ರಿ ಅಂಜಲಿ ತಿರುಗೇಟು

ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುವುದನ್ನ ತಡೆಯಲು ಒಂದು ಕಾನೂನು ಜಾರಿಗೊಳಿಸಬೇಕು ಎಂದಿರುವ ಅವರು, ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವುದರಿಂದ ಅನೇಕರು ಸಂತ್ರಸ್ತರಾಗಬಹುದು ಎಂದು ತಿಳಿಸಿದ್ದಾರೆ.

ಓದಿ: ದೇಶಾದ್ಯಂತ 6 ದಿನದಲ್ಲಿ 9.99 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ

23 ವರ್ಷದ ಅಂಜಲಿ ಬಿರ್ಲಾ ಇದೇ ವರ್ಷ ಮೊದಲ ಪ್ರಯತ್ನದಲ್ಲಿ ನಾಗರಿಕ ಸೇವಾ ಪರೀಕ್ಷೆ ಪಾಸ್​ ಮಾಡಿದ್ದರು. ತಂದೆ ಓಂ ಬಿರ್ಲಾ ಪ್ರಭಾವ ಬಳಸಿಕೊಂಡು ಯಾವುದೇ ಪರೀಕ್ಷೆಗೆ ಹಾಜರಾಗದೇ ಅವರು ಪಾಸ್ ಆಗಿ ಹುದ್ದೆ ಪಡೆದುಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿದಾಡಿದ್ದವು.

ನಾನು ಪ್ರತಿದಿನ 8 ಗಂಟೆಗಳ ಕಾಲ ಓದಿ ಪರೀಕ್ಷೆಯಲ್ಲಿ ಪಾಸ್​ ಆಗಿದ್ದೇನೆ.ಆಧಾರರಹಿತ ಟೀಕೆಗಳಿಂದ ನನಗೆ ನೋವಾಗಿದೆ. ಆದರೆ ಇಂತಹ ಆರೋಪಗಳು ನನ್ನನ್ನು ಇನ್ನಷ್ಟು ಗಟ್ಟಿ ಮಾಡಿವೆ. ನಾನು ಯಾವಾಗಲೂ ಪ್ರಾಮಾಣಿಕಳಾಗಿದ್ದೇನೆ ಎಂದಿದ್ದಾರೆ.

Last Updated : Jan 22, 2021, 6:09 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.